ಜನರು ಬ್ಯುಸಿನೆಸ್ ಗೆ ಕೈ ಹಾಕ್ತಾರೆ. ಅದ್ರಲ್ಲಿ ಯಶಸ್ವಿಯಾಗುವ ಕನಸು ಕಂಡು ಅದಕ್ಕೆ ಹಣ ಸುರಿಯುತ್ತಾರೆ. ಆದ್ರೆ ದಿನ ಕಳೆದಂತೆ ಹಣಕಾಸಿನ ಸಮಸ್ಯೆ ಹಾಗೂ ಸರಿಯಾದ ಪ್ಲಾನಿಂಗ್ ಇಲ್ಲದೆ ಮಾಡುವ ಕೆಲಸ ವ್ಯವಹಾರದಲ್ಲಿ ಹಿನ್ನಡೆಯಾಗಲು ಕಾರಣವಾಗುತ್ತದೆ.
ಈಗಿನ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ಟ್ ಅಪ್ ಕಂಪನಿಗಳಿಗೆ ಹಣ ಇಲ್ಲದಂತಾಗಿದೆ. ಇದೇ ಕಾರಣಕ್ಕೆ ಅವು ತಮ್ಮ ಉದ್ಯೋಗಿ ಗಳನ್ನು ಕೆಲಸದಿಂದ ತೆಗೆಯುತ್ತಿವೆ. ಐಬಿಎಂನ ಇತ್ತೀಚಿನ ವರದಿಯಲ್ಲಿ ಈ ಬಗ್ಗೆ ಹೇಳಲಾಗಿದೆ. ವರದಿಯ ಪ್ರಕಾರ, 91 ಪ್ರತಿಶತದಷ್ಟು ಸ್ಟಾರ್ಟ್ಅಪ್ಗಳು ಪ್ರಾರಂಭವಾದ ಐದು ವರ್ಷಗಳಲ್ಲಿ ಮುಚ್ಚುತ್ತವೆ. ನೀವು ಈಗಾಗಲೇ ಸ್ಟಾರ್ಟ್ ಅಪ್ ಹೊಂದಿದ್ದರೆ ಅಥವಾ ಸ್ಟಾರ್ಟ್ ಅಪ್ ಶುರು ಮಾಡುವ ಆಲೋಚನೆಯಲ್ಲಿದ್ದರೆ ಮೊದಲು ಅದ್ರ ಪ್ಲಾನಿಂಗ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಕೊನೆಯಲ್ಲಿ ಕೈಸುಟ್ಟುಕೊಳ್ಳುವ ಬದಲು ಆರಂಭದಿಂದಲೇ ಪ್ಲಾನ್ ರೀತಿಯಲ್ಲಿ ಕೆಲಸ ಮಾಡಿದ್ರೆ ಯಶಸ್ಸು ಸಾಧ್ಯ.
ಮೊದಲು ಈ ಕೆಲಸಗಳನ್ನು ಮಾಡಬೇಕು;-
*ಉತ್ತಮ ಉದ್ಯೋಗಿಗಳು
*ಗ್ರಾಹಕರನ್ನು ಹಿಡಿದಿಡಿ
*ಪ್ರಚಾರಕ್ಕೆ ಗಮನ ನೀಡಿ
*ಆಫರ್ ಮತ್ತು ಡಿಸ್ಕೌಂಟ್ ಗೆ ಆದ್ಯತೆ ನೀಡಿ
*ಸ್ಪರ್ಧಿಗಳ ಬಗ್ಗೆ ತಿಳಿದಿರಿ
ನಿಮ್ಮ ಕೆಲಸಕ್ಕೆ ಉದ್ಯೋಗಿಗಳು ಬೇಕು ಎನ್ನುವ ಕಾರಣಕ್ಕೆ ಉದ್ಯೋಗಿಗಳ ನೇಮಕ ಮಾಡಿಕೊಳ್ಳಬೇಡಿ. ನೀವು ಹಾಗೂ ನಿಮ್ಮ ಜೊತೆ ಕೆಲಸ ಮಾಡುವವರು ಸ್ಟಾರ್ಟ್ ಅಪ್ ಕಂಪನಿಯ ಯಶಸ್ಸಿಗೆ ಮುಖ್ಯ ಪಾತ್ರವಗಿಸುತ್ತಾರೆ. ಒಂದಾಗಿ, ಗುಂಪಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗಬೇಕು, ಎಲ್ಲರೂ ಒಂದಾಗಿ, ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು ಅಂದ್ರೆ ಒಳ್ಳೆಯ ಉದ್ಯೋಗಿಗಳ ನೇಮಕ ಮುಖ್ಯ.
ಗ್ರಾಹಕರ ಸಂಖ್ಯೆ ಹೆಚ್ಚಾದಂತೆ ನಿಮ್ಮ ಕಂಪನಿ ಏಳ್ಗೆ ಕಾಣುತ್ತದೆ. ಹಾಗಂತ ನೀವು ಹಳೆ ಗ್ರಾಹಕರನ್ನು ನಿರ್ಲಕ್ಷ್ಯ ಮಾಡಬಾರದು. ಈಗಾಗಲೇ ನಿಮ್ಮ ಬಳಿ ಇರುವ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಜೊತೆಗೆ ಹೊಸ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡಬೇಕು.
ನೀವೆಷ್ಟೆ ಒಳ್ಳೆಯ ಉತ್ಪನ್ನ ಅಥವಾ ಸೇವೆ ನೀಡ್ತಿದ್ದರೂ ಅದ್ರ ಬಗ್ಗೆ ಜನರಿಗೆ ತಿಳಿದಿಲ್ಲವೆಂದ್ರೆ ಗ್ರಾಹಕರ ಸಂಖ್ಯೆ ಹೆಚ್ಚಾಗೋದಿಲ್ಲ. ಹಾಗಾಗಿ ನಿಮ್ಮ ಸೇವೆ ಮತ್ತು ಉತ್ಪನ್ನದ ಬಗ್ಗೆ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಲು ಜಾಹೀರಾತುಗಳ ಸಹಾಯ ಪಡೆಯಬೇಕು
ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು, ಅವರಿಗೆ ಕಾಲಕಾಲಕ್ಕೆ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡುವುದು ಅವಶ್ಯಕ.
ನೀವು ಯಾವ ಕ್ಷೇತ್ರದಲ್ಲಿ ಬ್ಯುಸಿನೆಸ್ ಶುರು ಮಾಡಲು ಬಯಸಿದ್ದೀರಿ ಆ ಕ್ಷೇತ್ರದಲ್ಲಿ ಸ್ಪರ್ಧೆ ಹೇಗಿದೆ ಎಂಬುದನ್ನು ಮೊದಲು ಅರಿಯಿರಿ
ಈ ಎಲ್ಲಾ ಅಂಶಗಳನ್ನು ನೀವು ಫಾಲೋ ಮಾಡಿ ವ್ಯವಹಾರ ಆರಂಭಿಸಿದ್ರೆ ಸಕ್ಸಸ್ ಗ್ಯಾರಂಟಿ