ಚಾಮರಾಜನಗರ:- ದಂಗೆ, ಗಲಭೆ ಮಾಡುವವರು ಬಿಜೆಪಿ ವರೆತೂ ಕಾಂಗ್ರೆಸ್ ಅಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ದಂಗೆ ಆಗಲಿ ಎನ್ನುವವರೇ ಬಿಜೆಪಿಯವರು, ಕೋಮು ಗಲಭೆ ಬಯಸುವವರು ಬಿಜೆಪಿಯವರು, ಇಬ್ಬರು-ಮೂರು ಜನ ಸತ್ತರೆ ರಾಜಕೀಯ ಲಾಭ ಸಿಗಲಿದೆ ಎಂದು ಯೋಚಿಸುವವರೇ ಬಿಜೆಪಿಯವರು, ಇದೇ ಬಿಜೆಪಿಯವರ ಸ್ರ್ಟಾಟಜಿ ಎಂದು ಹಿಜಾಬ್ ವಿಚಾರದಲ್ಲಿ ದಂಗೆ ಆಗಲಿದೆ ಎಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ಕೊಟ್ಟರು.
ಹಿಜಾಬ್ ನಿಷೇಧದ ಆದೇಶ ಹಿಂಪಡೆಯುವದರ ಬಗ್ಗೆ ಅವರು ಮಾತನಾಡಿ,ಇದು ಜಾತ್ಯಾತೀತ ರಾಷ್ಟ್ರ ಎಲ್ರಿಗೂ ಗೌರವದಿಂದ ಕರೆದು ಕೊಂಡು ಹೋಗುವ ಅವಕಾಶ ಮಾಡಿ ಕೊಡಬೇಕು, ವಾತಾವರಣವನ್ನ ಹಾಳು ಮಾಡುವುದಕ್ಕೆ ಚಕ್ರವರ್ತಿ ಸೂಲಿಬೆಲೆ ಅಂತ ವ್ಯಕ್ತಿಗಳಿದ್ದಾರೆ, ಇಷ್ಟು ವರ್ಷ ಇಲ್ದೆ ಇರೋ ವಿಚಾರಗಳು ಈಗ ಯಾಕೆ ತಲೆ ಎತ್ತುತ್ತಿವೆ, ಈ ವಿಚಾರವನ್ನ ಬೆಳೆಸಲು ಹೋದ್ರೆ ಅವರಿಗೂ ಕೂಡ ಒಳ್ಳೆದಾಗಲ್ಲ ಎಂದು ಕಿಡಿಕಾರಿದರು. ಇದೇ ವೇಳೆ, ಚಾಮರಾಜನಗರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 8 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ, ಕನಿಷ್ಠ ಮೂರು ಹೆಸರುಗಳನ್ನು ಕಳುಹಿಸಿಕೊಡುವಂತೆ ಹೈಕಮಾಂಡ್ ತಿಳಿಸಿದ್ದು ಎಲ್ಲವನ್ನೂ ಪರಾಮರ್ಶಿಸಿ ಪಟ್ಟಿಯನ್ನು ಕಳುಹಿಸಲಾಗುವುದು ಎಂದರು. ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿ, ಯಾವುದನ್ನು ನಿರ್ಬಂಧ ಮಾಡಿಲ್ಲ, ಗಡಿಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇವೆ, ಜನರು ಆತಂಕ ಪಡಬಾರದು, ಮುನ್ನೆಚ್ಚರಿಕೆಯಿಂದ ಇರಬೇಕು ಎಂದರು.