ಬೆಂಗಳೂರು: ಕೆ.ಆರ್.ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಡುವುದು ಸರಿಯಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಕೃಷ್ಣರಾಜಸಾಗರ ಅಣೆಕಟ್ಟನ್ನು ನೀಡಿದ ಮನೆತನದವರ ಹೆಸರನ್ನು ತೆಗೆದು ಮೈಸೂರಿನಲ್ಲಿ ಕೆ.ಆರ್.ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡುಸುವ ಪ್ರಸ್ತಾವ ಒಳ್ಳೆಯ ಬೆಳವಣಿಗೆಯಲ್ಲ.
Toe Ring: ವಿವಾಹಿತ ಮಹಿಳೆಯರೇ ಗಮನಿಸಿ.. ಯಾವುದೇ ಕಾರಣಕ್ಕೂ ಈ ರೀತಿಯ ಕಾಲುಂಗುರ ಹಾಕಬಾರದು!
ಹಾಗೇನಾದರೂ ಹೆಸರಿಡಬೇಕು ಎಂದಿದ್ದರೆ ಹೊಸ ರಸ್ತೆ ನಿರ್ಮಿಸಿ ಅವರ ಹೆಸರು ಅಥವಾ ಅವರ ಕುಟುಂಬದವರ ಹೆಸರನ್ನಿಡಲಿ. ಸಿಎಂ ಇಂತಹ ಕೆಲಸಕ್ಕೆ ಕೈ ಹಾಕುತ್ತಾರೆಂದರೆ ಜನರಿಗೆ ಅವರ ಬಗ್ಗೆ ಇರುವ ಭಾವನೆ ಬದಲಾಗುತ್ತದೆ ’’ ಎಂದು ಎಚ್ಚರಿಸಿದರು.
ಇನ್ನೂ ರೈತರಿಗೆ 1,500 ಕೋಟಿ ರೂ. ಸಬ್ಸಿಡಿಗೆ ಸರಕಾರ ನಾಮ ಹಾಕಿದೆ. ಪ್ರಸಕ್ತ ವರ್ಷದಲ್ಲಿ1.50 ಲಕ್ಷ ಕೋಟಿ ರೂ. ಸಾಲ ಪಡೆಯುತ್ತಿದೆ. ಮುಂದಿನ ವರ್ಷವೂ ಸಿಎಂ ಸಿದ್ದರಾಮಯ್ಯ ಅವರು 2 ಲಕ್ಷ ಕೋಟಿ ರೂ. ಸಾಲ ಮಾಡಿದರೆ ರ್ನಾಟಕ ಇನ್ನೆಂದೂ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ. ನಾಮ ಹಾಕುವುದರಲ್ಲಿ ಕಾಂಗ್ರೆಸ್ಸಿಗರು ಪಳಗಿದವರು ಎಂದು ಕಿಡಿ ಕಾರಿದರು.