ಲ್ಯಾಪ್ಟಾಪ್ಗಳು ಟೆಕ್ಲೋಕವನ್ನು ಆವರಿಸಿಕೊಂಡಿದೆ. ಲ್ಯಾಪ್ಟಾಪ್ಗಳನ್ನು ಸುಲಭವಾಗಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಟೆಕ್ನಾಲಜಿ ಪ್ರಪಂಚದಲ್ಲಿ ಲ್ಯಾಪ್ಟಾಪ್ಗಳ ಪಾತ್ರ ಬಹಳ ಮುಖ್ಯವಾಗಿದೆ.
ಸುಲಭವಾಗಿ ಸಾಗಿಸಬಹುದಾದ ಈ ಕಂಪ್ಯೂಟರ್ ಸಾಧನ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಕೇವಲ ಐಟಿ ಮತ್ತು ಸಾಫ್ಟ್ವೇರ್ ಕ್ಷೇತ್ರಕ್ಕೆ ಮಾತ್ರ ಲ್ಯಾಪ್ಟಾಪ್ ಸೀಮಿತವಾಗಿಲ್ಲ, ಇನ್ನಿತರ ವಲಯಗಳಿಗೂ ಈ ಲ್ಯಾಪ್ಟಾಪ್ನ ಅಗತ್ಯ ತುಂಬಾ ಇದೆ. ಇನ್ನೂ ಇತ್ತೀಚಿನ ದಿನಗಳಲ್ಲಿ ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಹೆಚ್ಚು ಪ್ರಚಲಿತದಲ್ಲಿದೆ. ಕರೊನಾ ನಂತರ ವರ್ಕ್ ಫ್ರಮ್ ಹೋಮ್ ಆಯ್ಕೆ ಹೆಚ್ಚು ಮುನ್ನೆಲೆಗೆ ಬಂದಿತು. ಅನೇಕರು ಮನೆಯಲ್ಲಿ ಕೆಲಸ ಮಾಡುವಾಗ ತಮ್ಮ ತೊಡೆಯ ಮೇಲೆ ಲ್ಯಾಪ್ಟಾಪ್ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಹೆಚ್ಚು ಹೊತ್ತು ತೊಡೆಯ ಮೇಲೆ ಲ್ಯಾಪ್ಟ್ಯಾಪ್ ಇಟ್ಟು ಕೆಲಸ ಮಾಡುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ.
ಕ್ಯಾನ್ಸರ್ ಬರುವ ಸಾಧ್ಯತೆ
ಚರ್ಮದ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಸಂಶೋಧಕರ ಪ್ರಕಾರ ಲ್ಯಾಪ್ಟಾಪ್ ಖಾಸಗಿ ಭಾಗಗಳಿಗೆ ಹತ್ತಿರವಾಗಿದ್ದರೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗುತ್ತದೆಯಂತೆ. ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುವಾಗ ಬೆನ್ನು ಮತ್ತು ಕುತ್ತಿಗೆಯನ್ನು ಒಂದೇ ಆಯಂಗಲ್ನಲ್ಲಿ ಬಾಗಿಸಬೇಕಾಗುತ್ತದೆ. ಇದರಿಂದ ಬೆನ್ನು ಮತ್ತು ಕುತ್ತಿಗೆಯ ನೋವಿಗೆ ಕಾರಣವಾಗುತ್ತದೆ. ಹೀಗಾಗಿ ಟೇಬಲ್ ಮೇಲೆ ಇಟ್ಟು ಕೆಲಸ ಮಾಡುವುದು ಉತ್ತಮ ಮಾರ್ಗವೆಂದು ಸಂಶೋಧಕರು ಸಲಹೆ ನೀಡುತ್ತಾರೆ.
ಇಎಂಎಫ್ ತುಂಬಾ ಡೇಂಜರ್
ಅಂದಹಾಗೆ ಲ್ಯಾಪ್ಟಾಪ್ ಇಎಂಎಫ್ ಎಂದು ಕರೆಯಲ್ಪಡುವ ವಿದ್ಯುತ್ಕಾಂತೀಯ ಶಕ್ತಿ (ಎಲೆಕ್ಟ್ರೋಮೋಟಿವ್ ಫೋರ್ಸ್)ಯನ್ನು ವಿವಿಧ ತರಂಗಾಂತರಗಳಲ್ಲಿ ಹೊರಸೂಸುತ್ತದೆ. ಇವು ಆರೋಗ್ಯಕ್ಕೆ ತುಂಬಾನೇ ಡೇಂಜರ್. ಲ್ಯಾಪ್ಟಾಪ್ ಅನ್ನು ತೊಡೆಯ ಮೇಲೆ ಇಟ್ಟುಕೊಳ್ಳುವುದು ಚರ್ಮ ಮತ್ತು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ವಿದ್ಯುತ್ಕಾಂತೀಯ ವಿಕಿರಣವು ತುಂಬಾ ಅಪಾಯಕಾರಿಯಾಗಿದೆ.
ಪುರುಷರಲ್ಲಿ ಫಲವತ್ತತೆ ಕಡಿಮೆ
ಇನ್ನೂ ಲ್ಯಾಪ್ಟಾಪ್ ಹತ್ತಿರ ಕೆಲಸ ಮಾಡುವ ಗರ್ಭಿಣಿಯರಿಗೂ ತುಂಬಾ ಪ್ರಭಾವ ಬೀರುತ್ತದೆ. ಹುಟ್ಟುವ ಮಗುವಿನ ಮೇಲೆ ಲ್ಯಾಪ್ಟಾಪ್ ವಿದ್ಯುತ್ಕಾಂತೀಯ ವಿಕಿರಣವು ಪರಿಣಾಮ ಬೀರಬಹುದು. ಹೆಚ್ಚು ಕೆಲಸ ಮಾಡಿದಷ್ಟು ಲ್ಯಾಪ್ಟಾಪ್ಗಳ ಶಾಖ ಹೆಚ್ಚಾಗುತ್ತದೆ. ಈ ಶಾಖವು ಪುರುಷರಲ್ಲಿ ವೀರ್ಯ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ.