ಬ್ಯಾಂಕ್ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಪಡೆಯಲು ಪ್ಯಾನ್ ಕಾರ್ಡ್ ಕಡ್ಡಾಯ. ಪ್ಯಾನ್ ಕಾರ್ಡ್ ಇಲ್ಲದೆ ತೆರಿಗೆ ಪಾವತಿಗಳು ಅಥವಾ ವಹಿವಾಟುಗಳನ್ನು ಮಾಡಿದರೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಬಹುದು.
ವಿಜಯದಶಮಿಯ ಹಿನ್ನೆಲೆ ಏನು ಗೊತ್ತಾ!? ರಾಮಾಯಣ- ಮಹಾಭಾರತಕ್ಕೆ ಏನು ಸಂಬಂಧ? ನೀವು ತಿಳಿಯಲೇಬೇಕಾದ ವಿಚಾರ!
ಪ್ಯಾನ್ ಕಾರ್ಡ್ ಇಲ್ಲದಿದ್ದರೆ ತೆರಿಗೆ ಪಾವತಿಗಳು ಸಂಕೀರ್ಣವಾಗುತ್ತವೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್ ಇಲ್ಲದೆ ಸಾಧ್ಯವಿಲ್ಲ. ದೊಡ್ಡ ಮೊತ್ತದ ಬ್ಯಾಂಕ್ ವಹಿವಾಟುಗಳು, ಠೇವಣಿಗಳು ಅಥವಾ ಖರೀದಿಗಳನ್ನು ಮಾಡಲು ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಆ ವಹಿವಾಟುಗಳು ನಿಲ್ಲುತ್ತವೆ.
ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?
NSDL ಅಥವಾ UTIITSL ನ ಅಧಿಕೃತ ವೆಬ್ಸೈಟ್ಗಳಲ್ಲಿ ಪ್ಯಾನ್ ಕಾರ್ಡ್ ಅರ್ಜಿ ನಮೂನೆ ಲಭ್ಯವಿದೆ. ಇದನ್ನು ಭರ್ತಿ ಮಾಡಿ ಸಲ್ಲಿಸಬಹುದು. ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್, ಪಾಸ್ಪೋರ್ಟ್, ಮತದಾರರ ಗುರುತಿನ ಚೀಟಿ ಮುಂತಾದವುಗಳನ್ನು ನೀಡಬೇಕು. ಅದೇ ರೀತಿ ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಗ್ಯಾಸ್ ಬಿಲ್ ಇವುಗಳಲ್ಲಿ ಯಾವುದಾದರೂ ಒಂದನ್ನು ಅಪ್ಲೋಡ್ ಮಾಡಬೇಕು. ನಿಮ್ಮ ಜನನದ ದಿನಾಂಕವನ್ನು ದೃಢೀಕರಿಸುವ ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ಟಿಸಿ ಪ್ರಮಾಣಪತ್ರವನ್ನು ಸಹ ಅಪ್ಲೋಡ್ ಮಾಡಿ ಸಲ್ಲಿಸಬೇಕು.
ಪ್ಯಾನ್ ಕಾರ್ಡ್ನಲ್ಲಿ ಬದಲಾವಣೆ ಹೇಗೆ?
ನಿಮ್ಮ ಪ್ಯಾನ್ ಕಾರ್ಡ್ನಲ್ಲಿ ಹೆಸರು ತಪ್ಪಾಗಿದ್ದರೆ, ಫೋಟೋ ಬದಲಾಯಿಸಬೇಕಾದರೆ, ವಿಳಾಸದಲ್ಲಿ ತಪ್ಪುಗಳನ್ನು ಸರಿಪಡಿಸಬೇಕಾದರೆ ಈಗ ನೀವು ಸರ್ಕಾರಿ ಕಚೇರಿಗಳು ಅಥವಾ ನಿಮ್ಮ ಸೇವಾ ಕೇಂದ್ರಗಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ನಿಮಗೆ ಬೇಕಾದ ತಿದ್ದುಪಡಿಗಳನ್ನು ನೀವೇ ಮಾಡಿಕೊಳ್ಳಬಹುದು.
ನಿಮ್ಮ ಫೋನ್ನಲ್ಲಿ ಗೂಗಲ್ ತೆರೆಯಿರಿ.
ಅದರಲ್ಲಿ NSDL ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ.
pancard online application ಮೇಲೆ ಕ್ಲಿಕ್ ಮಾಡಿ.
ನಂತರ apply online ಕ್ಲಿಕ್ ಮಾಡಿ.
Application Type ಬಳಿ changes or correction in existing PAN Data ಆಯ್ಕೆಯನ್ನು ಆರಿಸಿ.
ನಂತರ categery ಆಯ್ಕೆಯಲ್ಲಿ Individual ಆಯ್ಕೆ ಮಾಡಿಕೊಳ್ಳಿ.
ಉಳಿದ ವಿವರಗಳನ್ನು ನಮೂದಿಸಿ.
ಕೊನೆಯಲ್ಲಿ ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ ಸಲ್ಲಿಸಿ.
ಈಗ ಟೋಕನ್ ಸಂಖ್ಯೆ ರಚನೆಯಾಗುತ್ತದೆ. ಅದನ್ನು ಸೇವ್ ಮಾಡಿಟ್ಟುಕೊಳ್ಳಿ.
ಈ ಅರ್ಜಿಯ ಕೆಳಗೆ continue ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಂತರ ತೆರೆದುಕೊಳ್ಳುವ ವಿಂಡೋದಲ್ಲಿ ನೀವು ಏನು ಬದಲಾಯಿಸಲು ಬಯಸುತ್ತೀರೋ ಅದನ್ನು ಬದಲಾಯಿಸಿ. ಹೆಸರು, ಜನ್ಮ ದಿನಾಂಕ, ಸಹಿ, ಫೋಟೋ ಮತ್ತು ವಿಳಾಸವನ್ನು ಸಹ ಬದಲಾಯಿಸಬಹುದು.
ಕೊನೆಯಲ್ಲಿ ಪಾವತಿ ಮಾಡಬೇಕು. ಇದನ್ನು ಸಹ ನೀವು ಆನ್ಲೈನ್ನಲ್ಲಿ ಪಾವತಿಸಬಹುದು.
ಈ ಪ್ರಕ್ರಿಯೆಗೆ ಶುಲ್ಕ ಕೇವಲ ರೂ.107 ಮಾತ್ರ. ಇದನ್ನು ನೀವು ಆನ್ಲೈನ್ನಲ್ಲಿ ಪಾವತಿಸಬಹುದು.
ಒಮ್ಮೆ ಆನ್ಲೈನ್ ಪಾವತಿ ಯಶಸ್ವಿಯಾದರೆ ನಿಮ್ಮ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಬದಲಾವಣೆಗಳು ಪೂರ್ಣಗೊಂಡ ನಂತರ ಹೊಸ ಪ್ಯಾನ್ ಕಾರ್ಡ್ ನಿಮ್ಮ ವಿಳಾಸದ ಪುರಾವೆಗೆ ನೀಡಿದ ವಿಳಾಸಕ್ಕೆ ಬರುತ್ತದೆ.