ಬೆಂಗಳೂರು: ಅಧಿಕಾರಿಗಳೇ ಮುಡಾ ಅಕ್ರಮದಲ್ಲಿ ರಕ್ಷಣೆಗೆ ಮುಂದಾಗಿರುವುದು ಸರಿಯಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಡಾ ಕಚೇರಿಯಿಂದ ಐಎಎಸ್ ಅಧಿಕಾರಿ 144 ಫೈಲುಗಳನ್ನು ತೆಗೆದುಕೊಂಡು ಹೋಗಿರುವ ವಿಚಾರವಗಿ, ಈ ವಿಚಾರ ನಮಗೆ ದಿಗ್ಭ್ರಮೆ ಮೂಡಿಸಿದೆ. ಬೈರತಿ ಸುರೇಶ್ ಅವರು ಎಷ್ಟು ಫೈಲ್ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಗೊತ್ತಿಲ್ಲ.
ಅದಕ್ಕೂ ಮುಂಚೆ ಐಎಎಸ್ ಅಧಿಕಾರಿಯೊಬ್ಬರು ಮುಡಾ ಫೈಲ್ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಅಂದರೆ ರಾಜ್ಯದಲ್ಲಿ ಆಡಳಿತ ಯಾವ ಮಟ್ಟಕ್ಕೆ ಬಂದಿದೆ? ಅಧಿಕಾರಿಗಳೇ ಮುಡಾ ಅಕ್ರಮದಲ್ಲಿ ರಕ್ಷಣೆಗೆ ಮುಂದಾಗಿರುವುದು ಸರಿಯಲ್ಲ. ಈ ಪ್ರಕರಣ ಸಿಬಿಐಗೆ ತನಿಖೆಗೆ ಕೊಡಬೇಕು ಎಂದು ಆಗ್ರಹಿಸುತ್ತೇನೆ. ಮುಡಾ ಅಕ್ರಮ ಈ ರಾಜ್ಯ ಕಂಡ ದೊಡ್ಡ ಹಗರಣ.
ರೈತರ ಗಮನಕ್ಕೆ.. ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸ ರೂಲ್ಸ್.! ಈ ಕೆಲಸ ಮಾಡದಿದ್ರೆ ಬರಲ್ಲ 19ನೇ ಕಂತಿನ ಹಣ!?
ಸಿಎಂ, ಮತ್ತವರ ಕುಟುಂಬ ಶಾಮೀಲಾಗಿದ್ದಾರೆ. 14 ಸೈಟುಗಳಷ್ಟೇ ಅಲ್ಲ ಬಡವರ ಸೈಟುಗಳನ್ನು ಕೂಡ ಲೂಟಿ ಮಾಡಲಾಗಿದೆ. ಮುಡಾದಲ್ಲಿ 3-4 ಸಾವಿರ ಕೋಟಿ ರೂ. ಅಕ್ರಮ ಆಗಿದೆ. ಐಎಎಸ್ ಅಧಿಕಾರಿಗಳು ಮಾಡಿರುವ ತಪ್ಪನ್ನು ಸರಿಪಡಿಸಲು ದಾಖಲೆ ತಿದ್ದಿರುತ್ತಾರೆ. ವೈಟ್ನರ್ ಹಾಕಿ, ದಾಖಲೆಗಳನ್ನು ಮಾಯ ಮಾಡಿರುತ್ತಾರೆ. ಇದನ್ನು ಸಿಬಿಐ ತನಿಖೆಗೆ ಒಳಪಡಿಸಿದರೆ ಆದರೆ ಇನ್ನಷ್ಟು ಹಗರಣಗಳು ಹೊರಗೆ ಬರುತ್ತದೆ ಎಂದು ತಿಳಿಸಿದರು.