ರಾಮನಗರ:- ಕಾಂಗ್ರೆಸ್ ಮುಖಂಡ ವಿಜಯ್ ದೇವ್ ರೆಸಾರ್ಟ್ ಮೇಲೆ ಐಟಿ ದಾಳಿಯಾಗಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಳೇಬೇಕುಪ್ಪೆ ಗ್ರಾಮದಲ್ಲಿರುವ ತಪ್ಪಲು ಕಾಂಗ್ರೆಸ್ ಮುಖಂಡ ವಿಜಯ್ ದೇವ್ ಮಾಲೀಕತ್ವದ ರೆಸಾರ್ಟ್ ಮೇಲೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಬೇಸಿಗೆಯಲ್ಲಿ ಕುಡಿಯಲು ಎಳನೀರು ಅಥವಾ ನಿಂಬೆ ರಸ ಇದರಲ್ಲಿ ಉತ್ತಮ ಯಾವುದು!?
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ವಿಜಯ್ ದೇವ್ ಅವರ ರೆಸಾರ್ಟ್ ಮೇಲೆ ಇಂದು ಸಂಜೆ ಐಟಿ ದಾಳಿಯಾಗಿದ್ದು, ರೆಸಾರ್ಟ್ಗೆ ಸಂಬಂಧಿಸಿದಂತೆ ಸುಮಾರು ಒಂದು ಗಂಟೆವರೆಗೆ ದಾಖಲೆ ಪರಿಶೀಲಿಸಿ ತೆರಳಿದ್ದಾರೆ.
ಇಂದು ಮಧ್ಯಾಹ್ನ ಅಷ್ಟೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ(Nelamangala) ರಿಯಲ್ ಎಸ್ಟೇಟ್ ಉದ್ಯಮಿ, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವೆಂಕಟ್ ರಾಜು ಮನೆ ಮೇಲೆ ದಾಳಿಯಾಗಿತ್ತು. ಸುಮಾರು 6 ಕಾರುಗಳಲ್ಲಿ ಬಂದಿದ್ದ 20 ಐಟಿ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸಿತ್ತು. ಇದಾದ ಬೆನ್ನಲ್ಲೇ ಈ ದಾಳಿ ನಡೆದಿದೆ.