ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯದಲ್ಲಿ ದೊಡ್ಡ ಸಂಚನಲ ಸೃಷ್ಠಿಸಿತ್ತು. ಕಾರಣ ಕೊಲೆ ಆರೋಪ ಸ್ಯಾಂಡಲ್ವುಡ್ನ ದೊಡ್ಡ ಸ್ಟಾರ್ ನಟ ದರ್ಶನ್ ಅವರ ಮೇಲಿತ್ತು ಹೀಗಾಗಿ ಈ ಕೇಸ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಸದ್ಯ ಈ ಪ್ರಕರಣ ಮತ್ತೊಂದು ದೊಡ್ಡ ಸಾಕ್ಷ್ಯ ಸಿಕ್ಕಿದ್ದು ದರ್ಶನ್ಗೆ ದೊಡ್ಡ ಕಂಟಕ ಎದುರಾಗುವುದು ಪಕ್ಕಾ ಆಗಿದೆ. ಪೊಲೀಸರು ಕಳಿಸಿದ್ದ ಎಫ್ಎಸ್ಎಲ್ ವರದಿ ಹೊರಬಿದ್ದಿದ್ದು. ದರ್ಶನ್ ಬಟ್ಟೆ ಮೇಲೆ ಇದ್ದ ರಕ್ತದ ಕಲೆಯು ಕೊಲೆಯಾದ ರೇಣುಕಾಸ್ವಾಮಿ ದೇಹದ ರಕ್ತದ ಕಲೆಗಳಾಗಿವೆ ಎಂದು FSL ವರದಿಯಿಂದ ದೃಢಪಟ್ಟಿದೆ.
ಪೊಲೀಸರು ದರ್ಶನ್ ಮನೆಯಲ್ಲಿ ವಶಪಡಿಸಿಕೊಂಡಿದ್ದ ನೀಲಿ ಬಣ್ಣ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ರೌಂಡ್ ನೆಕ್ ಟಿ-ಶರ್ಟ್ ಅನ್ನ FSLಗೆ ಕಳಿಸಿದ್ದರು. ತನಿಖೆಯಲ್ಲಿ ಬಟ್ಟೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಭಾಗಿಯಾಗಿದ್ದರು ಎಂಬುದುಕ್ಕೆ ಅತ್ಯಂತ ಮಹತ್ವ ಪೂರ್ಣ ಸಾಕ್ಷ್ಯ ಸಿಕ್ಕಿದೆ
ಈಗ ದರ್ಶನ್ ವಿರುದ್ಧ ಇನ್ನೊಂದು ಮಹತ್ವದ ಸಾಕ್ಷಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ವರದಿಯಲ್ಲಿ ಒಂದು ಭಯಾನಕ ಸತ್ಯ ಬಹಿರಂಗ ಆಗಿದೆ. ಪ್ರಕರಣ ನಡೆದ ದಿನ ದರ್ಶನ್ ಧರಿಸಿದ್ದ ಬಟ್ಟೆಗಳ ಮೇಲೆ ರೇಣುಕಾ ಸ್ವಾಮಿ ದೇಹದ ರಕ್ತದ ಕಲೆಗಳು ಇರುವುದು ಧೃಡಪಟ್ಟಿದೆ. ಇದರಿಂದ ದರ್ಶನ್ಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದೆ.