ಮೂತ್ರದಲ್ಲಿ ನೊರೆ ಕಾಣಿಸಿಕೊಳ್ತಿದ್ಯಾ? ಹಾಗಿದ್ರೆ ನೀವು ಇದಕ್ಕೆ ಕಾರಣ ತಿಳಿಯಲೇಬೇಕು. ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
ನಮ್ಮ ದೇಹವು ಸರಿಯಾಗಿ ಕಾರ್ಯವಿರ್ವಹಿಸಬೇಕೆಂದರೆ ಆರೋಗ್ಯಕರ ಕೊಬ್ಬನ್ನು ಹೊಂದಿರಬೇಕು. ಅಂದರೆ ಒಳ್ಳೆಯ ಕೊಲೆಸ್ಟ್ರಾಲ್ ಇರಬೇಕು. ಕೆಟ್ಟ ಕೊಲೆಸ್ಟ್ರಾಲ್ ಜೊತೆಗೆ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗಿರುತ್ತದೆ. ಇದು ದೇಹದಲ್ಲಿ ಹೆಚ್ಚು ಸಂಗ್ರಹವಾದಾಗ, ಅಪಧಮನಿಗಳಲ್ಲಿ ಅಡಚಣೆ ಉಂಟಾಗುತ್ತದೆ. ಇದು ರಕ್ತ ಪರಿಚಲನೆಯನ್ನು ಕಡಿಮೆ ಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ, ಮೂತ್ರದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ನ ಕೆಲವು ಚಿಹ್ನೆಗಳನ್ನು ಗಮನಿಸಬಹುದು.
ಮೂತ್ರದಲ್ಲಿ ನೊರೆ
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ನಿಮ್ಮ ಮೂತ್ರದಲ್ಲಿ ಕೊಲೆಸ್ಟ್ರಾಲ್ ನೊರೆಗಳು ಕಾಣಿಸಿಕೊಳ್ಳುತ್ತವೆ. ಇವುಗಳು ಸಣ್ಣ ಪ್ರಮಾಣದಲ್ಲಿರುವುದು ಸಹಜ. ಆದರೆ ಹೆಚ್ಚು ಪ್ರಮಾಣದಲ್ಲಿದ್ದರೆ ಮೂತ್ರಪಿಂಡದ ಸಮಸ್ಯೆಗಳು ಅಥವಾ ನೆಫ್ರೋಟಿಕ್ ಸಿಂಡ್ರೋಮ್ ಎಂಬ ರೋಗದ ಸಂಕೇತವೆಂದು ಪರಿಗಣಿಸಬೇಕು. ಮೂತ್ರದಲ್ಲಿ ನೊರೆಯನ್ನು ಗಮನಿಸಿದರೆ, ನೀವು ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಬೇಕು.
ನೊರೆ ಮೂತ್ರ: ಇನ್ನೊಂದು ಲಕ್ಷಣವೆಂದರೆ ನೊರೆ ಮೂತ್ರ. ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಾದಾಗ ಮೂತ್ರವು ಸಾಮಾನ್ಯಕ್ಕಿಂತ ಹೆಚ್ಚು ಫೋಮ್ ಅನ್ನು ಹೊಂದಿರಬಹುದು. ಅಲ್ಲದೇ ಬಣ್ಣವೂ ಕಪ್ಪಾಗಬಹುದು.
ಎದೆ ನೋವು, ತಲೆತಿರುಗುವಿಕೆ: ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಅಡಚಣೆಗಳು ಎದೆ ನೋವು ಅಥವಾ ಒತ್ತಡಕ್ಕೆ ಕಾರಣವಾಗಬಹುದು. ಇದರಿಂದ ತಲೆ ಸುತ್ತುವ ಅನುಭವವಾಗುತ್ತದೆ.
ಕಾಲುಗಳಲ್ಲಿ ನೋವು: ಅಧಿಕ ಕೊಲೆಸ್ಟ್ರಾಲ್ ಕಾಲುಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ, ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.
ವಿಪರೀತ ಆಯಾಸ: ತುಂಬಾ ಆಯಾಸ ಅಥವಾ ಬಲಹೀನತೆಯ ಭಾವನೆ ಕೂಡ ಅಧಿಕ ಕೊಲೆಸ್ಟ್ರಾಲ್ನ ಸಂಕೇತವಾಗಿದೆ.
ತುರಿಕೆ, ಒಣ ಚರ್ಮ: ತುರಿಕೆ, ಒಣ ತ್ವಚೆಯಂತಹ ರೋಗಲಕ್ಷಣಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಸಮಸ್ಯೆಗಳು ಅಧಿಕ ಕೊಲೆಸ್ಟ್ರಾಲ್ಗೆ ಸಂಬಂಧಿಸಿವೆ.z
ಅಧಿಕ ರಕ್ತದೊತ್ತಡ: ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಅಡಚಣೆಗಳು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಈ ಚಿಹ್ನೆಯನ್ನು ನಿರ್ಲಕ್ಷಿಸುವುದು ತುಂಬಾ ಅಪಾಯಕಾರಿ ಆಗಿದೆ.
ಕಣ್ಣುಗಳಲ್ಲಿ ಹಳದಿ ಗೆರೆಗಳು: ಕಣ್ಣುಗಳಲ್ಲಿನ ಹಳದಿ ಗೆರೆಗಳನ್ನು ಕ್ಸಾಂಥೆಲಾಸ್ಮಾ ಎಂದು ಕರೆಯಲಾಗುತ್ತದೆ. ಇದು ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಸೂಚಿಸುತ್ತದೆ.