ಶಿವಮೊಗ್ಗ:- ಪ್ರತಾಪ್ನಂತಹ ದೇಶಭಕ್ತನನ್ನು ಶಂಕಿಸುವುದು ಕಾಂಗ್ರೆಸ್ಗೆ ಮಾತ್ರ ಸಾಧ್ಯ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಪ್ರತಾಪ್ ಸಿಂಹನಂಥ ದೇಶಭಕ್ತ, ಹಿಂದುತ್ವವಾದಿಯನ್ನು ಶಂಕಿಸುವುದು ಕಾಂಗ್ರೆಸ್ಗೆ ಮಾತ್ರ ಸಾಧ್ಯ ಎಂದು ಕಿಡಿಕಾರಿದ್ದಾರೆ. ಭಾರೀ ಭದ್ರತೆಯ ಹೊರತಾಗಿಯೂ ಕಿಡಿಗೇಡಿಗಳು ಸಂಸತತ್ಇನ ಒಳಗೆ ನುಗ್ಗಿದ್ದು ಆಘಾತಕಾರಿ ಮತ್ತು ಮನಸ್ಸಿಗೆ ನೋವನ್ನುಂಟು ಮಾಡುವ ಸಂಗತಿಯಾಗಿದೆ.
ಬಂಧಿತ ಆರೋಪಿಗಳಿಗೆ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದಿರುವ ಬಗ್ಗೆ ಕೇಳಿದಾಗ, ಅಚಾತುರತ್ಯ ನಡೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಪ್ರಥಮ ಅಧಿವೇಶನದ ವೇಳೆ ವ್ಯಕ್ತಿಯೊಬ್ಬರು ಶಾಸಕರ ಆಸನದಲ್ಲಿ ಬಂದು ಕುಳಿತಿದ್ದರು ಅದು ಭದ್ರತಾ ಲೋಪವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ನಾಯಕರು ತನಿಖೆಗೆ ಆಗ್ರಹಿಸಿದ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ ಅವರಿಗೆ ಮಾಡಲು ಬೇರೆ ಉದ್ಯೋಗವಿಲ್ಲ, ಪ್ರತಾಪ್ ಸಿಂಹನಂಥ ದೇಶಭಕ್ತ ಮತ್ತು ಹಿಂದೂತ್ವವಾದಿಯ ಮೇಲೆ ಶಂಕೆ ಪಡೋದು, ಖಂಡಿಸೋದು ಕೇವಲ ಕಾಂಗ್ರೆಸ್ಸಿಗರಿಗೆ ಮಾತ್ರ ಸಾಧ್ಯ ಎಂದರು.