ಮನೆ ಎಂದ ಮೇಲೆ ಜಿರಳೆಗಳು, ಇಲಿಗಳ ಕಾಟ ಸಾಮಾನ್ಯ. ಅದರಲ್ಲೂ ಹಂಚಿನ ಮನೆಗಳಲ್ಲಿ ಇಲಿಗಳ ಕಾಟ ವಿಪರೀತ ಎಂದೇ ಹೇಳಬಹುದು. ಮನೆಯಲ್ಲಿ ಯಾವುದೇ ವಸ್ತು ಸರಿಯಾಗಿರುವುದಿಲ್ಲ. ಅಡುಗೆ ಸಾಮಾಗ್ರಿಯಿಂದ ಹಿಡಿದು , ಫೈಬರ್ ವಸ್ತುಗಳು, ಬಟ್ಟೆ, ಬೆಲೆಬಾಳುವ ದಾಖಲೆಗಳು, ಪುಸ್ತಕಗಳು ಮತ್ತು ತಂತಿಗಳನ್ನು ಕಚ್ಚಿ ಇಲಿ ಚಿಂದಿಯಾಗಿಸುತ್ತದೆ.
ಇನ್ನೂ ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯವರು ಬೋನ್ ತಂದು ಇಲಿ ಹಿಡಿಯಲು ಪ್ರಯತ್ನಿಸುವುದು, ಅವುಗಳನ್ನು ಕೊಲ್ಲಲು ಇಲಿ ಪಾಶನ ತರುವುದು ಹೀಗೆ ನಾನಾ ಪ್ರಯತ್ನಗಳನ್ನು ಪಡುತ್ತಾರೆ. ಆದರೆ ಇಲಿಗಳ ಕಾಟ ಮಾತ್ರ ತಪ್ಪುವುದಿಲ್ಲ. ಹೀಗಾಗಿ ನಾವಿಂದು ನಿಮಗೆ ತಿಳಿಸುವ ಕೆಲ ಮನೆಮದ್ದುಗಳನ್ನು ಬಳಸುವ ಮೂಲಕ ಇಲಿಯನ್ನು ನೀವು ಸುಲಭವಾಗಿ ಮನೆಯಿಂದ ಓಡಿಸಬಹುದು.
ಕೆಲವು ಮನೆಯಲ್ಲಿ ಇಲಿಗಳ ಕಾಟ ಹೆಚ್ಚಿದೆ. ಕೆಲವೊಮ್ಮೆ ಇಲಿಗಳು ಅಡುಗೆ ಮನೆಗೆ ಹೊಕ್ಕು, ಮಾಡಿಟ್ಟ ಅಡುಗೆಯನ್ನೂ ತಿನ್ನುತ್ತೆ, ಕೆಲವೊಮ್ಮೆ ಕಾಲಿನ ಮೇಲೆ ಓಡಾಡುವ ಮೂಲಕ ಭಯವನ್ನೂ ಸಹ ಮೂಡಿಸುತ್ತೆ. ದುಬಾರಿ ಬಟ್ಟೆಗಳನ್ನು ಸಹ ತಿಂದು ತೇಗಿ ಬಿಡುತ್ತೆ, ಪ್ಲಾಸ್ಟಿಕ್ ಡಬ್ಬಗಳನ್ನು ತಿಂದು ತುಂಡು ಮಾಡಿ ಬಿಡುತ್ತೆ. ಇಷ್ಟೇಲ್ಲಾ ಕಾಟ ಕೊಡುವ ಇಲಿಯನ್ನು ಹೇಗಾದರೂ ಮಾಡಿ ಮನೆಯಿಂದ ಓಡಿಸಬೇಕು ಎಂದು ಪ್ರತಿಯೊಬ್ಬರೂ ಯೋಚನೆ ಮಾಡ್ತಾರೆ. ನೀವು ಇಲ್ಲಿವರೆಗೆ ಇಲಿಗಳನ್ನು ಹೊಡೆದೋಡಿಸಲು ಹಲವಾರು ಉಪಾಯಗಳನ್ನು ಟ್ರೈ ಮಾಡಿ ಸೋತುಹೋಗಿದ್ದೀರಾ? ಹಾಗಿದ್ರೆ ಇನ್ನು ಮುಂದೆ ನೀವು ಅದಕ್ಕಾಗಿ ಭಯ ಪಡೋ, ಟೆನ್ಶನ್ ಮಾಡೋ ಅವಶ್ಯಕತೇನೆ ಇಲ್ಲ. ಯಾಕಂದ್ರೆ ನಿಮಗಾಗಿ ಒಂದು ವೈರಲ್ ವಿಧಾನವನ್ನು ಹೇಳ್ತೀವಿ. ಈ ಉಪಾಯವನ್ನು ಟ್ರೈ ಮಾಡಿದ್ರೆ, ಒಂದೂ ಇಲಿಗಳು ಉಳಿಯೋದಿಲ್ಲ. ಇಲಿಗಳನ್ನು ಕೊಲ್ಲದೆ ಮನೆಯಿಂದ ಹೊರಹಾಕುವಲ್ಲಿ ಈ ವಿಧಾನವು ಶೇಕಡಾ 100 ರಷ್ಟು ಕಾರ್ಯನಿರ್ವಹಿಸುತ್ತದೆ. ಅದಕ್ಕಾಗಿ ಏನು ಮಾಡಬೇಕು ನೋಡೋಣ.
ಏನೇನು ಬೇಕು?
2 ಚಮಚ ಗೋಧಿ ಹಿಟ್ಟು
ಒಂದು ಟೀ ಚಮಚ ಸಕ್ಕರೆ
ಸ್ವಲ್ಪ ದೇಸಿ ತುಪ್ಪ
ಫಿನೈಲ್ ಮಾತ್ರೆ
ಡಿಟರ್ಜೆಂಟ್ ಪುಡಿ
ಮೊದಲನೆಯದಾಗಿ, ಇಲಿಗಳನ್ನು ಆಕರ್ಷಿಸಿ
ಇಲಿಗಳನ್ನು ಓಡಿಸುವ ಮೊದಲು ಅವುಗಳನ್ನು ಆಕರ್ಷಿಸಬೇಕು. ಇದಕ್ಕಾಗಿ, ಗೋಧಿ ಹಿಟ್ಟಿನಲ್ಲಿ ಸಕ್ಕರೆ ಮತ್ತು ತುಪ್ಪವನ್ನು ಬೆರೆಸಿ ಸಾಮಾನ್ಯ ಹಿಟ್ಟಿನಂತೆ ನಾದಿ. ಹಿಟ್ಟು ಸ್ವಲ್ಪ ಮೃದುವಾಗಿರಬೇಕು ಎಂಬುದು ನೆನಪಿರಲಿ. ಈಗ ನೀವು ಅವುಗಳನ್ನು ಸಣ್ಣ ಚೆಂಡುಗಳನ್ನಾಗಿ ಮಾಡಿ.
ಇಲಿಗಳನ್ನು ಓಡಿಸುವ ಮಾರ್ಗ ಇದು
ಈಗ ನೀವು ಇಲಿ ನಿವಾರಕ ಪುಡಿಯನ್ನು ತಯಾರಿಸಬೇಕು, ಇದಕ್ಕಾಗಿ, ಫಿನಾಯಿಲ್ ಮಾತ್ರೆಯನ್ನು ಡಿಟರ್ಜೆಂಟ್ನಲ್ಲಿ ಅರೆದು ಮಿಶ್ರಣ ಮಾಡಿ. ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಹಿಟ್ಟಿನ ಸಣ್ಣ ಉಂಡೆಗಳನ್ನು ಮಾಡಿದ್ದೀರಲ್ಲ, ಅದರ ಮಧ್ಯದಲ್ಲಿ ಈ ಫಿನಾಯಿಲ್ ಮಾತ್ರೆ ಹಾಗೂ ಡಿಟರ್ಜೆಂಟ್ ಮಿಕ್ಸ್ ಮಾಡಿ ಸ್ಟಫ್ ಮಾಡಿ. ಇವುಗಳನ್ನು ಇಲಿ ಬರುವಂತಹ ಜಾಗದಲ್ಲಿರಿಸಿ. ಹಿಟ್ಟು, ಸಕ್ಕರೆ ಮತ್ತು ತುಪ್ಪ ಇಲಿಗಳನ್ನು ಆಕರ್ಷಿತವಾಗಿ, ಹಿಟ್ಟಿನ ಉಂಡೆಯನ್ನು ಅವು ತಿನ್ನೋದಕ್ಕೆ ಶುರುವಾಗುತ್ತೆ. ಬಳಿಕ ಡಿಟರ್ಜೆಂಟ್ ಮತ್ತು ಫಿನೈಲ್ನಿಂದ ತೊಂದರೆಗೊಳಗಾಗಿ ಇಲಿಗಳು ಅಲ್ಲಿಂದ ಓಡಿಹೋಗುತ್ತದೆ. ಅಷ್ಟೇ ಅಲ್ಲ, ಇಲಿಗಳು ಮತ್ತೆ ಯಾವತ್ತೂ ನಿಮ್ಮ ಮನೆಯೊಳಗೆ ಕಾಲಿಡುವ ಧೈರ್ಯ ಮಾಡೋದೆ ಇಲ್ಲ.