ಬೆಂಗಳೂರು: ಭಾರತದಲ್ಲಿ ಇಂದು ಆಫ್ಲೈನ್ ಪೇಮೆಂಟ್ಗಿಂತ ಹೆಚ್ಚಾಗಿ ಡಿಜಿಟಲ್ ಪಾವತಿ ಮಾಡುವವರ ಸಂಖ್ಯೆಯೇ ಹೆಚ್ಚುತ್ತಿದೆ. ಅದರಲ್ಲೂ ಯುಪಿಐ ಪಾವತಿ ವ್ಯವಸ್ಥೆ ಬಂದ ನಂತರ ಆನ್ ಲೈನ್ ವಹಿವಾಟು ಸಾಕಷ್ಟು ಹೆಚ್ಚಾಗಿದೆ. ಡಿಜಿಟಲ್ ಪೇಮೆಂಟ್ ಒಂದು ಕಡೆ ಟ್ರೆಂಡಿಂಗ್ನಲ್ಲಿದ್ರೆ, ಇನ್ನೂ ಈ ನಗದು ಸಹಿತ ಪಾವತಿಗಳು ಚಲಾವಣೆಯಲ್ಲಿವೆ.
ಇನ್ನೂ ಅನೇಕರು ಕರೆನ್ಸಿ ನೋಡುಗಳನ್ನೇ ಹೆಚ್ಚು ಬಳಸುತ್ತಿದ್ದಾರೆ. ಪ್ರಸ್ತುತ ನಮ್ಮ ದೇಶದಲ್ಲಿ ಒಟ್ಟು ರೂ.34.7 ಲಕ್ಷ ಕೋಟಿ ನಗದು ಚಲಾವಣೆಯಲ್ಲಿದೆ. ನಗರಗಳಲ್ಲಿ ಡಿಜಿಟಲ್ ಪಾವತಿ ಸುಲಭವಾಗಿರುವುದರಿಂದ ಎಲ್ಲರೂ ಆನ್ಲೈನ್ ಪಾವತಿ ಮಾಡುತ್ತಿದ್ದಾರೆ. ಆದರೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇನ್ನೂ ಅನೇಕರು ನಗದನ್ನೇ ಬಳಸುತ್ತಿದ್ದಾರೆ. ಹೆಚ್ಚಿನ ಜನರು ಗ್ರಾಮೀಣ ಪ್ರದೇಶಗಳಲ್ಲಿ ಈ ಕರೆನ್ಸಿ ನೋಟು, ನಾಣ್ಯಗಳನ್ನೇ ಬಳಸುತ್ತಾರೆ.
ಇನ್ನೂ ಭಾರತೀಯ ರಿಸರ್ವ್ ಬ್ಯಾಂಕ್ ₹5000 ನೋಟನ್ನು ತರಲಿದೆ ಎಂಬ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ₹2000ನೋಟುಗಳನ್ನು ಹಿಂಪಡೆಯಲಾಗಿರುವುದರಿಂದ ದೊಡ್ಡ ಮೌಲ್ಯದ ನೋಟು ಚಲಾವಣೆಯಲ್ಲಿಲ್ಲ. ಈಗ ಭಾರತದಲ್ಲಿ ಅತಿ ದೊಡ್ಡ ನೋಟು ₹500. ಹಾಗಾಗಿ RBI ₹5000ನೋಟು ತರುತ್ತೆ ಅನ್ನೋ ಸುದ್ದಿ ಹಬ್ಬಿದೆ.
ವೈರಲ್ ಪೋಸ್ಟ್ನಲ್ಲಿ ಏನಿದೆ?:
https://www.facebook.com/raj.sirwal/posts/9333981149992546?ref=embed_post
ಫೇಸ್ಬುಕ್ ಬಳಕೆದಾರರೊಬ್ಬರು 5000 ರೂ. ಎಂದು ಹೇಳಲಾಗುವ ಫೋಟೋವನ್ನು ಹಂಚಿಕೊಂಡು, ‘‘*BIG NEWS: 5000 ರೂಪಾಯಿಯ ಹೊಸ ನೋಟು ಬಿಡುಗಡೆ: RBI ನೀಡಿದೆ ಈ ಮಾಹಿತಿ|5000 New Note’’ ಎಂದು ಬರೆದುಕೊಂಡಿದ್ದಾರೆ.
RBI ಉತ್ತರ:
ಇದರ ಬಗ್ಗೆ RBI ಒಂದು ಹೇಳಿಕೆ ನೀಡಿದೆ. ಹೊಸದಾಗಿ ಹಸಿರು ಬಣ್ಣದ ₹5000 ನೋಟು ಬಿಡುಗಡೆ ಮಾಡ್ತಾರೆ ಅನ್ನೋದು ಕೇವಲ ವದಂತಿ ಅಂತ RBI ಸ್ಪಷ್ಟಪಡಿಸಿದೆ. ಇದನ್ನ ಯಾರೂ ನಂಬಬಾರದು ಅಂತ ಕೇಳಿಕೊಂಡಿದೆ. ಈ ವದಂತಿಗಳಲ್ಲಿ ಯಾವುದೇ ಹುರುಳಿಲ್ಲ ಅಂತ RBI ಗವರ್ನರ್ ಕೂಡ ಸ್ಪಷ್ಟಪಡಿಸಿದ್ದಾರೆ.
₹2000 ನೋಟು ವಾಪಸ್:
RBI ಕೇವಲ ₹2000 ನೋಟುಗಳನ್ನು ಮಾತ್ರ ವಾಪಸ್ ಪಡೆದಿದೆ. ಹಾಗಾಗಿ ಹಸಿರು ಬಣ್ಣದ ₹5000 ನೋಟು ಬಿಡುಗಡೆ ಆಗುತ್ತೆ ಅನ್ನೋ ಸುಳ್ಳು ಸುದ್ದಿಗಳನ್ನ ನಂಬಬೇಡಿ. ಈಗ ₹500, ₹200, ₹100, ₹50, ₹20 ಮತ್ತು ₹10ನೋಟುಗಳು ಮಾತ್ರ ಚಲಾವಣೆಯಲ್ಲಿವೆ.