ಬೆಂಗಳೂರು:- ಸಿಲಿಕಾನ್ ಸಿಟಿ ಜನರು ಇದು ನೀವು ನೋಡಲೇಬೇಕಾದ ಸ್ಟೋರಿ. ಕಾವೇರಿ ನೀರನ್ನು ಸ್ಟಾಕ್ ಮಾಡಿ ಇಟ್ಟುಕೊಂಡಿದ್ದೀರಾ!?ಏಕೆಂದರೆ ಇಂದು ಸಂಪೂರ್ಣ ನೀರು ಪೂರೈಕೆ ಬಂದ್ ಇರಲಿದೆ.
ಬಾಕಿ ವೇತನಕ್ಕೆ ಆಗ್ರಹ: ಮತ್ತೆ ಹೋರಾಟಕ್ಕೆ ಮುಂದಾದ 108 ಅಂಬುಲೆನ್ಸ್ ಸಿಬ್ಬಂದಿ!
220 ಕೆವಿ ವಿದ್ಯುತ್ ಮಾರ್ಗದಲ್ಲಿರುವ 220 ಕೆವಿ High Level Bus GOS ಮತ್ತು ಇತರೆ ಪರಿಕರಗಳು ತುರ್ತು ದುರಸ್ಥಿ ಹಿನ್ನೆಲೆ ನೀರು ಪೂರೈಕೆಯಲ್ಲಿ ನಾಳೆ ಅಂದರೆ ಇಂದು ನೀರು ಪೂರೈಕೆ ಸಂಪೂರ್ಣ ಬಂದ್ ಇರಲಿದೆ. ಈ ಹಿನ್ನೆಲೆಯಲ್ಲಿ ಬಿಡಬ್ಲ್ಯೂಎಸ್ಎಸ್ಬಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದೆ.
ನವೆಂಬರ್ 14ರಂದು ಎಲ್ಲಾ ಹಂತಗಳ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಕಾವೇರಿ ನೀರು ಪೂರೈಕೆ ಕಾರ್ಯಾಚರಣೆ ಸಂಪೂರ್ಣ ಬಂದ್ ಆಗಲಿದೆ.
ಬೆಂಗಳೂರು ನಗರದ ಹೊರವಲಯಲ್ಲಿರುವ ತಾತಗುಣಿ ವಿದ್ಯುತ್ ಸ್ಥಾವರದಲ್ಲಿ ದುರಸ್ಥಿ ಕಾರ್ಯ ನಡೆಯಲಿದ್ದು, ಪರಿಣಾಮ ಕಾವೇರಿ ನೀರು ಸರಬರಾಜು ಯೋಜನೆಯ ಎಲ್ಲಾ ಹಂತಗಳ ಜಲರೇಚಕ ಯಂತ್ರಗಾರಗಳು ಸ್ಥಗಿತವಾಗಲಿದೆ.
ಸುಮಾರು ಎರಡು ಗಂಟೆಗಳ ಕಾಲ ಎಲ್ಲಾ ಸ್ಥಾವರದಲ್ಲಿ ದುರಸ್ಥಿ ಕೆಲಸ ನಡೆಯಲಿದ್ದು, ಈ ಕಾರ್ಯ ಪೂರ್ಣಗೊಂಡ ಬಳಿಕ ಎಂದಿನಿಂತೆ ನೀರಿನ ಪಂಪ್ ಮಾಡುವ ಯಂತ್ರಗಾರಗಳು ಕೆಲಸ ಮಾಡಲಿದೆ. ಆದ್ದರಿಂದ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಿ, ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಮನವಿ ಮಾಡಿದೆ
ವೃಷಭಾವತಿ 220 ಕೆವಿ ವಿದ್ಯುತ್ ಸ್ಥಾವರ ಮತ್ತು ತಾತಗುಣಿ ವಿದ್ಯುತ್ ಸ್ಥಾವರ ನಡುವಿನ 220 ಕೆವಿ ವಿದ್ಯುತ್ ಮಾರ್ಗದ ಉದ್ದಕ್ಕೂ 220 ಕೆವಿ ಹೈ ಲೆವೆಲ್ ಬಸ್ ಜಿಒಎಸ್ ಮತ್ತು ಇತರ ಉಪಕರಣಗಳನ್ನು ರಿಪೇರಿ ಮಾಡುವ ಕಾರ್ಯ ನಾಳೆ ನಡೆಯಲಿದೆ.