ಹುಬ್ಬಳ್ಳಿ: ಮುಸ್ಲೀಮರಿಗೆ ದೇಶದ ಸಂಪತ್ತು ಹಂಚುತ್ತೇವೆ ಎಂದು ಸಿಎಮ್ ಹೇಳಿಕೆ ವಿಚಾರ ಒಳ್ಳೆಯದು ಎಂದು ಅಬಕಾರಿ ಸಚಿವ ಆರ್ . ಬಿ. ತಿಮ್ಮಾಪುರ ಹೇಳಿದರು. ನಗರದಲ್ಲಿ ಮಂಗಳವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಮುಖ್ಯಮಂತ್ರಿಗಾದ ಸಿದ್ದರಾಮಯ್ಯ ಸಾಹೆಬ್ರು ಹೇಳಿದ್ದು ನೂರಕ್ಕೆ ನೂರು ಸತ್ಯವಿದೆ.
ಮುಸ್ಲೀಮರು ನಮ್ಮ ನಾಡಿನವರು, ಈ ನೆಲದ ಮೇಲೆ ಅವರಿಗೂ ಹಕ್ಕಿದೆ ಎಂದ ಅವರು ಮುಸ್ಲಿಂ ಸಮುದಾಯದವರಿಗೆ ಹಕ್ಕು ಕೊಡುವುದರಲ್ಲಿ ತಪ್ಪೇನಿದೆ? ಭಾರತೀಯ ಜನತಾ ಪಕ್ಷದ ವರು ಹಿಂದೂ ಓಲೈಕೆ ಮಾಡ್ತಾರೆ, ಮುಸ್ಲೀಮರ ಗಲಾಟೆ ಹಚ್ತಾರೆ
ನಾನು, ಸಿದ್ದರಾಮಯ್ಯ ಹಿಂದೂಗಳು ಬಿಜೆಪಿಯವರು ರಾಜಕೀಯಕ್ಕಾಗಿ ಹಿಂದುತ್ವ ಬಳಸುತ್ತಿದ್ದಾರೆ ನಾನು ಜನರ ಕಲ್ಯಾಣಕ್ಕಾಗಿ ಕಾರ್ಯ ಮಾಡತಾ ಇದ್ದೇವೆ ಎಂದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ಆಗಲಿ, ಇನ್ನು ಸದನ ಸುಮ್ಮನೆ ಹಾಳಾಗಬಾರದು. ಉತ್ತರ ಕರ್ನಾಟಕದ ಹಲವಾರು ಸಮಸ್ಯೆಗಳಿವೆ ವಿರೋಧ ಪಕ್ಷ ನಾಯಕರಿಗೆ ವಿನಂತಿ ಮಾಡುತ್ತೇವೆ. ಬೇರೆಬೇರೆ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಗದ್ದಲದಲ್ಲಿ ಅಧಿವೇಶನ ಮುಗಿಯಬಾರದು. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಬೇಕು ಅನ್ಮೋದು ನಮ್ಮ ವಿನಂತಿ ಆಗಿದೆ ಆದರೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಕಾಣಿಸುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.