ಬೆಂಗಳೂರು:- ಇತ್ತೀಚೆಗೆ ಕರ್ನಾಟಕದಲ್ಲಿ ಸದ್ದು ಮಾಡುತ್ತಿರುವ BPL ಕಾರ್ಡ್ ವಿಚಾರ ಫಲಾನುಭವಿಗಳನ್ನು ಆತಂಕಕ್ಕೀಡುಮಾಡಿದೆ.
IPL 2025: ಈ ಬಾರಿ ಕಪ್ ನಮ್ದೆನಾ ಗುರು: ಕಾನ್ಫಿಡೆನ್ಸ್ ಕಳೆದುಕೊಂಡ RCB ಫ್ಯಾನ್ಸ್! ಕಾರಣ ಇಲ್ಲಿದೆ!
ಅಲ್ಲದೇ ಅನೇಕರ ಕಾರ್ಡ್ ರದ್ದಾಗಿದ್ದು, ಫಲಾನುಭವಿಗಳು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನೂ ರಾಜ್ಯ ಸರ್ಕಾರದ
ಬಿಪಿಎಲ್ ಕಾರ್ಡ್ ವಂಚಿತರಾದವರು ಚಿಂತೆ ಮಾಡಬೇಕಾಗಿಲ್ಲ. ಇನ್ನೂ 3 ದಿನದೊಳಗಡೆ ಪಡಿತರ ಪಡೆಯಬಹುದು ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ. ಪರಿಶೀಲನೆ ಮಾಡಿ ಅರ್ಹರಿಗೆ ಬಿಪಿಎಲ್ ಕಾರ್ಡ್ ವಾಪಸ್ ಆಗಲಿದೆ. ನವೆಂಬರ್ 28ರೊಳಗೆ ಸಮಸ್ಯೆಗೆ ಪರಿಹಾರ ಕೊಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಬಿಪಿಎಲ್ ಕಾರ್ಡ್ಗಳ ಗೊಂದಲ ನಿವಾರಣೆ ಆಗಿದೆ. ಒಂದು ವಾರದಲ್ಲಿ ಗೊಂದಲ ಪರಿಹರಿಸುವುದಾಗಿ ಹೇಳಿದ್ದೆ. ನವೆಂಬರ್ 28 ರ ನಂತ್ರ ಹಿಂದಿನಂತೆ ಬಿಪಿಎಲ್ ಕಾರ್ಡ್ನವ್ರು ಪಡಿತರ ಪಡೆಯಬಹುದು. ಬಿಪಿಎಲ್ ಕಾಡ್೯ ಪರಿಷ್ಕರಣೆಯಲ್ಲಿ ನಾವು ಕೇಂದ್ರ ಸರ್ಕಾರದ ಮಾನದಂಡಗಳು ಅನುಸರಿಸಿದ್ದೇವೆ ಹೊರತು ಯಾವುದೇ ಅವೈಜ್ಞಾನಿಕ ಕ್ರಮ ಅನುಸರಿಸಿಲ್ಲ ಎಂದಿದ್ದಾರೆ.