‘ಬಾಹುಬಲಿ’ (Bahubali) ಕಟ್ಟಪ್ಪನ ಹಳೇ ಲವ್ ಸ್ಟೋರಿಗೆ ಈಗ ಜೀವ ಬಂದಿದೆ. ಅದೆಲ್ಲಿಯ ಕಟ್ಟಪ್ಪ ಅದೆಲ್ಲಿಯ ನಮಿತಾ? ಇಬ್ಬರಿಗೂ ಪ್ರೇಮಾಂಕುರ ಆಗಿದ್ದೆಲ್ಲಿ? ಇನ್ನೇನು ಮದುವೆ ಆಗಿಬಿಟ್ಟಿರು ಎನ್ನುವಾಗ ಅಡ್ಡಗಾಲು ಹಾಕಿದ ಇನ್ನೊಬ್ಬ ನಟ ಯಾರು? ಬ್ರೇಕಪ್ ಬಗ್ಗೆ ಇಲ್ಲಿದೆ ಮಾಹಿತಿ.
ಬಣ್ಣದ ಲೋಕದಲ್ಲಿ ಯಾರ ಜೊತೆಯಾದರೂ ಎಲ್ಲಿ ಬೇಕಾದರೂ ಪ್ರೀತಿ ಉಕ್ಕುತ್ತದೆ. ಅದನ್ನು ಪ್ರೀತಿ ಅಂತೀರೋ. ಆಕರ್ಷಣೆ ಅಂತೀರೊ ನಿಮಗೆ ಬಿಟ್ಟಿದ್ದು. ಒಟ್ಟಿನಲ್ಲಿ ಆ ಹಸಿ ಬಿಸಿ ಏನೊ ಒಂದನ್ನು ತಂದು ಗಂಡು ಹೆಣ್ಣನ್ನು ಜಂಟಿ ಮಾಡುತ್ತದೆ. ಅದಕ್ಕೆ ಸಾಕ್ಷಿ ಬಾಹುಬಲಿಯ ಕಟ್ಟಪ್ಪ ಅಲಿಯಾಸ್ ಸತ್ಯರಾಜ್ (Sathyaraj) ಹಾಗೂ ಹಾಟ್ ಕ್ವೀನ್ ನಮಿತಾ. ಇಬ್ಬರೂ ಆ ಕಾಲದಲ್ಲಿ ಅದು ಹೇಗೊ ಜಂಟಿಯಾಗಿ ಕುಂಟಾಬಿಲ್ಲೆ ಆಡಲು ತಯಾರಾಗಿದ್ದರು. ಸತ್ಯರಾಜ್ ಮದುವೆ ಆಗಲು ಸಜ್ಜಾಗಿದ್ದರು. ಆದರೆ ಶರತ್ಕುಮಾರ್ ಅಡ್ಡಗಾಲು ಹಾಕಿದರು.
ಸತ್ಯರಾಜ್ಗೆ ಅದಾಗಲೇ ಮದುವೆಯಾಗಿತ್ತು. ಮಕ್ಕಳೂ ಇದ್ದರು. ಆದರೆ ಮನಸಿನ ಬಿಸಿ ಕೇಳಬೇಕಲ್ಲವೆ? ನಮಿತಾ ಬಲೆಗೆ ಬಿದ್ದರು. ಇನ್ನೇನು ಮದುವೆ ಆಗಬೇಕೆನ್ನುವಾಗಲೇ ನಟ ಶರತ್ಕುಮಾರ್ ಕಣ್ಣು ಈಕೆ ಮೇಲೆ ಬಿತ್ತು. ಆತನೂ ಅದಾಗಲೇ ಮದುವೆ ಆಗಿದ್ದರು. ಆದರೂ ಇನ್ನೊಂದು ಸೀರೆಯ ಚಟ ಕೇಳಬೇಕಲ್ಲವೆ? ಅದಕ್ಕೆ ನಮಿತಾ ಹಿಂದೆ ಬಿದ್ದ. ನಮಿತಾ (Namitha) ಕ್ಯಾಸೆಟ್ ಚೇಂಜ್ ಮಾಡಿದರು. ಸತ್ಯರಾಜ್ ಜಾಗಕ್ಕೆ ಶರತ್ ಬಂದ. ಆಮೇಲೆ ಈಕೆ ಆತನಿಗೂ ದಕ್ಕಲಿಲ್ಲ. ಈತನಿಗೂ ಇಲ್ಲ. ಬಣ್ಣಕ್ಕೆ ನಿಯತ್ತು ಎಲ್ಲಿಯದು?