ಗಂಗಾವತಿ:- ಸಂಸತ್ತ್ ನಲ್ಲಿ ನಡೆದ ಹೊಗೆ ಬಾಂಬ್ ಬಗ್ಗೆ ಪ್ರಧಾನಿ ಮಾತನಾಡದಿರುವುದು ದುರಂತ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಕಳೆದ ವಾರ ಲೋಕಸಭೆಯಲ್ಲಿ ನಡೆದ ಹೊಗೆ ಬಾಂಬ್ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಿಲ್ಲ, ಗೃಹ ಸಚಿವ ಅಮಿತಾ ಷಾ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.
ಹಿಂದಿನ ಬಿಜೆಪಿ ಸರ್ಕಾರ ನಿಗಮಗಳಿಗೆ ₹ 1 ಅನುದಾನ ನೀಡಿಲ್ಲ, ಕೇವಲ ನಿಗಮ ಮಂಡಳಿ ಸ್ಥಾಪಿಸಿದರೆ ಸಾಲದು ಅದಕ್ಕೆ ಹಣ ಮೀಸಲಿರಿಸಿದರೆ ನಿಗಮ ಮಂಡಳಿಗಳಿಗೆ ಬೆಲೆ ಬರುತ್ತದೆ ಎಂದರು. ನವಲಿ ಜಲಾಶಯ ಮತ್ತು ಸಿರವಾರ ಬಳಿ ತೋಟಗಾರಿಕೆ ಕೋಲ್ಡ್ ಸ್ಟೋರೇಜ್ ಮಾಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಕೇವಲ ಘೋಷಣೆ ಮಾಡಿದರೆ ಸಾಲದು ಅದಕ್ಕೆ ಅನುದಾನ ನೀಡುವುದರ ಮೂಲಕ ಜಾರಿಗೆ ತರಬೇಕು. ಈ ಕಾರ್ಯ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು. ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಜನಾದ್ರಿ ಅಭಿವೃದ್ಧಿಗೆ ₹120 ಕೋಟಿ ಘೋಷಣೆ ಮಾಡಿದ್ದರು. ಈಗ ಆ ಹಣ ಎಲ್ಲಿದೆ? ಎಂದು ತಂಗಡಗಿ ಪ್ರಶ್ನಿಸಿದರು.
ಕನಕಗಿರಿ ಕ್ಷೇತ್ರದ ಕ್ಯಾಂಪ್ಗಳನ್ನು ಸರ್ಕಾರದ ನಿಯಮಾವಳಿಯಂತೆ ಜನರ ಬೇಡಿಕೆ ಅನ್ವಯ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು