ಚೆನ್ನೈ ಸೂಪರ್ ಕಿಂಗ್ಸ್ ಅಂಪೈರ್ಗಳನ್ನೇ ಫಿಕ್ಸ್ ಮಾಡಿಕೊಳ್ಳುತ್ತಿದ್ದದ್ದು ನಿಜ ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.
DCM ಡಿಕೆಶಿ ಬೆನ್ನಲ್ಲೇ ಇಂದು ದೆಹಲಿಯತ್ತ ಸಿಎಂ ಸಿದ್ದರಾಮಯ್ಯ! ಹೈಕಮಾಂಡ್ ಜತೆ ಮಹತ್ವದ ಚರ್ಚೆ?
ಈ ಬಗ್ಗೆ ಮಾತನಾಡಿದ ಲಲಿತ್ ಮೋದಿ, ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್ ಶ್ರೀನಿವಾಸನ್ ಅವರು ಸಿಎಸ್ಕೆ ಪಂದ್ಯಗಳಿಗೆ ಚೆನ್ನೈ ಮೂಲದ ಅಂಪೈರ್ಗಳನ್ನು ನೇಮಿಸುತ್ತಿದ್ದರು. ಮೊದಲು ನಾನು
ಈ ಬಗ್ಗೆ ಗಮನ ಹರಿಸಿರಲಿಲ್ಲ. ಆದರೆ ಸಿಎಸ್ಕೆ ಪಂದ್ಯಗಳಿಗೆಲ್ಲಾ ಚೈನ್ನೈನ ಅಂಪೈರ್ಗಳೇ ಇರುತ್ತಿದ್ದರು. ಇದನ್ನು ಅಂಪೈರ್ ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ.
ಸಿಎಸ್ಕೆ ಪರ ತೀರ್ಪು ಬರಲೆಂದು ತಮಗೆ ಬೇಕಾದ ಅಂಪೈರ್ಗಳನ್ನು ನೇಮಿಸುತ್ತಿದ್ದರು. ಈ ಮೂಲಕ ಫಿಕ್ಸಿಂಗ್ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂತು. ಈ ವಿಷಯವನ್ನು ಬಹಿರಂಗಪಡಿಸಲು ನಾನು ಪ್ರಯತ್ನಿಸಿದೆ. ಈ ವೇಳೆ ಅವರು ನನ್ನ ವಿರುದ್ಧ ನಿಂತರು. ಅಂದು ಎನ್ ಶ್ರೀನಿವಾಸನ್ ಅವರು ಬಿಸಿಸಿಐ ಕಾರ್ಯದರ್ಶಿಯಾಗಿದ್ದರು.
ನಾನು ಸಿಎಸ್ಕೆ ಫ್ರಾಂಚೈಸಿಯ ಕಳ್ಳಾಟವನ್ನು ಬೆಳಕಿಗೆ ತಂದಿದ್ದರಿಂದ ಅವರು ನನ್ನ ಕಡು ವಿರೋಧಿಯಾದರು. ಹೀಗಾಗಿ ನನ್ನ ವಿರುದ್ಧ ಭ್ರಷ್ಟಚಾರದ ಅರೋಪಳನ್ನು ಹೊರಿಸಿದರು. ಈಗಲೂ ಖಚಿತವಾಗಿ ಹೇಳಬಲ್ಲೆ ಚೆನ್ನೈ ಸೂಪರ್ ಕಿಂಗ್ಸ್ ಅಂಪೈರ್ಗಳನ್ನೇ ಫಿಕ್ಸ್ ಮಾಡಿಕೊಳ್ಳುತ್ತಿದ್ದು ನಿಜ ಎಂದಿದ್ದಾರೆ.