ಬಾಗಲಕೋಟೆ:- ೨೦೨೪ ರ ಲೋಕಸಭೆ ಚುನಾವಣೆಯಲ್ಲಿ ಮತ್ತೋಮ್ಮೆ ಮೋದಿಯವರು ಪ್ರಧಾನಿಯಾಗುವ ಮೂಲಕ ಈ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ,
ಬಾಗಲಕೋಟೆ ಲೋಕಸಭೆ ಚುನಾವಣೆ ಸೇರಿದಂತೆ ದೇಶದಲ್ಲಿ ಕಮಲ ಅರಳುವ ಮೂಲಕ ಜಯದ ನಗೆ ಬಿರಲಿದೆ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ ಸಿ ಗದ್ದಿಗೌಡರ ಹೇಳಿದರು.
ನೀರಿನ ಪೈಪ್ ಅಳವಡಿಸೋ ವಿಚಾರಕ್ಕೆ ಸಹೋದರ ಸಂಬಂಧಿಗಳ ಜಗಳ – ಕೊಲೆಯಲ್ಲಿ ಅಂತ್ಯ!
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಶ್ರೀ ಮಾರುತೇಶ್ವರನ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಜನರು ಬೇಸತ್ತು ದ್ದಾರೆ.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಭಿವೃದ್ಧಿಯನ್ನು ಮಾಡುವುದೆ ಮರೆತಿದ್ದರೆ.
ಇದರಿಂದ ರಾಜ್ಯವು ಅಭಿವೃದ್ಧಿ ಕಾಣದೆ ಮರಿಚಿಕೆಯಾಗಿದೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜನರು ತಕ್ಕ ಪಾಠವನ್ನು ಕಲಿಸುವ ಮೂಲಕ ಭ್ರಷ್ಟ ಕಾಂಗ್ರೆಸ್ ಪಕ್ಷಕ್ಕೆ ಜನರು ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿದರು,
ಬಿಜೆಪಿಯ ಎಲ್ಲ ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಕದ ಗೆಲುವಿಗಾಗಿ ಹಗಲಿರುಳು ದುಡಿಯುವ ಮೂಲಕ ಮೊತ್ತೋಮ್ಮೆ ಮೋದಿಜೀಯವರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡೋಣವೆಂದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಜಿಲ್ಲೆ,ರಾಜ್ಯ ಹಾಗೂ ರಾಷ್ಟ್ರದಲ್ಲಿ ಮೋದಿ ಅಲೆಯಿದ್ದು ವಿರೋಧಿಗಳಿಗೆ ಈಗಲೇ ನಡುಕು ಶುರುವಾಗಿದೆ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಜಯದ ನಗೆ ಬಿರಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುಂಡಲೀಕ ಪಾಲಭಾವಿ,ಸುರೇಶ ಅಕ್ಕಿವಾಟ ಮಲ್ಲಪ್ಪ ಗಣಿ ಗೋವಿಂದ ಪಾಟೀಲ,ಗುರು ಮರಡಿಮಠ,ಆನಂದ ಕಂಪು,ಈರಪ್ಪ ವಾಲಿ,ಅಲ್ಲಪ್ಪ ಮುಗಳಖೋಡ,ಹಣಮಂತ ಸವದಿ,ಸುಭಾಸ ಕಾಂತಿ,ತುಕಾರಾಮ ಭಜಂತ್ರಿ,ಬಸಪ್ಪ ಕಂಚು,ಬಸವರಾಜ ಗಣಿ,ಈರಪ್ಪ ಕಡಕಬಾವಿ,ರಾಜು ಕದಂ ಸಿದ್ದು ಕಂಚು,ಹಣಮಂತ ನಾವಿ,ಸಿದ್ದು ಲೆಂಡಿ, ಸೇರಿದಂತೆ ಅನೇಕರು ಇದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ