ವಿಜಯಪುರ:– ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಕಾಣುವುದು ಸರ್ಕಾರದ ಕರ್ತವ್ಯ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಹನುಮಾನ್ ಚಾಲಿಸಾ ಹಾಕಿ ಹಲ್ಲೆಗೊಳಗಾದ ಮುಖೇಶ್ ಮೇಲೆ ಕೇಸ್ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ
ಸರ್ಕಾರ ಒಂದು ಕೋಮಿನ ಅಥವಾ ಗುಂಪಿನ ಸ್ವತ್ತಲ್ಲ. ಸರ್ಕಾರ ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಕಾಣಬೇಕು. ಇದು ಅಧಿಕಾರದಲ್ಲಿದ್ದವರ ಕರ್ತವ್ಯವಾಗಿದೆ ಎಂದರು.
ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಮತ್ತೊಂದು ದೂರು ದಾಖಲಿಸಿದ ದಿನೇಶ್ ಗುಂಡೂರಾವ್ ಪತ್ನಿ!
ಸರ್ಕಾರ ದುಷ್ಕೃತ್ಯಗಳಿಗೆ ಕೈ ಹಾಕಬಾರದು. ಎಲ್ಲಾ ಸಮಾಜಗಳನ್ನು ಒಟ್ಟಾಗಿ ಕೊಂಡೊಯ್ಯುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ
ರಾಮನವಮಿ ದಿನದಂದು ಅಯೋಧ್ಯೆಗೆ ಭಕ್ತರು ಬರಬೇಡಿ. ತಮ್ಮ ತಮ್ಮ ಊರುಗಳಲ್ಲಿ ರಾಮನವಮಿ ಆಚರಿಸಿ. ಆ ದಿನ ಅಯೋಧ್ಯೆಗೆ ಭಕ್ತರು ಬಂದಲ್ಲಿ ದರ್ಶನಕ್ಕೆ ತೊಂದರೆಯಾಗಲಿದೆ. ತಮ್ಮ ಊರಿನ ಮಂದಿರ, ಮನೆಗಳಲ್ಲೇ ರಾಮನವಮಿ ಆಚರಿಸಿ ಎಂದು ಶ್ರೀಗಳು ಸಲಹೆ ಕೊಟ್ಟಿದ್ದಾರೆ.