ಅಡುಗೆ ಮಾಡೋರಿಗೆ, ಬಗೆ ಬಗೆಯ ಅಡುಗೆ ಮಾಡೋದು ಒಂದು ಚಿಂತೆಯಾದ್ರೆ, ಮಾಡಿದ ಅಡುಗೆ ಮಿಕ್ಕಿದ್ರೆ ಏನ್ ಮಾಡೋದಪ್ಪಾ ಅನ್ನೋದು ಇನ್ನೊಂದು ಚಿಂತೆ. ಸಾಮಾನ್ಯವಾಗಿ ಉಳಿದ ಅನ್ನದಿಂದ, ಚಿತ್ರಾನ್ನ, ಪುಳಿಯೋಗರೆ ಮಾಡೋದು ರೂಢಿ. ಆದರೆ, ಇದರಿಂದ ಇನ್ಸ್ಟಂಟ್ ಆಗಿ ದೋಸೆ ಯಾವತ್ತಾದರೂ ಟ್ರೈ ಮಾಡಿದ್ದೀರಾ? ಹೌದು,
ಉಳಿದ ಅನ್ನದಿಂದ, ಗರಿಗರಿಯಾದ, ರುಚಿಯಾದ ದೋಸೆ ತಯಾರಿಸಬಹುದು. ಇದು ಮಾಡೋಕ್ಕೂ ಸುಲಭ ಜೊತೆಗೆ ಅದೇ, ಚಿತ್ರಾನ್ನ ತಿಂದು ಬೇಜಾರಾದವರಿಗೆ ಇದೊಂದು ಉತ್ತಮ ಪರ್ಯಾಯ ಬ್ರೇಕ್ಫಾಸ್ಟ್. ಹಾಗಾದ್ರೆ, ಬನ್ನಿ ಉಳಿದ ಅನ್ನದಿಂದ ದೋಸೆ ಯಾವ ರೀತಿ ಮಾಡೋದು ಅಂತ ನೋಡ್ಕೋಂಡು ಬರೋಣ.
ಬೇಕಾಗುವ ಪದಾರ್ಥಗಳು:
- ರವೆ – 1 ಕಪ್
- ಉಳಿದ ಅನ್ನ- 1 ½ ಕಪ್
- ಹುಳಿ ಮೊಸರು – 1 ಕಪ್
- ರುಚಿಗೆ ಉಪ್ಪು
- ಅಡುಗೆ ಸೋಡಾ
- ಉಳಿದ ಅನ್ನದಿಂದ ತ್ವರಿತ ದೋಸೆ ಮಾಡುವುದು ಹೇಗೆ?:
ಬ್ಲೆಂಡರ್ ಜಾರ್ನಲ್ಲಿ 1 ಕಪ್ ರವೆ ತೆಗೆದುಕೊಳ್ಳಿ. ಅದನ್ನು ಪುಡಿಮಾಡಿ.
- ಈಗ 1 ½ ಕಪ್ ಉಳಿದ ಅನ್ನವನ್ನು ಗ್ರೈಂಡರ್ ಜಾರ್ಗೆ ಸೇರಿಸಿ, ಮತ್ತೆ ರುಬ್ಬಿಕೊಳ್ಳಿ.
- ನಂತರ 1 ಕಪ್ ಮೊಸರು ಸೇರಿಸಿ, ಮತ್ತೆ ಕೆಲವು ಸೆಕೆಂಡುಗಳ ಕಾಲ ಅದನ್ನು ರುಬ್ಬಿಕೊಳ್ಳಿ.
- ಈಗ ¾ ಕಪ್ ನೀರು ಸೇರಿಸಿ, ರುಬ್ಬಿಕೊಳ್ಳಿ.
- ಒಂದು ಬಟ್ಟಲಿಗೆ ಹಿಟ್ಟನ್ನು ಹಾಕಿ, ಬೌಲ್ ಅನ್ನು ಕವರ್ ಮಾಡಿ ಮತ್ತು 10 ನಿಮಿಷಗಳ ಕಾಲ ಬಿಡಿ.
- ಈಗ ಹಿಟ್ಟಿಗೆ ಉಪ್ಪು ಮತ್ತು ಚಿಟಿಕೆಯಷ್ಟು ಅಡುಗೆ ಸೋಡಾ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
- ಅಡುಗೆ ಸೋಡಾವನ್ನು ಹೆಚ್ಚು ಸೇರಿಸಬೇಡಿ. ಪ್ಯಾನ್ ಅನ್ನು ಬಿಸಿಗಿಟ್ಟು, ಲೋ ಫ್ಲೇಮ್ ಇಡಿ.
- ಈಗ ದೋಸೆ ಹರಡಿ, ಸ್ವಲ್ಪ ತುಪ್ಪ, ಎಣ್ಣೆ ಅಥವಾ ಬೆಣ್ಣೆಯನ್ನು ಹಚ್ಚಿ, ಬೇಯಿಸಿದರೆ, ಸವಿಯಲು ದೋಸೆ ಸಿದ್ಧ.