ಬೆಂಗಳೂರು: ಅಂಬರೀಶ್ ಅವರನ್ನ ಮತ್ತೆ ಕಾಂಗ್ರೆಸ್ ಕರೆತಂದದ್ದು ಕೃಷ್ಣರವರೇ ಎಂದು ಮಾಜಿ ಸಂಸದೆ, ನಟಿ ಸುಮಲತಾ ಹೇಳಿದ್ದಾರೆ. ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ನಮ್ಮ ಕರ್ನಾಟಕ ಕಂಡಂತಹ ಅತ್ಯಂತ ಶ್ರೇಷ್ಠ ರಾಜಕಾರಣಿ ಆಗಿದ್ದರು. ರಾಜ್ಯದ ರಾಜಕಾರಣದಲ್ಲಿ ಸಭ್ಯತೆ, ಸಂಸ್ಕಾರ ಕಲಿಸಿದವರು. ಮಂಡ್ಯದ ಹೆಮ್ಮೆಯ ಸುಪುತ್ರ ಆಗಿದ್ದರು. ಎಸ್.ಎಂ ಕೃಷ್ಣರವರು ಡಿಗ್ನಿಫೈಡ್ ರಾಜಕಾರಣಿ ಆಗಿದ್ದರು. ಇನ್ನೂ ಎಂದೂ ಇಂತಹ ರಾಜಕೀಯ ವ್ಯಕ್ತಿಯನ್ನು ನೋಡಲು ಆಗೋದಿಲ್ಲ.
Mutual Fund: ಈ ಮ್ಯೂಚುವಲ್ ಫಂಡ್ʼನಲ್ಲಿ ದಿನಕ್ಕೆ ಜಸ್ಟ್ 50 ರೂಪಾಯಿ ಹೂಡಿಕೆ ಮಾಡಿ 30 ಲಕ್ಷ ಗಳಿಸಿ.!
ಬೆಂಗಳೂರು ನಂ.1 ಅನ್ನುವ ಹೆಸರು ಗಳಿಸಲು ಅವರು ಮಾಡಿದ್ದ ಕೀರ್ತಿ ಅಪಾರವಾಗಿತ್ತು. ಆಧುನಿಕರಣ ಜನಪರ ಕಾಳಜಿ ಎಂದಿಗೂ ಮರೆಯಬಾರದು. ಎಸ್ಎಂಕೆ ರಾಜ್ಯಕ್ಕೆ ಘನತೆ, ಗೌರವ ತಂದು ಕೊಟ್ಟವರು. ಅಂದು ಅಂಬರೀಶ್ ಅವರನ್ನ ಮತ್ತೆ ಕಾಂಗ್ರೆಸ್ ಕರೆತಂದದ್ದು ಕೃಷ್ಣರವರೇ. ನಾನು ಕೂಡ ಮೊದಲು ಅವರ ಅಶೀರ್ವಾದ ಪಡೆದು ನಂತರ ರಾಜಕೀಯಕ್ಕೆ ಬಂದೆ ಎಂದರು. ನಮ್ಮ ರಾಜ್ಯದಲ್ಲಿ ಡಿಗ್ನಿಫೈಡ್ ರಾಜಕಾರಣವನ್ನು ತೂಗಿಸಿಕೊಂಡು ಬಂದಿದ್ದಾರೆ ಎಂದರೆ ಅದು ಸಾಮಾನ್ಯ ವಿಷಯವಲ್ಲ ಎಂದು ಹೇಳಿದ್ದಾರೆ.