ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಟು ಎ ಮೀಸಲಾತಿ ನೀಡಲು ಸರ್ಕಾರ ಮಲಗಿದೆ ಬಡದಿಬ್ಬಿಸಲು ಹೋರಾಟ ನಮಗೆ ಅನಿವಾರ್ಯವಾಗಿದೆ.
ಪ್ರಪ್ರಥಮ ಬಾರಿಗೆ ರಬಕವಿ ಬನಹಟ್ಟಿ ತಾಲೂಕಿನಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮ ೧೯೯ ಜಯಂತಿ ಆಚರಣೆ ಮತ್ತು ಟು ಎ ಮೀಸಲಾತಿ ಪಡೆಯುವುದಕ್ಕೆ ಚಳವಳಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಿದ್ದೇವೆ ಮತ್ತು ಡಿಸೆಂಬರ್ದಲ್ಲಿ ನಡೆಯುವ ಬೆಳಗಾವಿ ಚಳಿಗಾಲ ಅಧಿವೇಶನದ ಮುಂದೆ ಇರುವ ಪ್ರಮುಖ ಹೆದ್ದಾರಿ ರಸ್ತೆಯ ಮೇಲೆ ಇಷ್ಟಲಿಂಗ ಪೂಜೆ ಮಾಡುವುದರ ಮುಖಾಂತರ ಸರ್ಕಾರವನ್ನು ಗಮನಸೆಳೆಯಲು ದಿನಾಂಕವನ್ನು ಅತಿ ಶೀಘ್ರದಲ್ಲಿ ಪ್ರಕಟಿಸುತ್ತೇವೆ ಎಂದು ಪ್ರಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಕೂಡಲಸಂಗಮ ಹೇಳಿದರು
ಲಿಂಗಾಯತ ಪಂಚಮಸಾಲಿ ಸಮುದಾಯದವರು ಒಗ್ಗಟಿನಿಂದ ಪ್ರದರ್ಶನ ಮಾಡಿದರೆ ಸರ್ಕಾರ ಕಣ್ಣು ತೆರೆದು ನಮಗೆ ಟು ಎ ಮೀಸಲಾತಿ ನೀಡುತ್ತದೆ.
ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಲು ಹೋರಾಟ ಅನಿವಾರ್ಯ.
ರಬಕವಿ ಬನಹಟ್ಟಿ ತಾಲೂಕಿನ ಅವಳಿ ನಗರಗಳಲ್ಲಿ ದೊಡ್ಡ ಮಟ್ಟದಲ್ಲಿ ಸಮಾವೇಶ ನಡಿತಾ ಇದೆ.
ಬಾಗಲಕೋಟೆ ಬಿಜಾಪುರ ಎರಡು ಜಿಲ್ಲೆಯ ಲಿಂಗಾಯತ ಪಂಚಮಸಾಲಿ ಸಮುದಾಯದ ಭಾಂಧವರು ಈ ಕಾರ್ಯಕ್ರಮಕ್ಕೆ ಬಂದು ಯಶಸ್ವಿ ಮಾಡಿ ಈ ಹೋರಾಟದಲ್ಲಿ ಪಾಲ್ಗೊಳ್ಳರಿ.
ಮಾಧ್ಯಮ ಮೂಲಕ ಇದೇ ಆಮಂತ್ರಣ ಪತ್ರಿಕೆ ಅಂತ ತಿಳಿದುಕೊಂಡು ತಾವು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಶಸ್ವಿಗೊಳಿಸಬೇಕೆಂದು ಶ್ರೀ ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.
ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಟು ಎ ಮೀಸಲಾತಿ ನಮಗೆ ಅನಿವಾರ್ಯವಾಗಿದೆ.
ರವಿವಾರ 26.11.2023 ರಂದು ಬೆಳಿಗ್ಗೆ 9.00
ಸರ್ಕಾರದ ಗಮನ ಸೆಳೆಯಲು ರಾಜ್ಯ ಹೆದ್ದಾರಿ ರಸ್ತೆಯನ್ನು ತಡೆದು ರಸ್ತೆಯ ಮೇಲೆ ಇಷ್ಟಲಿಂಗ ಪೂಜೆಯನ್ನು ಮಾಡಿ ತಾಯಿ ವೀರ ರಾಣಿ ಕಿತ್ತೂರು ಚನ್ನಮ್ಮನ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕರು ಶ್ರೀಶೈಲ ದಲಾಲ. ಈಶ್ವರ ಬಿರಾದಾರಪಾಟೀಲ. ಲಕ್ಕಪ್ಪ ಪಾಟೀಲ. ಬಿಮಶಿ ಹಂದಿಗುಂದ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ