ಬಾಗಲಕೋಟೆ : ವಿಜಯಪುರದ ಶಾಸಕ ಯತ್ನಾಳ ಮತ್ತೆ ನನ್ನ ನಡುವಿನ ಸಂಬಂಧ ಸರಿ ಇಲ್ಲ, ಎಂಬುದು ಸುಳ್ಳು. ನಾವೇನು ಜಗಳವಾಡಿಲ್ಲ. ಮಾಧ್ಯಮದ ಎದುರಿಗೆ ಮಾತ್ರ ನಾವೊಂದು ಅವರೊಂದು ಹೇಳಿಕೆ ಕೊಡುತ್ತೇವೆ. ಆದರೆ, ವೈಯಕ್ತಿಕವಾಗಿ ನಾವು ಚೆನ್ನಾಗಿಯೇ ಇದ್ದೇವೆ ಎಂದು ಸಂಸದ ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದರು. ಬಾಗಲಕೋಟೆ ಜಿಲ್ಲೆ ಅನಗವಾಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಅನುಗುಣವಾಗಿ ನಾವು ಸಾಂದರ್ಭಿಕವಾಗಿ ಏನೋ ಒಂದು ಹೇಳಿಕೆ ಕೊಟ್ಟಿರುತ್ತೇವೆ. ಅದನ್ನೇ ತಪ್ಪಾಗಿ ಭಾವಿಸಿದರೆ ಏನು ಮಾಡಲು ಸಾಧ್ಯ. ನಮ್ಮಿಬ್ಬರ ಮನಸು ಒಂದೇ ಇದೆ. ನನಗೆ ಯತ್ನಾಳ ಸಹಾಯ ಮಾಡಿದ್ದಾರೆ. ನಾನು ಸಹ ಅವರಿಗೆ ಸಹಾಯ ಮಾಡಿದ್ದೇನೆ. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ.
ಔಷಧಿಗಳಿಲ್ಲದೆ ಆರೋಗ್ಯ ಚಿಕಿತ್ಸೆ: ಸುಪ್ರೀಂ ರೇ ಹೀಲಿಂಗ್ ಸೆಂಟರ್ : ಇಲ್ಲಿದೆ ಉಚಿತ ಸಲಹೆ – Reiki
ಮಾಧ್ಯಮದವರೇ ಸೃಷ್ಟಿಸಿದ ಭಿನ್ನಾಭಿಪ್ರಾಯ ಇದು ಎಂದು ಹೇಳಿದರು. ವಿಜಯಪುರದಿಂದ ಲೋಕಸಭೆ ಚುನಾವಣೆಗೆ ಸ್ಫರ್ಧೆ ಮಾಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ, ಇಲ್ಲದಿದ್ದರೆ ಮನೆಯಲ್ಲಿ ಮೊಮ್ಮಕ್ಕಳನ್ನು ಆಡಿಸುತ್ತ ಕಾಲಕಳೆಯುತ್ತೇನೆ ಎಂದರು.