ದಾವಣಗೆರೆ:- ನಗರದ ಎಸ್ಎಸ್ ಲೇಔಟ್ ನಲ್ಲಿ ಚೆನ್ನಾಗಿ ಓದು ಎಂದಿದ್ದಕ್ಕೆ 13 ವರ್ಷದ ಬಾಲಕ ಮನೆಬಿಟ್ಟು ಎಸ್ಕೇಪ್ ಆದ ಘಟನೆ ಜರುಗಿದೆ.
13 ವರ್ಷದ ಸಾತ್ವಿಕ್ ಮನೆ ಬಿಟ್ಟ ಹೋಗಿದ್ದಾನೆ. SSNPS ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಸಾತ್ವಿಕ್ಗೆ ತಂದೆ ಚೆನ್ನಾಗಿ ಓದಿಕೋ ಎಂದಿದ್ದಾರಂತೆ. ಇಷ್ಟಕ್ಕೆ ಸಾತ್ವಿಕ್ ಮನೆಬಿಟ್ಟು ಹೋಗಿದ್ದಾನೆ. ಫೆಬ್ರವರಿ 6ಕ್ಕೆ ಮನೆ ಬಿಟ್ಟು ಓಡಿ ಹೋಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆ ರೇಲ್ವೆ ನಿಲ್ದಾಣದಲ್ಲಿ ಟಿಕೆಟ್ ಪಡೆದು ಹುಬ್ಬಳ್ಳಿ ಟ್ರೈನ್ ಹತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಂದೆ ಹುಬ್ಬಳ್ಳಿಗೆ ತೆರಳಿ ಗಲ್ಲಿ ಗಲ್ಲಿಗಳಲ್ಲಿ ಹುಡುಕಾಡುತ್ತಿದ್ದಾರೆ.
ಸಾತ್ವಿಕ್ ಮನೆ ಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊದಲಿಗೆ ಸಾತ್ವಿಕ್ ಮನೆಯಿಂದ ನೇರವಾಗಿ ದಾವಣಗೆರೆ ರೈಲ್ವೇ ನಿಲ್ದಾಣ ಆಗಮಿಸಿ ಟಿಕೆಟ್ ಪಡೆದು ಹುಬ್ಬಳ್ಳಿ ರೈಲು ಹತ್ತಿದ್ದಾನೆ. ದಾವಣಗೆರೆ ರೇಲ್ವೆ ನಿಲ್ದಾಣ, ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸೇರಿದಂತೆ ಕೆಲ ಬೇರೆ ಸ್ಥಳದಲ್ಲಿನ ಚಲನವಲನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ತಂದೆ ಹನುಮಂತ, ಹುಬ್ಬಳ್ಳಿಯಲ್ಲಿ ಮಗನಿಗಾಗಿ ಗಲ್ಲಿ ಗಲ್ಲಿಗಳಲ್ಲಿ ಹುಡುಕಾಡುತ್ತಿದ್ದಾರೆ.