ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡದೆ ಇರುವುದೇ ಒಳ್ಳೆಯದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G.Parameshwar) ಹೇಳಿದರು.
ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿಗೆ ತಿರುಗೇಟು ನೀಡಿದ ಪರಮೇಶ್ವರ್, ಕುಮಾರಸ್ವಾಮಿ ಅವರ ಬಗ್ಗೆ ಮಾತಾಡದೆ ಇರುವುದೇ ಒಳ್ಳೆಯದು. ಅವರು ಅಂತಹ ಮಾತುಗಳನ್ನ ಆಡ್ತಾರೆ. ಅವರನ್ನ ಹಾಗೇ ಬಿಟ್ಟು ಬಿಡೋದೆ ವಾಸಿ ಎಂದು ಟಾಂಗ್ ಕೊಟ್ಟರು
ಸಂಸದ ಪ್ರತಾಪ್ ಸಿಂಹ ಸಹೋದರನ ಪ್ರಕರಣ ಕುರಿತು ಮಾತನಾಡಿ, ಕಾನೂನಿದೆ. ಕಾನೂನಾತ್ಮವಾಗಿ ಮರ ಕಡಿಯಬೇಕು. ಪರ್ಮಿಶನ್ ಇಲ್ಲದೇ ಮಾಡಿದ್ದಾರೆ. ಅದಕ್ಕೆ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಇದರಲ್ಲಿ ಸಿಎಂ ಹೆಸರು ತರುವುದು ಬೇಡ. ಅನಾವಶ್ಯಕವಾಗಿ ರಾಜಕೀಯ ಬಣ್ಣ ಕೊಡ್ತಿದ್ದಾರೆ ಎಂದು ಹೇಳಿದರು.