ಬೆಂಗಳೂರು:- ಡಿಕೆ ಬ್ರದರ್ಸ್ ಆಪ್ತ ಕನಕಪುರ ಕೆಂಪರಾಜು ಮನೆ ಮೇಲೆ ಐಟಿ ದಾಳಿ ನಡೆದಿದೆ. ನಗರದ ಕನಕಪುರ ರಸ್ತೆಯ ವಾಜರ ಹಳ್ಳಿಯಲ್ಲಿರುವ ಕೆಂಪರಾಜು ನಿವಾಸದ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಲವ್ ಸೆಕ್ಸ್ ದೋಖಾ ಕೇಸ್: ಯುವತಿಗೆ ಮದುವೆ ಆಗುವುದಾಗಿ ಕೈಕೊಟ್ಟ ಪ್ರೇಮಿ!
ಎರಡು ಇನೋವಾ ಕಾರಿನಲ್ಲಿ ಬಂದಿರುವ ಐಟಿ ಅಧಿಕಾರಿಗಳು ಬೆಳಗ್ಗೆಯೇ ಕೆಂಪರಾಜು ಮನೆಯ ಮೇಲೆ ದಾಳಿ ಮಾಡಿದ್ದು, ಈವರೆಗೂ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಡಿಕೆ ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆಂಪರಾಜು ಗ್ರಾನೈಟ್ ಹಾಗೂ ಕ್ರಶರ್ ಸೇರದಂತೆ ಹಲವು ಉದ್ಯಮಗಳನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.