ಬೆಂಗಳೂರು: ನಿರ್ಲಕ್ಷ್ಯ ಇರಬೇಕು ಇಷ್ಟೋದಾ ಈಗಾ..ಜನ ಬ್ಯಾಕ್ ಟು ಬ್ಯಾಕ್ ಬೀದಿಪಾಲಾದ್ರೂ ಎಚ್ಚೆತ್ತುಕೊಂಡಿಲ್ಲ ಅಂದ್ರೆ ಹೇಗೆ,ಹೌದು ಬೆಂಗಳೂರು ನಗರದಲ್ಲಿ ಬೆಸ್ಕಾಂ ಅದಿಕಾರಿಗಳ ನಿರ್ಲಕ್ಷ್ಯ ದಿನೇ ದಿನೇ ಜಾಸ್ತಿಯಾದ್ರೂ ಹೇಳೊರಿಲ್ಲ ಕೇಳೊರಿಲ್ಲ ಅನ್ನೋ ಪರಿಸ್ಥಿತಿ ಇದೆ..ನಗರದೆಲ್ಲಡೆ ಯಮ ಅವತಾರ ತಾಳಿರುವ ಬೆಸ್ಕಾಂ ತಂತಿಗಳು ಪದೇ ಪದೇ ಮುಗ್ಧ ಜೀವಗಳನ್ನು ಬಲಿ ಪಡೆಯುತ್ತಲೇ ಇವೆ. ಕಾಡುಗೋಡಿಯಲ್ಲಿ ಗರ್ಭಿಣಿ ತಾಯಿ ಮತ್ತು 9 ತಿಂಗಳ ಕಂದಮ್ಮನನ್ನು ಬಲಿ ಪಡೆದ್ರೂ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ . ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಹೇಗಿದೆ ಅಂತ ತೋರಿಸುತ್ತೇವೆ ನೋಡಿ
ಸರ್ಕಾರೀ ಇಲಾಖೆಗಳು ಜನರನ್ನ ರಕ್ಷಿಸುವ ಕೆಲಸ ಮಾಡಬೇಕು. ಆದ್ರೆ ಬೆಂಗಳೂರು ನಗರದಲ್ಲಿ ವಿವಿಧ ಇಲಾಖೆಗಳು ಜನರ ಜೀವ ತೆಗೆಯುವ ಕೆಲಸ ಮಾಡ್ತಿವೆ. ಒಂದು ಕಡೆ ಬಿಬಿಎಂಪಿ ನಿರ್ಲಕ್ಷ್ಯದಿಂದ ಜನರ ಗುಂಡಿಗಳಿಂದ ಸಾವನ್ನಪುತ್ತಿದ್ರೆ ಮತ್ತೊಂದೆಡೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾದಿಬೀದಿಯಲ್ಲಿ ಜನ ಸಾವನ್ನುಪ್ಪುತ್ತಿದ್ದಾರೆ. ಕಳೆದ ತಿಂಗಳು ಕಾಡುಗೋಡಿ ಬಳಿ ತಾಯಿ- ಮಗು ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ್ರು.
ಬಳಿಕ ನಗರದಲ್ಲಿ ಡೇಂಜರ್ ಸ್ಪಾಟ್ ಗಳನ್ನ ದುರಸ್ಥಿ ಮಾಡುತ್ತೇವೆ ಅಂತ ಬೆಸ್ಕಾಂ ಬುರಡೆ ಬಿಟ್ಟಿತ್ತು. ಆದ್ರೆ ದುರಂತ ನಡೆದು ತಿಂಗಳು ಕಳೆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ನಗರದೆಲ್ಲಡೆ ಇನ್ನೂ ಡೇಂಜರ್ ಸ್ಪಾಟ್ ಗಳು ತಾಡವಾಡ್ತಿವೆ. ನಗರದಲ್ಲಿ ಸುಮಾರು 30 ಸಾವಿರ ಡೇಂಜರ್ ಸ್ಪಾಟ್ ಗಳು ಇವೆ ಅಂತ ಬೆಸ್ಕಾಂ ಅಂಕಿ ಅಂಶಗಳು ಬಿಡುಗಡೆ ಮಾಡಿರೋದು ಜನರ ಆತಂಕಕ್ಕೆ ಕಾರಣವಾಗಿದೆ.
How to Peel Ginger: ಸಿಂಪಲ್ ಟ್ರಿಕ್ಸ್ ಮೂಲಕ ಶುಂಠಿ ಸಿಪ್ಪೆ ಫಟಾಫಟ್ ಆಗಿ ಸುಲಿಯಬಹುದು..!
ಬೆಂಗಳೂರಿನಲ್ಲಿ ವಿದ್ಯುತ್ ಅವಘಡ ದಿಂದ ಸಂಭವಿಸಿದ ತಾಯಿ-ಮಗು ಸಾವಿನ ಪ್ರಕರಣವು ಬೆಸ್ಕಾಂಗೆ ಎಚ್ಚರಿಕೆಯ ಗಂಟೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನೂ 30 ಸಾವಿರ ವಿದ್ಯುತ್ ಅವಘಡಗಳಿಗೆ ಆಹ್ವಾನ ನೀಡುವಂತಿದ್ದು, ಯಮಸ್ವರೂಪಿ ವಿದ್ಯುತ್ ತಂತಿಗಳು ಹಾಗೂ ಟ್ರಾನ್ಸ್ಫಾರ್ಮರ್ ಗಳು ಬಲಿಗೆ ಕಾದಿವೆ.ಆದ್ರೂ ಬೆಸ್ಕಾಂ ಎಚ್ಚೆತ್ತುಕೊಂಡಿಲ್ಲ.
ದುರಂತದ ಬಳಿಕ ಎಚ್ಚೆತ್ತು ಸರ್ವೇ ಮಾಡಿದ ಅಧಿಕಾರಿಗಳಿಗೆ ಡೆಡ್ಲಿ ಸ್ಪಾಟ್ ಗಳ ಸಂಖ್ಯೆಯೇ ನೋಡಿ ಶಾಕ್ ಆಗಿದೆ .ದುರಂತ ನಡೆದ ಬಳಿಕ ಡೆಡ್ಲಿ ಸ್ಪಾಟ್ಗಳನ್ನ ಪತ್ತೆ ಹಚ್ಚೋದಾಗಿ ತಿಳಿಸಿದ ಬೆಸ್ಕಾಂ ಅಧಿಕಾರಿಗಳು ಬಳಿಕ 63 ಸಾವಿರ ಅಪಾಯಕಾರಿ ಸ್ಥಳಗಳನ್ನ ಪತ್ತೆ ಹಚ್ಚಿದ್ರು. ಈಗಾಗಲೇ 33 ಸಾವಿರ ಡೇಂಜರ್ ಸ್ಪಾಟ್ ಗಳನ್ನ ದುರಸ್ಥಿ ಮಾಡಿದ್ದು, ಇನ್ನೂ 30 ಸಾವಿರದ 223 ವಿದ್ಯುತ್ ಸ್ಪಾಟ್ ಗಳಿವೆ ಅಂತ ಬೆಸ್ಕಾಂ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
ಅಪಾಯಕಾರಿ ತಂತಿಗಳನ್ನು ಪತ್ತೆ ಮಾಡಿ ಅಪಾಯಕಾರಿ ಟ್ರಾನ್ಸ್ ಫರ್ಮರ್ ಗಳ ಸುತ್ತ ಬೇಲಿ ಅಳವಡಿಸಿ ಸುರಕ್ಷತಾ ಕ್ರಮ ಕೈಗೊಳ್ಳುವ ಸಂಬಂಧ ಮೊದಲು ಇಲಾಖೆ ಸಮೀಕ್ಷೆ ನಡೆಸಬೇಕು. ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅದನ್ನು ಸರಿ ಪಡಿಸುವ ಪ್ರಯತ್ನ ಮಾಡಬೇಕು. ಅ ಕೆಲಸ ಮಾಡುತ್ತಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಕಳೆದ ಐದು ವರ್ಷದಲ್ಲಿ 70 ಕ್ಕಿಂತಲೂ ಹೆಚ್ಚು ಮುಗ್ದರು ಜೀವ ಕಳೆದುಕೊಂಡಿದ್ದಾರೆ.ಸದ್ಯ ಅಗುತ್ತಿರುವ ಹಾಗೂ ಆಗುವ ಅನಾಹುತಗಳಿಗೆ ಇಲಾಖೆಯ ಮುಖ್ಯಸ್ಥರು ಹೊಣೆ ಹೊರತು ಸಿಬ್ಬಂದಿ ಅಲ್ಲ.
ಈ ವಾಸ್ತವ ಅರಿಯದೇ ಕೇವಲ ಸಿಬ್ಬಂದಿ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳು ಮೊದಲಿನಿಂದಲೂ ನಡೆಯುತ್ತಿವೆ.ರಸ್ತೆಗಳಲ್ಲಿ ಯಮರಾಜ ಉರುಳು ಹಾಕಿ ಕಾಯುತ್ತಿರುವಂತೆ ಟ್ರಾನ್ಸ್ಫರ್ಮರ್ ಗಳು ವಿದ್ಯುತ್ ತಂತಿಗಳನ್ನು ಉರುಳು ಬಿಟ್ಟು ಕಾಯುತ್ತಿವೆ. ಮುಟ್ಟಿದರೆ ಮೂರೇ ಕ್ಷಣಕ್ಕೆ ಬೂದಿ ಮಾಡಿ ಮಸಣ ಸೇರಿಸುವ ಡೇಂಜರ್ ಟ್ರಾನ್ಫರ್ಮಗಳು ನಗದಲ್ಲಿವೆ.ಜೀವ ತೆಗೆಯುವ ಈ ಟ್ರಾನ್ಸ್ ಫರ್ಮಗಳು, ತುಕ್ಕು ಹಿಡಿದಿರುವ ಕಂಬಿಗಳು, ರಸ್ತೆಗೆ ಬಿದ್ದು ಮೃತ್ಯು ತಂತಿಗಳು ಆಹ್ವಾನಕ್ಕೆ ಕಾಯುತ್ತಿವೆ.
ಒಟ್ಟಾರೆ ಬೆಂಗಳೂರಿನಲ್ಲಿ ಯಾವುದೇ ಟ್ರಾನ್ಸ್ಫರ್ಮರ್, ವಿದ್ಯುತ್ ಕಂಬ ನೋಡಿದರೂ ಒಂದಲ್ಲಾ ಒಂದು ಸಮಸ್ಯೆ ಎದ್ದು ಕಾಣುತ್ತಿದೆ. ಬೆಸ್ಕಾಂ ಏನೇನೋ ಸಾಹಸಗಳಿಗೆ ದುಂದು ವೆಚ್ಚ ಮಾಡುವ ಬದಲು ಮೂಲ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುವುದು ಸೂಕ್ತ. ಪದೇ ಪದೇ ವಿದ್ಯುತ್ ಅವಘಡಳು ಸಂಭವಿಸುತ್ತಿದ್ದರೂ ಈವರೆಗೂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಯೋಚಿಸಿಲ್ಲ. ಬೆಂಗಳೂರಿನ ರಸ್ತೆ ಬದಿಯ ಟ್ರಾನ್ಸ್ಫರ್ಮರ್ ಗಳಿಗೆ ಬೇಲಿ ಹಾಕುವುದು,
ನೇತಾಡುವ ತಂತಿಗಳನ್ನು ಮೇಲ್ಮಟ್ಟಕ್ಕೆ ಕಟ್ಟುವುದು, ತುಕ್ಕು ಹಿಡಿದಿರುವ ವಿದ್ಯುತ್ ಕಂಬಗಳನ್ನು ಬದಲಿಸುವ ನಿಟ್ಟಿನಲ್ಲಿ ಸಮಗ್ರವಾಗಿ ಅಧ್ಯಯನ ನಡೆಸಿ ಕ್ರಮ ವಹಿಸದ ಹೊರತು ಯಮ ಸ್ವರೂಪಿ ಟ್ರಾನ್ಸ್ಫರ್ಮರ್ಗಳು ಮತ್ತು ತಂತಿಗಳು ಮುಗ್ಧರನ್ನು ಬಲಿ ಪಡೆಯುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಇಂಧನ ಸಚಿವರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಚಿಂತನೆ ನಡೆಸುವುದು ಸೂಕ್ತ.ಇಲ್ಲದ್ರೆ ನಗರದಲ್ಲಿ ಮತ್ತಷ್ಟು ಜನ ಬಲಿಯಾಗ್ತಾರೆ.