ಹೊಟ್ಟೆಯ ಬೊಜ್ಜು ದೇಹದ ಆಕಾರವನ್ನು ಹಾಳುಗೆಡುವುದಲ್ಲದೇ, ಅನೇಕಾನೇಕ ಆರೋಗ್ಯ ಸಮಸ್ಯೆಗಳನ್ನು ಸ್ವಾಗತಿಸುತ್ತದೆ. ಅದಕ್ಕಾಗಿ ಹೊಟ್ಟೆ ಭಾಗದಲ್ಲಿರುವ ಬೊಜ್ಜನ್ನು ಕರಗಿಸಲು ಹೆಚ್ಚಿನ ಆದ್ಯತೆ ನೀಡಬೇಕು. ವ್ಯಾಯಾಮ, ಆಹಾರ, ಕೆಲ ಪಾನೀಯಗಳು ಬೆಲ್ಲಿ ಫ್ಯಾಟ್ ಕರಗಿಸಲು ಸಹಕಾರಿಯಾಗಿದೆ. ಅದ್ರೂಲ್ಲೂ ಕೆಲ ಪಾನೀಯಗಳು ಮ್ಯಾಜಿಕ್ ರೀತಿ ನಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಿ ಬಿಡುತ್ತದೆ
ಸೊಂಟದ ಬೊಜ್ಜು ಕರಗಲು ಅಡುಗೆ ಮನೆಯಲ್ಲಿದೆ ಮದ್ದು: ಜೀರಿಗೆ ನೀರಿಗೆ ಇದನ್ನು ಬೆರೆಸಿ! ರಿಸಲ್ಟ್ ಪಕ್ಕಾ!
ಬೊಜ್ಜು ಅನೇಕ ಗಂಭೀರ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ಅಲ್ಲದೇ ಹೃದ್ರೋಗ ಮತ್ತು ಮಧುಮೇಹ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ಇದಕ್ಕಾಗಿ ಮಲಗುವ ಮುನ್ನ ಕೆಲವು ಪಾನೀಯಗಳನ್ನು ಕುಡಿಯುವುದರಿಂದ ತೂಕ ಇಳಿಸಿಕೊಳ್ಳುವುದು ತುಂಬಾ ಸುಲಭ. ಅಲ್ಲದೇ ರಾತ್ರಿ ಮಲಗುವ ಮುನ್ನ ಈ ಪಾನೀಯಗಳನ್ನು ಕುಡಿಯುವುದರಿಂದ ಹೆಚ್ಚುವರಿ ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು.
ಪ್ರತಿ ರಾತ್ರಿ ಮಲಗಲು ಎರಡು ಗಂಟೆಗಳಿರುವುದಕ್ಕೂ ಮುನ್ನ ಆಹಾರವನ್ನು ಸೇವಿಸಿ. ಮಲಗಲು ಅರ್ಧ ಗಂಟೆ ಇರುವುದಕ್ಕೂ ಮುನ್ನ ಈ ಪಾನೀಯಗಳನ್ನು ಕುಡಿಯುವುದರಿಂದ ದೇಹಕ್ಕೆ ನಾನಾ ಪ್ರಯೋಜನಗಳಿವೆ. ಇವು ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ವೇಗವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಅರಿಶಿನ ಹಾಲು: ಆಹಾರಕ್ಕೆ ಬಣ್ಣ ಮತ್ತು ಸುವಾಸನೆಯನ್ನು ಸೇರಿಸುವುದರ ಜೊತೆಗೆ ಅರಿಶಿನವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಅರಿಶಿನವು ಶೀತ, ಕೆಮ್ಮು, ಜ್ವರ ಅಥವಾ ಗಾಯವನ್ನು ತಕ್ಷಣ ಗುಣಪಡಿಸುವುದರ ಜೊತೆಗೆ, ತೂಕ ಇಳಿಸುವಲ್ಲಿಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅರಿಶಿನವು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದ್ದು, ಇದು ದೇಹದಿಂದ ವಿಷವನ್ನು ತೆಗೆದು ಹಾಕುತ್ತದೆ. ತಜ್ಞರ ಪ್ರಕಾರ, ನೀವು ಪ್ರತಿದಿನ ರಾತ್ರಿ ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲು ಕುಡಿಯುವುದರಿಂದ ಕೆಲವೇ ದಿನಗಳಲ್ಲಿ ತೂಕ ಇಳಿಕೆ ಆಗುತ್ತದೆ.
ಮೆಂತ್ಯ ನೀರು: ಮೆಂತ್ಯ ಬೀಜಗಳು ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತವೆ. ಇದಕ್ಕಾಗಿ ಮೊದಲು ಮೆಂತ್ಯ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು, ಮಲಗುವ ಮುನ್ನ ಈ ನೀರಿಗೆ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ನಿಮಗೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಮೆಂತ್ಯ ಬೀಜಗಳು ಫೈಬರ್ನಲ್ಲಿ ಸಮೃದ್ಧವಾಗಿದ್ದು, ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೇ ಕೊಲೆಸ್ಟ್ರಾಲ್ ಅನ್ನು ಬರ್ನ್ ಮಾಡುತ್ತದೆ…
ನಿಂಬೆ ರಸ ಮತ್ತು ಬ್ಲ್ಯಾಕ್ ಸಾಲ್ಟ್: ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆಹಣ್ಣನ್ನು ಹಿಂಡಿ ಮತ್ತು ಅದಕ್ಕೆ ಕಪ್ಪು ಉಪ್ಪು ಸೇರಿಸಿ ಕುಡಿಯುವುದರಿಂದ ತೂಕ ವೇಗವಾಗಿ ಇಳಿಯುತ್ತದೆ. ಇದು ದೇಹದಿಂದ ವಿಷವನ್ನು ಸುಲಭವಾಗಿ ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಕ್ಯಾಲೊರಿಗಳನ್ನು ಬರ್ನ್ ಮಾಡಲು ತುಂಬಾ ಸಹಾಯಕವಾಗಿದೆ