SRH ತಂಡ ಸೇರಿದ ಬಳಿಕ ಮುಂಬೈ ತಂಡಕ್ಕೆ ಎಡಗೈ ಬ್ಯಾಟರ್ ಇಶಾನ್ ಕಿಶನ್ ಭಾವುಕ ಸಂದೇಶ ರವಾನಿಸಿದ್ದಾರೆ.
ವಿಜಯೇಂದ್ರಗೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟ ಮಾಜಿ ಸಚಿವ ಅರವಿಂದ್ ಲಿಂಬಾವಳಿ!
ಈ ಸ್ಫೋಟಕ ಬ್ಯಾಟರ್ನನ್ನು ಮೆಗಾ ಹರಾಜಿನಲ್ಲಿ ಎಸ್ಆರ್ಹೆಚ್ ಫ್ರಾಂಚೈಸಿ 11.25 ಕೋಟಿ ರೂಪಾಯಿಗೆ ಖರೀದಿಸಿದೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಹೊಸ ತಂಡದ ಪರ ಕಣಕ್ಕಿಳಿಯುವುದಕ್ಕೂ ಮುನ್ನ ತನ್ನ ಹಳೆಯ ತಂಡಕ್ಕೆ ಭಾವಾನಾತ್ಮಕ ವಿದಾಯ ಹೇಳಿರುವ ಇಶಾನ್ ಕಿಶನ್, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಧನ್ಯವಾದ ತಿಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ಕಾಣಬಹುದಾಗಿದೆ. ಈ ವಿಡಿಯೋ ಜೊತೆಗೆ ತಂಡಕ್ಕೆ ಧನ್ಯವಾದ ತಿಳಿಸಿರುವ ಕಿಶನ್, ತಂಡದ ಕೋಚ್ ಮತ್ತು ಸಹ ಆಟಗಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಬಗ್ಗೆ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿರುವ ಕಿಶನ್, ನಿಮ್ಮೆಲ್ಲರೊಂದಿಗಿನ ಅನೇಕ ನೆನಪುಗಳು ಯಾವಾಗಲೂ ನನ್ನ ಹೃದಯದಲ್ಲಿರುತ್ತವೆ. ನಿಮ್ಮೊಂದಿಗೆ ನಾನು ಒಬ್ಬ ವ್ಯಕ್ತಿ ಮತ್ತು ಆಟಗಾರನಾಗಿ ಬೆಳೆದಿದ್ದೇನೆ. ನನ್ನ ಜೀವನದುದ್ದಕ್ಕೂ ನನ್ನೊಂದಿಗೆ ಉಳಿಯುವ ನೆನಪುಗಳೊಂದಿಗೆ ನಾನು ವಿದಾಯ ಹೇಳುತ್ತಿದ್ದೇನೆ. ತಂಡದ ನಿರ್ವಹಣೆ, ತರಬೇತುದಾರರು ಮತ್ತು ಆಟಗಾರರಿಗೆ ಧನ್ಯವಾದಗಳು. ಇದಲ್ಲದೇ ನನ್ನನ್ನು ಸದಾ ಬೆಂಬಲಿಸುತ್ತಿರುವ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.