ಕೋಲಾರ: ಈ ದೇಶದಲ್ಲಿ ರೈತರನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಈ ದೇಶದಲ್ಲಿ ರೈತರು ಇಲ್ಲದೆ ಇದ್ದರೆ ನಮಗೆ ಊಟ ಸಿಗುವುದಿಲ್ಲ ರೈತರಿಗೆ ಮೋಸ ಮಾಡುವುದು ಬಿಜೆಪಿಯವರು ಎಂದು ಕೋಲಾರ ಶಾಸಕರಾದ ಡಾ ಕೊತ್ತೂರು ಮಂಜುನಾಥ್ ಅವ್ರು ಹೇಳಿದ್ರು. ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವ್ರು, ಸ್ವಾತಂತ್ರ್ಯ ಬಂದಾಗಿನಿಂದಲು ಕಾಂಗ್ರೆಸ್ ಪಕ್ಷ ರೈತರನ್ನು ಕಾಪಾಡಿ ಬಂದಿದೆ 2014 ರಿಂದ ಬಿಜೆಪಿ ಸರ್ಕಾರ ಬಂದಿದೆ.
ಅಲ್ಲಿಯವರೆಗೆ ಭಾರತ ಯಾವತ್ತಾದರು ಕಷ್ಟ ಕಾಲದಲ್ಲಿ ಸಿಕ್ಕಿಹಾಕಿಕೊಂಡಿತ್ತಾ ದುಡ್ಡು ಇಲ್ಲದೆ ಇತ್ತಾ ಅಕ್ಕಿ ಇಲ್ಲದೆ ಇತ್ತಾ ಎಲ್ಲವು ಸಹ ನಡೆದುಕೊಂಡು ಬರತ್ತಾ ಇದೆ. ಕೇಂದ್ರ ಸರ್ಕಾರದಿಂದ ಎನ್ ಡಿ ಆರ್ ಎಫ್ ಅನುದಾನ ಬಂದಿಲ್ಲ ಕಾಂಗ್ರೆಸ್ ಸರ್ಕಾರದಲ್ಲಿ ದುಡ್ಡು ಇಲ್ಲ ಎಂದು ಬಿಜೆಪಿ ಯವರು ದಾಖಲೆಯನ್ನು ಬಿಡುಗಡೆ ಮಾಡಿದ್ದಾರಾ ಬಾಯಿಗೆ ಬಂದಂತೆ ಮಾತನಾಡೊದು ಗಾಳಿಗೆ ಹೇಳಿದಂತೆ ಹೇಳಿಬಿಟ್ಟು ಹೋಗುವುದು ಬಿಜೆಪಿಯವರು ಹೇಳುವು ಮಾತುಗಳು ನೀರಿನ ಮೇಲೆ ಬರೆಯುವುದು ಎರಡು ಒಂದೇ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ರು.
ಕೋಲಾರ ಜಿಲ್ಲೆಯ ಎಲ್ಲಾ ತಾಲೂಕಿಮ ರೈತರಿಗೆ ತಲಾ ಎರಡು ಸಾವಿರ ಬರ ಪರಿಹಾರ ಹಷ ಬಿಡುಗಡೆ ಮಾಡಲಾಗಿದೆ ಬರ ನಿರ್ವಹಣೆಗೆ ಟಾಸ್ಕ್ ಪೋರ್ಸ ಸಿದ್ದವಿದ್ದು ಹಣ ಸಹ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ ಹಸುಗಳಿಗೆ ಮೇವಿಗಾಗಿ ಪಕ್ಕದ ಆಂಧ್ರ ಪ್ರದೇಶದಲ್ಲಿ ಹಲವು ಜಿಲ್ಲೆಗಳಲ್ಲಿ ಮಾತುಕತೆಯು ಸಹ ನಡೆಸಲಾಗಿದೆ ಅಹತ್ಯ ಬಿದ್ದಲ್ಲಿ ತಕ್ಷಣ ಗೋಶಾಲೆಗಳನ್ನು ತೆರೆದು ಮೇವು ತರಿಸಿಕೊಳ್ಳುವ ಎಲ್ಲಾ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ರು.