ಬೆಂಗಳೂರು,ಮಾ.17: ಈ ಹಿಂದಿನಿಂದಲೂ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಜಲಸಂಪನ್ಮೂಲ ಇಲಾಖೆಯಡಿ ಬರುವ “ಕರ್ನಾಟಕ ರಾಜ್ಯ ನೀರಾವರಿ ನಿಗಮ”ದಲ್ಲಿ ಅಕ್ರಮ ಮುಂಬಡ್ತಿ, ಅಕ್ರಮ ನೇಮಕಾತಿ ಗುಲ್ಲು ಸುದ್ದಿಕೇಂದ್ರದಲ್ಲಷ್ಟೇ ಅಲ್ಲದೇ ವಿಧಾನಸಭೆ( ಕೆಳಮನೆಯ)ಯ ನಡೆಯುತ್ತಿರುವ ಬಜೆಟ್ ಅಧಿವೇಶನಕ್ಕೂ ಮುಟ್ಟಿದೆ.ಈ ಬಗ್ಗೆ ನಿಯಮ 351ರ ಅಡಿಯಲ್ಲಿ ಜೆಡಿಎಲ್ಪಿ ನಾಯಕ ಸುರೇಶ್ ಬಾಬು ಕೇಳಿರುವ ಸೂಚನಾ ಪ್ರಶ್ನೆಗೆ ಡಿಸಿಎಂ ಆಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಲಿಖಿತ ಉತ್ತರ ನೀಡಿದ್ದಾರೆ.
ಕರ್ನಾಟಕ ನೀರಾವರಿ ನಿಗಮ ನಿಯಮಿತದಲ್ಲಿ ಅಕ್ರಮ ನೇಮಕಾತಿ / ನಿಯಮ ಬಾಹಿರ ಮುಂಬಡ್ತಿ ನೀಡಿರುವುದು, ಅದರಂತೆಯೇ ವೇತನ ಹಾಗೂ ಇನ್ನಿತರೆ ಸವಲತ್ತುಗಳನ್ನು ನಿಯಮ ಬಾಹಿರವಾಗಿ ಪಡೆದಿರುವ ಸಂಬಂಧ ಸರ್ಕಾರದಲ್ಲಿ ಸಾರ್ವಜನಿಕ ದೂರು ಸ್ವೀಕೃತಗೊಂಡಿರುವ ದೂರಿನಲ್ಲಿನ ಅಂಶಗಳ ಕುರಿತು ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸುವಂತೆ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಿರುವುದಾಗಿ ಡಿಕೆಶಿ ಹೇಳಿದ್ದಾರೆ.ಅಲ್ಲದೇ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಸಿರುವ ವರದಿಯು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುವುದಾಗಿ ಸಚಿವರು ಲಿಖಿತವಾಗಿ ಹೇಳಿದ್ದಾರೆ.
ಹೈಡ್ರೋಪೋನಿಕ್ ತೋಟಗಾರಿಕೆ ಎಂದರೇನು? ಮಣ್ಣು ಇಲ್ಲದೆ ಸಸ್ಯಗಳನ್ನು ಹೇಗೆ ಬೆಳೆಸಬಹುದು? ಇಲ್ಲಿದೆ ಮಾಹಿತಿ
ಅಂದ್ಹಾಗೆ ಡಿಸಿಎಂ ಡಿ.ಕೆ.ಶಿವಕುಮಾರ್ ನೀರಾವರಿ ನಿಗಮದಲ್ಲಿನ ಅಕ್ರಮಗಳ ಹರಿವನ್ನು ಪರಿಶೀಲನೆಯಲ್ಲಿದೆ ಎಂದಿದ್ದಾರಾದರೂ ಸಚಿವ ಈ ಲಿಖಿತ ಉತ್ತರದಿಂದ ನೊಂದವರು ತೃಪ್ತರಾಗಿಲ್ಲ. ನೊಂದವರು 2007ರಿಂದಲೂ ನೊಂದುಕೊಂಡೇ ಇದ್ದರೂ ಸಹ ಇದೂವರೆಗೆ ತಮಗೆ ನ್ಯಾಯ ದೊರೆತಿಲ್ಲ ಎಂದೇ ವಿಧಾನಸೌಧದ ಪಡಸಾಲೆಯಲ್ಲಿ ಸದ್ದುಮಾಡುತ್ತಿದ್ದಾರೆ.
ಕರ್ನಾಟಕ ನೀರಾವರಿ ನಿಗಮ, ನೋಂದಾಯಿತ ಕಛೇರಿ, ಬೆಂಗಳೂರು ಇಲ್ಲಿ ಸುಮಾರು 25 ನೌಕರರು ನಿಗಮದಲ್ಲಿ 2000 ದಿಂದ 2007 ರವರೆಗೆ ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು 2007 ರಲ್ಲಿ ನಿಗಮದ ಮಂಡಳಿ ಸಭೆಯ ಅನುಮೋದನೆ ಪಡೆದು ಖಾಯಂ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡು 2010 ರಲ್ಲಿ ನಿಗಮದ ಖಾಯಂ ನೌಕರರಾಗಿ ಸೇವೆಗೆ ಸೇರಿಕೊಂಡರು. ಆಗ ವೇತನ ನಿಗದಿ ಮಾಡುವಾಗ ಯಾವುದೇ ವಿದ್ಯಾರ್ಹತೆ, ಅನುಭವ, ವಯಸ್ಸು ಇತರೆ ಮಾನದಂಡಗಳನ್ನು ಪರಿಗಣಿಸದೆ ತಮಗಿಷ್ಟ ಬಂದಂತೆ ರೀತಿಯಲ್ಲಿ ಒಬ್ಬರಿಗೆ ಎರೆಡೆರೆಡು ಪದನಾಮಗಳನ್ನು designation ಬಳಸಿಕೊಂಡು ಸೇವಾ ಹಿರಿತನ ಹಾಗೂ ಇತರೆ ವಿಷಯಗಳನ್ನು ಪರಿಗಣಿಸಿರಲಿಲ್ಲ.
2021 ರ ನವೆಂಬರ್ ನಲ್ಲಿ ನಿಗಮದ ಹಣಕಾಸು ಶಾಖೆಯಲ್ಲಿ ಕೆಲವು ನೌಕರರು ತಮಗೆ ಇಷ್ಟ ಬಂದಂತೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿಕೊಂಡು ಸ್ಟೆನೋ ಕಂ ಆಫೀಸ್ ಅಸಿಸ್ಟೆಂಟ್ ಎಂಬ ಹೊಸ ಹುದ್ದೆಯನ್ನು ಸೃಷ್ಟಿಸಿ ತಮಗೆ ಇಷ್ಟ ಬಂದಂತೆ ಸುಮಾರು 15000 ಗಳ ವರೆಗೆ ಮೂಲ ವೇತನ ಹೆಚ್ಚಿಸಿಕೊಂಡು, ಪ್ರಬಾರ ಹುದ್ದೆಯ ಭತ್ಯೆಯನ್ನೂ ಪಡೆದುಕೊಂಡಿದ್ದಾರೆ ಇಲ್ಲಿ ಯಾವುದೇ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪಾಲಿಸಿಲ್ಲ. ಸ್ಟೆನೋ ಹುದ್ದೆಯಲ್ಲಿ ಕೆಲಸ ಮಾಡ ಬೇಕಾದರೆ ಸಂಪೂರ್ಣ ಜೂನಿಯರ್,
ಮಧ್ಯಂತರದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಉತ್ತೀರ್ಣ ರಾಗಿರಬೇಕು ಮತ್ತು ಪದವಿಧರರಾಗಿರಬೇಕು. ಆದರೆ ಇಂತಹ ವಿದ್ಯಾರ್ಹತೆಯ ಇಲ್ಲದೇ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಇವರಿಗೆ ಬೇಕಾದಂತೆ ವೇತನ ನಿಗದಿ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ.
ಈ ಬಗ್ಗೆ ಪರಿಶೀಲನೆಯಲ್ಲಿರುವುದಾಗಿ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದವರೂ ಸಹ ಹೇಳಿದ್ದರಾದರೂ ಯಾವುದೂ ಇದೂವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.ಯಾವುದೇ ತನಿಖೆಯಾಗಿಲ್ಲ.ಅಲ್ಲದೇ ಲೋಕಾಯುಕ್ತಕ್ಕೂ ಆರ್ಟಿಐ ಕಾರ್ಯಕರ್ತರು ಹಾಕಿದ್ದರೂ ಪ್ರಯೋಜನವಾಗಿಲ್ಲ ಎಂಬ ಅಳಲು ನೊಂದವರದ್ದಾಗಿದೆ.
Stenographer ಅಂದರೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಜೂನಿಯರ್ ಸೀನಿಯರ್ ಎರಡರಲ್ಲೂ ಉತ್ತೀಣರಾಗಿರಬೇಕು.. ಆದರೆ ಕರ್ನಾಟಕ ನೀರಾವರಿ ನಿಗಮದಲ್ಲಿ ಪಿಯುಸಿ ಮುಗಿಸಿ ಮೊದಲನೇ ವರ್ಷದ ಇಂಗ್ಲಿಷ್ ಸ್ಟೆನೋ ಮಾಡಿರುವವರು ಮತ್ತು Open University ಮುಕ್ತ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿರುವವರು ಸಹ ಜಿಪಿಎ ಆಗಿರುತ್ತಾರೆ.. ವಿಪರ್ಯಾಸ ಎಂದರೆ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದವರನ್ನು ನೌಕರಿಗಾಗಲಿ ಅಥವಾ ಮುಂಬಡ್ತಿಗಾಗಲಿ ಪರಿಗಣನೆ ಮಾಡಬೇಕೇ ಬೇಡವೇ ಎಂಬ ಬಗ್ಗೆ ಯುಜಿಸಿ ಇವರು ಸುಪ್ರೀಂಕೋರ್ಟ್ ನಲ್ಲಿ ದಾವೆ ಸಲ್ಲಿಸಿರುತ್ತಾರಾದರೂ ಇಲ್ಲಿಯವರೆಗೂ ಅಂತಿಮ ಆದೇಶ ಬಂದಿರುವುದಿಲ್ಲ
ಇಲ್ಲಿಯವರೆಗೆ ನಾನಾ ರೀತಿಯ ಕಾರಣ ಮತ್ತು ಸುಳ್ಳು ಹೇಳಿ ಬಡ್ತಿ ಪಡೆದವರನ್ನು ಕೆಲಸದಿಂದ ವಜಾಗೊಳಿಸಿ, ಇಲ್ಲಿಯವರೆಗೆ ಪಡೆದ ಸವಲತ್ತುಗಳನ್ನು ಕಿತ್ತುಹಾಕಿ ಅವರುಗಳು ಅಕ್ರಮವಾಗಿ ಪಡೆದ ಎಲ್ಲವನ್ನು ಸರ್ಕಾರ ಹಿಂಪಡೆಯಬೇಕು. ಅನ್ಯಾಯಕ್ಕೊಳಗಾದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ನಿಯಮಾನುಸಾರ ವೇತನ ನಿಗದಿ ಮಾಡಿ ಮುಂಬಡ್ತಿ ನೀಡಬೇಕೆಂದು ನೊಂದ ಸಿಬ್ಬಂದಿ ನೌಕರರ ಮತ್ತು ಅಧಿಕಾರಿಗಳ ಆಗ್ರಹವಾಗಿದೆ.
2007ರಲ್ಲಿ one time absorption ಮಾಡುವಾಗ ವಿದ್ಯಾರ್ಹತೆ, ಅನುಭವ, ವಯಸ್ಸು ಇತರೆ ಪ್ರಮಾಣ ಪತ್ರಗಳನ್ನು ಪರಿಶೀಲನೆ ಮಾಡಿರುವುದಿಲ್ಲ ನಂತರ GPA.. ಜಿಪಿಎ ಹುದ್ದೆಯನ್ನು ಸರ್ಕಾರದ ಸಚಿವಾಲಯದಲ್ಲಿ ಹಿರಿಯ ಐಎಎಸ್ ಅಧಿಕಾರಿಗಳ ಆಪ್ತಶಾಖೆಯಲ್ಲಿ ಶೀಘ್ರ ಲಿಪಿ ಕೆಲಸ ಮಾಡುವವರಿಗೆ ಮಾತ್ರ ನೀಡಲಾಗುತ್ತಿತ್ತು ಆದರೆ 150 ನಿಗಮ ಮಂಡಳಿಗಳಲ್ಲಿ ಇಲ್ಲದೆ ಇರುವ ಜಿಪಿಎ ಹುದ್ದೆಯು ಕರ್ನಾಟಕ ನೀರಾವರಿ ನಿಗಮಕ್ಕೆ ಮಾತ್ರ ಹೇಗೆ ಬಂತು ಇದು ತನಿಖೆಯಾಗಬೇಕಾಗಿದೆ.. ಈ ಅಕ್ರಮಗಳ ಹಿಂದೆ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗಿದೆ