ನಿಮ್ಮ ಹಲ್ಲುಗಳು ಕೊಳಕಾಗಿದ್ದರೆ ನಿಮ್ಮ ಮುಖದ ಮೇಲೆ ಎಷ್ಟೇ ಹೊಳಪು ತಂದರೂ ನೀವು ಚೆನ್ನಾಗಿ ಕಾಣುವುದಿಲ್ಲ. ನಾವು ನಮ್ಮ ಹಲ್ಲುಗಳ ಬಗ್ಗೆ ಕಾಳಜಿ ವಹಿಸದಿದ್ದರೆ, ಅವು ಹಳದಿ ಬಣ್ಣಕ್ಕೆ ತಿರುಗುತ್ತದೆ.
Karnataka Rain: ರಾಜ್ಯದ ಈ ಜಿಲ್ಲೆಗಳಲ್ಲಿ ಫೆಬ್ರವರಿಯಿಂದ ಭಾರೀ ಮಳೆ!
ಹಲ್ಲುಗಳು ಸ್ವಚ್ಛವಾಗಿರಬೇಕು ಅಂದರೆ ದಿನಕ್ಕೆ 2 ಬಾರಿಯಾದರೂ, ಹಲ್ಲುಜ್ಜುವುದು ಅನಿವಾರ್ಯ. ಇಲ್ಲದಿದ್ದರೆ ಬಾಯಿ ದುರ್ವಾಸನೆ ಬರುತ್ತದೆ, ಕುಳಿ ಉಂಟಾಗುತ್ತದೆ ಮತ್ತು ಒಸಡುಗಳು ಸಹ ಅನಾರೋಗ್ಯಕ್ಕೆ ಒಳಗಾಗುತ್ತವೆ. ಈ ಸಮಸ್ಯೆಯನ್ನು ಹೋಗಲಾಡಿಸಲು ವಿಶೇಷ ತರಕಾರಿವೊಂದನ್ನು ಸೇವಿಸಬೇಕು.
ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಸ್ವಚ್ಛವಾಗಿ ಮತ್ತು ಫಳ-ಫಳ ಹೊಳೆಯಬೇಕೆಂದು ಬಯಸುತ್ತಾರೆ. ಇದು ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸುವುದಲ್ಲದೇ ನಿಮ್ಮ ಬಾಯಿಯ ಆರೋಗ್ಯದ ಬಗ್ಗೆಯೂ ಹೇಳುತ್ತದೆ. ಆದರೆ ಹಲ್ಲುಗಳ ಮೇಲಿನ ಹಳದಿ ಕಲೆಗಳು ನಿಮ್ಮ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡಬಹುದು.
ಇದರಿಂದಾಗಿ ನಗುವಾಗ ಹಲ್ಲುಗಳು ಮಂದವಾಗಿ ಕಾಣಿಸುತ್ತದೆ. ಹೀಗಾಗಿ ಇತರರೊಂದಿಗೆ ಮಾತನಾಡುವಾಗ ನೀವು ಮುಜುಗರಕ್ಕೊಳಗಾಗಬಹುದು. ಎಷ್ಟೋ ಬಾರಿ ಜನರು ಹಲ್ಲುಗಳ ಮೇಲಿನ ಹಳದಿ ಕಲೆಗಳಿಂದ ಅಸಮಾಧಾನಗೊಳ್ಳುತ್ತಾರೆ. ಏಕೆಂದರೆ ಹಳದಿ ಹಲ್ಲುಗಳು ನೋಡಲು ಕೆಟ್ಟದಾಗಿ ಕಾಣುವುದಷ್ಟೇ ಅಲ್ಲದೇ, ಕೆಲವೊಮ್ಮೆ ನಿಮ್ಮನ್ನು ಕಾಡುತ್ತದೆ.
ಇತ್ತೀಚಿನ ದಿನಗಳಲ್ಲಂತೂ ಅನೇಕ ಮಂದಿ ಹಳದಿ ಹಲ್ಲಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಕಲೆಗಳನ್ನು ಹೋಗಲಾಡಿಸಲು ಅನೇಕ ಮಂದಿ ದಂತವೈದ್ಯರ ಬಳಿಗೆ ಹೋಗಿ ದುಬಾರಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಹೀಗಿದ್ದರೂ ಕೂಡ ಎಷ್ಟೋ ಬಾರಿ ಉತ್ತಮ ಫಲಿತಾಂಶ ಸಿಗುವುದಿಲ್ಲ.
ಅಷ್ಟಕ್ಕೂ ಹಲ್ಲುಗಳ ಮೇಲೆ ಹಳದಿ ಬಣ್ಣ ಉಂಟಾಗಲು ಅನೇಕ ಕಾರಣಗಳಿವೆ. ಬ್ರಷ್ ಮಾಡಿದ್ರೆ ಹಳದಿ ಹಲ್ಲಿನ ಸಮಸ್ಯೆ ನಿವಾರಣೆ ಆಗುತ್ತಾ? ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಲು ಎಂತಹ ಆಹಾರ ಸೇವನೆ ಕಾರಣ? ಈ ಎಲ್ಲದರ ಬಗ್ಗೆ ಕೆಲವೊಂದಷ್ಟು ಮಾಹಿತಿ ಈ ಕೆಳಗಿನಂತಿದೆ. ಜೊತೆಗೆ ಹಳದಿ ಹಲ್ಲಿನ ಸಮಸ್ಯೆ ನಿವಾರಣೆಗೆ ವೈದ್ಯರ ಬಳಿಗೆ ಹೋಗಿ ಹಣ ಖರ್ಚು ಮಾಡುವುದಕ್ಕಿಂತಲೂ ಮುನ್ನ ಒಮ್ಮೆ ಈ ಮನೆಮದ್ದುಗಳನ್ನೂ ಸಹ ಪ್ರಯತ್ನಿಸಿ.
ನಿಮ್ಮ ಹಲ್ಲುಗಳನ್ನು ಬಿಳುಪಾಗಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದೆಂದರೆ ಬ್ರಷ್ ಮಾಡುವುದು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆ.
ಅಡುಗೆ ಸೋಡಾ: ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕಲು, ನಿಮ್ಮ ಹಲ್ಲುಗಳ ಮೇಲೆ ಅಡುಗೆ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಪೇಸ್ಟ್ ಮಾಡಬಹುದು. ಈ ಪೇಸ್ಟ್ ತಯಾರಿಸಲು, ಒಂದು ಚಮಚ ಅಡುಗೆ ಸೋಡಾ ಮತ್ತು ಎರಡು ಚಮಚ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಬ್ರಷ್ ಮೇಲೆ ಹಚ್ಚಿ, ನಿಮ್ಮ ಹಲ್ಲುಗಳನ್ನು ಚೆನ್ನಾಗಿ ಉಜ್ಜಿ. ಆದರೆ ಇದನ್ನು ಬಳಸುವ ಮುನ್ನ ಒಮ್ಮೆ ತಜ್ಞರನ್ನು ಸಂಪರ್ಕಿಸಿ.
ಆಪಲ್ ಸೈಡರ್ ವಿನೆಗರ್: ಹಳದಿ ಹಲ್ಲಿನ ಸಮಸ್ಯೆಯನ್ನು ತೆಗೆದುಹಾಕಲು ಆಪಲ್ ಸೈಡರ್ ವಿನೆಗರ್ ಅನ್ನು ಸಹ ಬಳಸಬಹುದು. 1 ಕಪ್ ನೀರಿನಲ್ಲಿ 2 ಟೇಬಲ್ಸ್ಪೂನ್ ಆಪಲ್ ಸೈಡರ್ ವಿನೆಗರ್ ಅನ್ನು ಬೆರೆಸಿ ಮೌರ್ವಾಶ್ ಮಾಡಿ.
ಈ ದ್ರಾವಣವನ್ನು ಬಾಯಿಯೊಳಗೆ 30 ಸೆಕೆಂಡುಗಳ ಕಾಲ ಸ್ವಿಶ್ ಮಾಡಿ. ನಂತರ ನೀರು ಮತ್ತು ಬ್ರಷ್ನಿಂದ ತೊಳೆಯಿರಿ. ಇದನ್ನು ಸೀಮಿತ ಪ್ರಮಾಣದಲ್ಲಿ ಬಳಸಬೇಕು. ಅತಿಯಾದ ಬಳಕೆ ಹಲ್ಲುಗಳಿಗೆ ಹಾನಿಯುಂಟು ಮಾಡುತ್ತದೆ.
ಹಣ್ಣಿನ ಸಿಪ್ಪೆ: ಕೆಲವು ಹಣ್ಣುಗಳ ಸಿಪ್ಪೆಗಳು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತವೆ. ಇದು ಸೈದ್ಧಾಂತಿಕವಾಗಿ ಹಲ್ಲುಗಳನ್ನು ಬಿಳುಪುಗೊಳಿಸಲು ಸಹಾಯ ಮಾಡುತ್ತದೆ. ಹಲ್ಲುಗಳನ್ನು ಬಿಳುಪುಗೊಳಿಸುವ ಟ್ರಿಕ್ಗಾಗಿ, ಬಾಳೆಹಣ್ಣು, ಕಿತ್ತಳೆ ಅಥವಾ ನಿಂಬೆ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ಹಲ್ಲುಗಳ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ.
ಸುಮಾರು 2 ನಿಮಿಷಗಳ ಕಾಲ ಅದನ್ನು ಉಜ್ಜಿಕೊಳ್ಳಿ, ನಂತರ ನಿಮ್ಮ ಬಾಯಿಯನ್ನು ಚೆನ್ನಾಗಿ ತೊಳೆದು ಹಲ್ಲುಜ್ಜಿಕೊಳ್ಳಿ. ಇದು ಬಿಳಿ ಹಲ್ಲುಗಳಿಗೆ ಸಹಾಯವಾಗುತ್ತದೆ