ನವದೆಹಲಿ:-ಇತ್ತೀಚಿನ ದಿನಗಳಲ್ಲಿ ಲವ್ ಬ್ರೇಕಪ್ ಪ್ರಕರಣಗಳು ಹೆಚ್ಚಾಗುತ್ತಿದೆ. ಅಲ್ಲದೇ ಲವ್ ಮಾಡುವಾಗ ಚೆನ್ನಾಗಿ ಇದ್ದು, ಆಮೇಲೆ ವರಸೆ ಬದಲಿಸುತ್ತಾರೆ.
ಆಮೇಲೆ ಸಂಗಾತಿಗಳ ಮೇಲೆ ಬಿರುಕು ಉಂಟಾಗಿ ಕೋರ್ಟ್ ಮೆಟ್ಟಿಲೇರುತ್ತಾರೆ. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಮಹತ್ವದ ತೀರ್ಪು ಒಂದನ್ನು ನೀಡಿದೆ.
ಬ್ರೇಕ್ ಅಪ್ ಆದಾಕ್ಷಣ ಸಂಗಾತಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವುದು ತಪ್ಪು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ಪ್ರಶಾಂತ್ ವಿರುದ್ಧ ಯುವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಗೆಳತಿ ನೀಡಿದ ದೂರಿನ ಮೇರೆಗೆ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದ ವ್ಯಕ್ತಿಗೆ ರಿಲೀಫ್ ಕೊಟ್ಟಿದ್ದಾರೆ.
ಇಬ್ಬರ ನಡುವೆ ಸಂಬಂಧ ಮೊದಲು ಚೆನ್ನಾಗಿಯೇ ಇತ್ತು, ಅದೇ ಬ್ರೇಕ್ ಅಪ್ ಬಳಿಕ ಆತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದು ತಪ್ಪು.
ಆರೋಪಿ ಮತ್ತು ದೂರುದಾರರಿಬ್ಬರೂ ದೆಹಲಿಯಲ್ಲಿ ವಾಸವಿದ್ದು, ಕಳೆದ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಪೀಠ ಗಮನಿಸಿದೆ. 2019 ರಲ್ಲಿ ಆಕೆಯನ್ನು ಮದುವೆಯಾಗಲು ವ್ಯಕ್ತಿ ನಿರಾಕರಿಸಿದಾಗ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಇಬ್ಬರೂ ವಿದ್ಯಾವಂತರಾಗಿದ್ದು, ಆರಂಭದಲ್ಲಿ ಮದುವೆಯಾಗಲು ಆಲೋಚಿಸಿದ್ದರು. ನಂತರ ಅವರ ದಾರಿ ಬೇರೆಯಾಗಿತ್ತು. 2019ರ ವೇಳೆ ಇಬ್ಬರೂ ಬೇರೆ ಬೇರೆಯವರನ್ನು ಮದುವೆಯಾಗಿದ್ದರು. ಇದಾದ ಬಳಿಕ ಮಹಿಳೆ ವ್ಯಕ್ತಿಯ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಸಂಬಂಧದ ಪ್ರಾರಂಭದಲ್ಲಿ ಆರೋಪಿಯು ಮದುವೆಯ ಸುಳ್ಳು ಭರವಸೆಯನ್ನು ನೀಡಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿದೆ.