ಬೆಂಗಳೂರು: ಭೂ ವೀಕ್ಷಣೆ ಕಿರುಉಪಗ್ರಹ ಉಡಾವಣೆಯ ದಿನಾಂಕ ಮುಂದೂಡಿದ ಇಸ್ರೋ ಆಗಸ್ಟ್ 15ರ ಬದಲು ಆಗಸ್ಟ್ 16ರಂದು ಉಡಾವಣೆ ಮಾಡಲು ನಿರ್ಧರಿಸಲಾಗಿದೆ.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದಿಂದ ಮಾಹಿತಿ ನೀಡಿದ್ದು ಆಗಸ್ಟ್ 16ರಂದು ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಗುತ್ತೆ.
SSLV-D3 Small Satellite Launch Vehicle ಪ್ರಯೋಗಿಕ ಉಡಾವಣೆ ಎರಡು ಬಾರಿ ಟ್ರಯಲ್ ಲಾಂಚ್ ನಡೆದಿದೆ ಮೂರನೇ & ಅಂತಿಮ ಸುತ್ತಿನ ಪ್ರಾಯೋಗಿಕ ಲಾಂಚ್ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಅಭಿವೃದ್ಧಿ ಮಾಡಿರುವ ಎಸ್ಎಸ್ಎಲ್ವಿ-ಡಿ3 ರಾಕೆಟ್
ಆಗಸ್ಟ್ 16ರಂದು ಬೆಳಗ್ಗೆ 9.17ಕ್ಕೆ ಶ್ರೀಹರಿಕೋಟದಿಂದ ಉಡಾವಣೆ ಮಾಡುತ್ತಿದ್ದು ಹವಾಮಾನ ಪರಿಸ್ಥಿತಿಯಿಂದ ಒಂದು ದಿನ ಮುಂದೂಡಿಕೆ ಎಂದು ತಿಳಿಸಿಲಾಗಿದೆ. ಹಾಗೆ ಭೂಮಿಯಿಂದ 475 ಕಿ.ಮೀ ಎತ್ತರದಲ್ಲಿರುವ ಕೆಳಹಂತದ ಕಕ್ಷೆಯಲ್ಲಿ ವೃತ್ತಾಕಾರದಲ್ಲಿ ಪರಿಭ್ರಮಣೆ ನಡೆಸಲಿದ್ದು, ಒಂದು ವರ್ಷ ಕಾರ್ಯ ನಿರ್ವಹಿಸಲಿದೆ ಎಸ್ಎಸ್ಎಲ್ವಿ ಮೂರು ಹಂತಗಳ, ಕಡಿಮೆ ವೆಚ್ಚದ ಉಡ್ಡಯನ ವಾಹನ 500kg ತೂಕದವರೆಗಿನ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಇದೆ ಎಂದು ತಿಳಿಸಿದ್ದಾರೆ.