ವಾಟ್ಸಾಪ್ ಕೋಟ್ಯಂತರ ಜನ ಬಳಸುವ ಅಪ್ಲಿಕೇಷನ್. ಇದು ಸಂವಹನವನ್ನು ಸರಳವಾಗಿಸಿದೆ. ಹೀಗಾಗಿ ಈ ಮೆಸೇಜಿಂಗ್ ಪ್ಲಾಟ್ಫಾರ್ಮ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಸ್ಟೋರೇಜ್ ಹಾಗೂ ಗ್ಯಾಲರಿ ತುಂಬುದರಿಂದ ಫೋನ್ನ ಕಾರ್ಯಕ್ಷಮತೆ ನಿಧಾನವಾಗುತ್ತದೆ. ಜೊತೆಗೆ ಅನಗತ್ಯ ಸಂಗ್ರಹಣೆ ಕೂಡಾ ಹೆಚ್ಚಾಗಬಹುದು. ನೀವು ಕೂಡಾ ಇಂತಹ ಸಮಸ್ಯೆಯನ್ನು ಅನುಭವಿಸುತ್ತಿರಬಹುದು, ಇದಕ್ಕೇನು ಪರಿಹಾರ ಎಂದು ಚಿಂತಿಸುತ್ತಿರಬಹುದು. ಹಾಗಾದ್ರೆ ಇಲ್ಲಿದೆ ಟಿಪ್ಸ್ ಹೇಳುತ್ತೇವೆ ಕೇಳಿ.
- ಹೆಚ್ಚಿನ ಆಯ್ಕೆಗಾಗಿ ಮೇಲೆ ಕಾಣುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ
- ಸೆಟ್ಟಿಂಗ್ಸ್ಗೆ ಹೋಗಿ ಬಳಿಕ ಚಾಟ್ಸ್ಗಳಿಗೆ ಹೋಗಿ. ಇದಾದ ಬಳಿಕ ಮೀಡಿಯಾ ವಿಸಿಬಿಲಿಟಿಯನ್ನು ಆಫ್ ಮಾಡಿ.
ನೆನಪಿಡಿ. ಈ ಸೆಟ್ಟಿಂಗ್ ಬದಲಾವಣೆಯ ಬಳಿಕ ಡೌನ್ಲೋಡ್ ಮಾಡಿದ ಹೊಸ ಮೀಡಿಯಾ ಫೈಲ್ಗಳ ಮೇಲೆ ಮಾತ್ರ ಇದು ಪರಿಣಾಮ ಬೀರುತ್ತದೆ. ಈಗಾಗಲೇ ಡೌನ್ಲೋಡ್ ಆದ ಮೀಡಿಯಾ ಫೈಲ್ಗಳಿಗೆ ಇದು ಅನ್ವಯಿಸುವುದಿಲ್ಲ.
- ಹೆಚ್ಚಿನ ಆಯ್ಕೆಗಳನ್ನು ಟ್ಯಾಪ್ ಮಾಡಿ.
- ಸೆಟ್ಟಿಂಗ್ಸ್ಗೆ ಹೋಗಿ ಬಳಿಕ ಚಾಟ್ಸ್ಗೆ ಹೋಗಿ
- ಇಲ್ಲಿ ಮೀಡಿಯಾ ವಿಸಿಬಿಲಿಟಿ ಆಯ್ಕೆಯನ್ನು ಆಫ್ ಮಾಡಿ
ಇದು ನಿಮ್ಮ ವಾಟ್ಸಾಪ್ನ ಎಲ್ಲಾ ಚಾಟ್ಗಳಲ್ಲಿ ಆಟೋಮ್ಯಾಟಿಕ್ ಆಗಿ ಮೀಡಿಯಾಗಳು ಸೇವ್ ಆಗುವುದನ್ನು ತಪ್ಪಿಸುತ್ತದೆ ಹಾಗೂ ಸ್ವಚ್ಛ ಗ್ಯಾಲರಿಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ
- ವೈಯಕ್ತಿಕ ಚಾಟ್ ಅಥವಾ ಗ್ರೂಪ್ ಅನ್ನು ತೆರೆಯಿರಿ
- ಹೆಚ್ಚಿನ ಆಯ್ಕೆಗಳನ್ನು ಟ್ಯಾಪ್ ಮಾಡಿ ಮತ್ತು ವ್ಯೂ ಕಾಂಟ್ಯಾಕ್ಟ್ ಅಥವಾ ಗ್ರೂಪ್ ಇನ್ಫೋ ಅನ್ನು ಆಯ್ಕೆಯನ್ನು ಕ್ಲಿಕ್ ಮಾಡಿ
- ಇದರ ಜೊತೆಗೆ ಕಾಂಟ್ಯಾಕ್ಟ್ ಹೆಸರು ಅಥವಾ ಗ್ರೂಪ್ ಸಬ್ಜೆಕ್ಟ್ ಅನ್ನು ಟ್ಯಾಪ್ ಮಾಡಿ
- ಮೀಡಿಯಾ ವಿಸಿಬಿಲಿಟಿಯನ್ನು ಟ್ಯಾಪ್ ಮಾಡಿ. ಇಲ್ಲಿ `ನೋ’ ಎಂಬುದನ್ನು ಆಯ್ಕೆ ಮಾಡಿ ಮತ್ತು ಓಕೆ ಎಂಬುದನ್ನು ದೃಢೀಕರಿಸಿ