ಹೆಸರು, ಅಂತಸ್ತು ಬಂದ ಮೇಲೆ ಕೊಹ್ಲಿ ಬದಲಾಗಿದ್ದು ನಿಜ ಎಂದು ಮಾಜಿ ಆಟಗಾರ ಬೇಸರ ಹೊರ ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಮಿತ್ ಮಿಶ್ರಾ, ನೇಮು-ಫೇಮು ಬಂದ್ಮೇಲೆ ಕೊಹ್ಲಿ ಬದಲಾಗಿದ್ದಾರೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ನನಗೆ ವಿರಾಟ್ ಕೊಹ್ಲಿ ಆರಂಭದಿಂದಲೂ ಗೊತ್ತು. ಆದರೆ ಅಂದು ಇದ್ದಂತಹ ಕೊಹ್ಲಿ ಈಗಿಲ್ಲ. ಹಣ ಅಂತಸ್ತು ಬಂದ ಮೇಲೆ ಅವರು ಸಂಪೂರ್ಣ ಬದಲಾಗಿದ್ದಾರೆ. ನಮ್ಮಿಬ್ಬರ ನಡುವೆ ಮಾತುಕತೆ ಕೂಡ ನಿಂತಿದೆ. ಮೊದಲಿದ್ದಂತೆ ಅವರು ಈಗಿಲ್ಲ. ಇದಕ್ಕೆಲ್ಲಾ ಕಾರಣ ನೇಮು-ಫೇಮು ಅಂದಿದ್ದಾರೆ.
Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಮುಂದುವರೆಯಲಿದೆ ವರುಣನ ಅಬ್ಬರ!
ನಿಮಗೆಲ್ಲಾ ಗೊತ್ತಿರುವಂತೆ ನಾನು ವಿರಾಟ್ ಕೊಹ್ಲಿ ತುಂಬಾ ಆಪ್ತರಾಗಿದ್ದೆವು. ಆತನೊಂದಿಗೆ ನಾನು ಪಿಝ್ಝ, ಸಮೋಸಾ ಎಲ್ಲಾ ತಿಂದಿರುವೆ. ಆಗಿದ್ದ ಚೀಕುಗೂ (ಕೊಹ್ಲಿ) ಈಗಿನ ವಿರಾಟ್ ಕೊಹ್ಲಿಗೂ ತುಂಬಾ ವ್ಯತ್ಯಾಸವಿದೆ. ಇವೆಲ್ಲವೂ ಖ್ಯಾತಿ ಮತ್ತು ಅಧಿಕಾರ ಬಂದ್ಮೇಲೆ ಆದ ಬದಲಾವಣೆ ಎಂದು ಅಮಿತ್ ಮಿಶ್ರಾ ಹೇಳಿದ್ದಾರೆ.
ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಕೂಡ ಇದೇ ಮಾದರಿಯ ಹೇಳಿಕೆ ನೀಡಿದ್ದರು. ನಾನೀಗ ವಿರಾಟ್ ಕೊಹ್ಲಿ ಜೊತೆ ಸಂಪರ್ಕದಲ್ಲಿಲ್ಲ. ಚೀಕು ಮತ್ತು ವಿರಾಟ್ ಕೊಹ್ಲಿ ನಡುವೆ ತುಂಬಾ ವ್ಯತ್ಯಾಸವಿದೆ. ಅವರು ಬದಲಾಗಿದ್ದಾರೆ. ಹೀಗಾಗಿ ನಾನು ಅವರಿಗೆ ಕರೆ ಮಾಡಿ ತೊಂದರೆ ಕೊಡಲು ಬಯಸುವುದಿಲ್ಲ ಎಂದು ಯುವರಾಜ್ ಸಿಂಗ್ ಹೇಳಿದ್ದರು.
ಇದೀಗ ಅಮಿತ್ ಮಿಶ್ರಾ ಕೂಡ ಇದೇ ಮಾದರಿಯ ಹೇಳಿಕೆ ನೀಡಿದ್ದು, ಖ್ಯಾತಿ, ಅಧಿಕಾರ, ಹಣ ಅಂತಸ್ತು ಬಂದ ಮೇಲೆ ವಿರಾಟ್ ಕೊಹ್ಲಿ ಬದಲಾಗಿದ್ದಾರೆ ಎಂದಿದ್ದಾರೆ.