ದಾವಣಗೆರೆ :- ಲೋಕಸಭಾ ಟಿಕೆಟ್ ಮಿಸ್ ಆಗಿರುವ ಹಿನ್ನೆಲೆ ರೇಣುಕಾಚಾರ್ಯ ಬೇಸರ ಹೊರ ಹಾಕಿದ್ದು, ಯಡಿಯೂರಪ್ಪ ಜೊತೆಗಿನ ಮುನಿಸಿನ ಬಗ್ಗೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ತನ್ನ ಮತ್ತು ಸಿದ್ದೇಶ್ವರ ಪರ ನಡೆದ ಎರಡು ಸರ್ವೇಗಳನ್ನು ವರಿಷ್ಠರು ನೋಡಿದ್ದಾರೆ, ರೇಣುಕಾಚಾರ್ಯನೇ ಪರ್ಯಾಯ ಅಭ್ಯರ್ಥಿ ಎಂದು ಖುದ್ದು ಸಿದ್ದೇಶ್ವರ್ ಹೇಳಿದ್ದಾರೆ, ನಂತರ ರಾಷ್ಟ್ರೀಯ ನಾಯಕರಿಗೆ ತಪ್ಪು ಮಾಹಿತಿ ನೀಡಿ ತನ್ನ ಪತ್ನಿಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.
ಆರ್ಥಿಕವಾಗಿ ಸದೃಢರಾಗಿರುವ ಕಾರಣ ಅವರ ದರ್ಬಾರು ನಡೆಯಬೇಕೇ? ಪತ್ರಿಕಾ ಗೋಷ್ಟಿಯನ್ನು ನಡೆಸಿ ಪಕ್ಷದ ಕಾರ್ಯಕರ್ತನನ್ನು ಮಂಗ್ಯಾ ಅನ್ನುತ್ತಾರೆ ಮತ್ತು ತನ್ನನ್ನು ಹಲ್ಕಟ್ ಅಂತಾರೆ, ಇಂಥ ಗೂಂಡಾಗಿರಿಯೆಲ್ಲ ತಮ್ಮ ಮೇಲೆ ನಡೆಯಲ್ಲ, ತಮಗೂ ಅದು ಮಾಡೋದು ಗೊತ್ತು ಎಂದು ಹೇಳಿದ ರೇಣುಕಾಚಾರ್ಯ ಚಿಕ್ಕಂದಿನಿಂದ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದೇವೆ ಮತ್ತು ಬೆವರು ಹರಿಸಿದ್ದೇವೆ ಎಂದು ಹೇಳಿದರು. ಯಡಿಯೂರಪ್ಪನವರ ಜೊತೆ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳಿದ್ದಿದ್ದು ನಿಜ, ಅದನ್ನು ಬಗೆ ಹರಿಸಿಕೊಂಡಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದರು.