ನಿನ್ನೆಗೆ ಹೋಲಿಸಿದರೆ ಇಂದು ಚಿನ್ನ ದರ ಕಡಿಮೆಯಾಗಿದೆ. ಬೆಳ್ಳಿ ದರ ಕಳೆದ 5 ದಿನಗಳಿಂದಲೂ ಸ್ಥಿರವಾಗಿಯೇ ಇದೆ.
ಮೊನ್ನೆ ಕೊಂಚ ಏರಿಕೆ ಕಂಡಿದ್ದರೂ ಬಾರಿ ವ್ಯತ್ಯಾಸವಾಗಿರಲಿಲ್ಲ. ಹಾಗಾದರೆ ಇಂದು ದೇಶದಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ನೋಡೋಣ. ಇಂದು 1 ಗ್ರಾಂ ಚಿನ್ನದ ಬೆಲೆ 5,850 ರೂ. ಆಗಿದೆ. ನಿನ್ನೆ 5,875 ರೂ. ಇದ್ದು ಇಂದು 25 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,800 ರೂ. ನೀಡಬೇಕು. ನಿನ್ನೆ 47,000 ರೂ ಇದ್ದು ಈ ದರಕ್ಕೆ ಹೋಲಿಸಿದೆ ಇವತ್ತು 200 ರೂ ಇಳಿಕೆಯಾಗಿದೆ. ಇಂದಿನ 10 ಗ್ರಾಂ ಚಿನ್ನದ ಬೆಲೆ 58,500 ಆಗಿದ್ದರೆ, ನಿನ್ನೆ 58,750 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 250 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 5,85,000 ರೂ. ಇದೆ. ನಿನ್ನೆ 5,87,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ ಇಂದು 2,500 ರೂ ಕಡಿಮೆಯಾಗಿದೆ.
1 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ಇಂದು 6,382 ರೂ ಆಗಿದೆ. ನಿನ್ನೆ 6,409 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 27 ರೂ. ಕಡಿಮೆಯಾಗಿದೆ. 8 ಗ್ರಾಂ ಚಿನ್ನಕ್ಕೆ ಇಂದು 51,056 ರೂ ನೀಡಬೇಕು. ನಿನ್ನೆ 51,272 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 216 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 63,820 ರೂ. ಕೊಡಬೇಕು. ನಿನ್ನೆ 64,090 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 270 ರೂ. ಏರಿಕೆಯಾಗಿದೆ. ಇವತ್ತು 100 ಗ್ರಾಂ ಚಿನ್ನದ ದರ 6,38,200 ರೂ. ಇದೆ. ನಿನ್ನೆ 6,40,900 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 2,700 ರೂ. ಹೆಚ್ಚಾಗಿದೆ.
ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 58,500 ರೂ ಇದ್ದರೆ, 24 ಕ್ಯಾರೆಟ್ಗೆ 63,820 ರೂ. ಇದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇತ್ಯಾದಿ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.