ಬೇಸಿಗೆಯಲ್ಲಿ ಫ್ಯಾನ್ ಇಲ್ಲದೆ ಮಲಗುವುದು ಕಷ್ಟ. ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲೂ ವಿದ್ಯುತ್ ಫ್ಯಾನ್ಗಳಿರುತ್ತದೆ. ಏರ್ ಕೂಲರ್ ಅಥವಾ ಎಸಿ ಖರೀದಿಸಲು ಸಾಧ್ಯವಾಗದೇ ಇರುವವರು ಬೇಸಿಗೆಯಲ್ಲಿ ಫ್ಯಾನ್ ಬಳಸುತ್ತಾರೆ. ಆದರೆ ಚಳಿಗಾಲದಲ್ಲಿ ಫ್ಯಾನ್ ಆನ್ ಮಾಡಿದರೆ, ಅದು ವೇಗವಾಗಿ ತಿರುಗದಿದ್ದರೂ ನಡೆಯುತ್ತದೆ. ಆದರೆ ಬೇಸಿಗೆ ಕಾಲದಲ್ಲಿ ಫ್ಯಾನ್ ಬೇಕೇ, ಬೇಕು. ಅದರಲ್ಲೂ ಫ್ಯಾನ್ ಜೋರಾಗಿ ತಿರುಗಬೇಕು, ಇಲ್ಲದಿದ್ದರೆ ಸೆಖೆ ತಡೆಯಲು ಆಗುವುದಿಲ್ಲ.
IPL 2024: ಬೆಂಗಳೂರಿನಲ್ಲಿ IPL ಪಂದ್ಯ – ತವರಲ್ಲಿ RCB ಗೆಲ್ಲಲು ಬದಲಾವಣೆ ಅಗತ್ಯ!
ಬೇಸಿಗೆ ಬಂತೆಂದರೆ ಸಾಕು ಒಂದು ನಿಮಿಷವೂ ಫ್ಯಾನ್ ಇಲ್ಲದೇ ಇರಲು ಸಾಧ್ಯವಾಗುವುದಿಲ್ಲ. ಸುಡು ಬಿಸಿಲಿನ ಮಧ್ಯೆ ಫ್ಯಾನ್ ಕಡಿಮೆ ವೇಗದಲ್ಲಿ ತಿರುಗುತ್ತಿದ್ದರೆ, ಜನ ಫ್ಯಾನ್ ಕೆಟ್ಟು ಹೋಗಿದೆ ಎಂದು ಅಂದುಕೊಳ್ಳುತ್ತಾರೆ. ಎಸಿ ಇಲ್ಲದ ಮನೆಗಳಿಗೆ ಇದು ದೊಡ್ಡ ಅನಾನುಕೂಲವನ್ನುಂಟು ಮಾಡುತ್ತದೆ. ದುಬಾರಿ ಹಣ ಕೊಟ್ಟು ಎಸಿ ಖರೀದಿಸಲು ಸಾಧ್ಯವಾಗದೇ ಇರುವವರು ಹಳೆ ಫ್ಯಾನ್ ಬಿಸಾಕಿ ಹೊಸ ಫ್ಯಾನ್ ಖರೀದಿಸಲು ಪ್ರಯತ್ನಿಸುತ್ತಾರೆ. ಆದರೆ ಇನ್ಮುಂದೆ ನೀವು ಹೆಚ್ಚಾಗಿ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಕೇವಲ 70 ರೂಪಾಯಿ ಸಾಕು ನಿಮ್ಮ ಹಳೆಯ ಫ್ಯಾನ್ ಜೋರಾಗಿ ತಿರುಗುವಂತೆ ಮಾಡಬಹುದು. ಅದು ಹೇಗೆ ಅಂತೀರಾ ಈ ಸ್ಟೋರಿ .
ಫ್ಯಾನ್ ವೇಗವನ್ನು 5ಕ್ಕೆ ಏರಿಸಿದರೂ, ಅದು ಇನ್ನೂ 1ರಲ್ಲಿ ಚಲಿಸುತ್ತಿದ್ದರೆ, ಇದಕ್ಕೆ ಹಲವು ಕಾರಣಗಳಿರಬಹುದು. ಫ್ಯಾನ್ ಬ್ಲೇಡ್ಗಳು ಧೂಳಿನಿಂದ ಕೊಳಕಾಗಿರುವುದು ಇದಕ್ಕೆ ಕಾರಣವಾಗಿರಬಹುದು. ಆ ಧೂಳು ಫ್ಯಾನ್ ರೆಕ್ಕೆಗಳ ತಿರುಗುವಿಕೆಯ ವೇಗವನ್ನು ಮಿತಿಗೊಳಿಸುತ್ತದೆ ಮತ್ತು ಗಾಳಿಯ ಹರಿವಿನ ಮೇಲೆ ಪರಿಣಾಮ ಬೀರುತ್ತದೆ.
ಫ್ಯಾನ್ ಬ್ಲೇಡ್ಗಳನ್ನು ಸ್ವಚ್ಛಗೊಳಿಸುವ ಮುನ್ನ ಫ್ಯಾನ್ ಅನ್ನು ಆಫ್ ಮಾಡಲು ಮರೆಯದಿರಿ. ಫ್ಯಾನ್ ಅನ್ನು ಆಫ್ ಮಾಡಿದ ನಂತರ ಫ್ಯಾನ್ ಬ್ಲೇಡ್ಗಳನ್ನು ಮೊದಲು ಒಣ ಬಟ್ಟೆಯಿಂದ ಮತ್ತು ನಂತರ ಒದ್ದೆಯಾದ ಬಟ್ಟೆಯಿಂದ ಸ್ವಚ್ಛಗೊಳಿಸಿ.
ನೀವು ಮೊದಲು ಒದ್ದೆಯಾದ ಬಟ್ಟೆಯನ್ನು ಬಳಸಿದರೆ ಎಲ್ಲಾ ಧೂಳಿನ ಕಣಗಳು ಫ್ಯಾನ್ ಬ್ಲೇಡ್ಗಳಿಗೆ ಅಂಟಿಕೊಳ್ಳುತ್ತವೆ ಮತ್ತು ಸರಾಗವಾಗಿ ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಒರೆಸಿದ ನಂತರವೂ ಅದರ ಮೇಲೆ ಕೊಳಕು ಉಳಿಯುತ್ತದೆ. ಹಾಗಾಗಿ ನೀವು ಮೊದಲು ಒಣ ಬಟ್ಟೆಯನ್ನು ಬಳಸಬೇಕು.
ಈ ವಿಧಾನವು ಕಾರ್ಯನಿರ್ವಹಿಸದಿದ್ದರೆ, ಕಂಡೆನ್ಸರ್ ಅನ್ನು ಹೆಚ್ಚಿಸುವ ಮೂಲಕ ನೀವು ಫ್ಯಾನ್ ಗಾಳಿಯ ವೇಗವನ್ನು ಹೆಚ್ಚಿಸಬಹುದು. ಸಾಮಾನ್ಯವಾಗಿ ಕಂಡೆನ್ಸರ್ 70-80 ರೂಪಾಯಿ ಒಳಗೆ ಬರುತ್ತದೆ. ಇದನ್ನು ಆನ್ಲೈನ್ ಇ-ಕಾಮರ್ಸ್ ಸೈಟ್ಗಳಿಂದ ಅಥವಾ ಎಲೆಕ್ಟ್ರಿಕಲ್ ಸ್ಟೋರ್ಗಳಿಂದ ಖರೀದಿಸಬಹುದು.
ಕೆಪಾಸಿಟರ್ ಅನ್ನು ಬದಲಾಯಿಸುವುದು ಅಷ್ಟು ಕಷ್ಟವಲ್ಲ. ನೀವೇ ಅದನ್ನು ಬದಲಾಯಿಸಬಹುದು. ಇದು ಫ್ಯಾನ್ ಮೋಟಾರ್ ಮೇಲೆ ಇರುತ್ತದೆ. ಹಳೆಯ ಕೆಪಾಸಿಟರ್ ಅನ್ನು ತೆಗೆದುಹಾಕುವಾಗ ಅದರ ತಂತಿಗಳನ್ನು ಹೇಗೆ ಹಾಕಲಾಗಿದೆ ಎಂಬುದರ ಬಗ್ಗೆ ಗಮನ ಕೊಡಿ. ನಿಖರವಾಗಿ ಅದೇ ರೀತಿಯಲ್ಲಿ ಹೊಸ ಕೆಪಾಸಿಟರ್ ಅನ್ನು ಹೊಂದಿಸಬಹುದು. ಆ ನಂತರ ಫ್ಯಾನ್ ಆನ್ ಮಾಡಿದರೆ, ಅದು ಸೂಪರ್ ಸ್ಪೀಡ್ ನಲ್ಲಿ ತಿರುಗುವುದನ್ನು ಗಮನಿಸಬಹುದು ಎನ್ನಲಾಗಿದೆ.