ಪ್ಯಾನ್ ಅಥವಾ ಖಾಯಂ ಖಾತೆ ಸಂಖ್ಯೆಯು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದು ಅಗತ್ಯ. ಆದ್ದರಿಂದ,ಪಾನ್ ಕಾರ್ಡ್ನ ಎಲ್ಲಾ ವಿವರಗಳನ್ನು ಅಪ್ ಡೇಟ್ ಮಾಡಿ ಇತ್ತೀಚಿನ ದಿನಾಂಕಕ್ಕೆ ಸರಿಹೊಂದಿಸುವುದು ಮುಖ್ಯ. ಪಾನ್ ಕಾರ್ಡ್ ಹಲವಾರು ಉಪಯೋಗಗಳನ್ನು ಹೊಂದಿದೆ. ಉದ್ಯಮದ ನೋಂದಾವಣೆ, ಹಣಕಾಸು ವಹಿವಾಟುಗಳು, ಬ್ಯಾಂಕ್ ಖಾತೆಯನ್ನು ತೆರೆಯಲು, ಫೋನ್/ಗ್ಯಾಸ್ ಸಂಪರ್ಕ ಪಡೆಯಲು,
ಮ್ಯೂಚ್ಯುವಲ್ ಫಂಡ್ಗಳಲ್ಲಿ ಹೂಡಿಕೆ ಇತ್ಯಾದಿಗಳಿಗೂ ಪಾನ ಕಾರ್ಡ್ನ್ನು ಬಳಸಬಹುದು.ಕೆಲವೊಮ್ಮೆ ನಿಗದಿತ ನಮೂನೆಗಳನ್ನು ತುಂಬುವುದೂ ಸವಾಲಿನ ಕೆಲಸವಾಗುತ್ತದೆ. ಹೀಗಾಗಿ ಪಾನ್ ಕಾರ್ಡ್ ಅರ್ಜಿಯಲ್ಲಿ ಹೆಸರು ಬರೆಯುವಾಗ ತಪ್ಪುಗಳೂ ಆಗಬಹುದು. ಇಂತಹ ತಪ್ಪುಗಳನ್ನು ಆನ್ಲೈನ್ನಲ್ಲಿ ಸುಲಭವಾಗಿ ಸರಿಪಡಿಸಿಕೊಳ್ಳಬಹುದು. ಇದಕ್ಕಾಗಿ ಅನುಸರಿಸಬೇಕಾದ ಕ್ರಮಗಳಿಲ್ಲಿವೆ.
ಪ್ಯಾನ್ ಕಾರ್ಡ್ನಲ್ಲಿ ಬದಲಾವಣೆ ಹೇಗೆ?
ನಿಮ್ಮ ಪ್ಯಾನ್ ಕಾರ್ಡ್(PAN)ನಲ್ಲಿ ಹೆಸರು ತಪ್ಪಾಗಿದ್ದರೆ, ಫೋಟೋ ಬದಲಾಯಿಸಬೇಕಾದರೆ, ವಿಳಾಸದಲ್ಲಿ ತಪ್ಪುಗಳನ್ನು ಸರಿಪಡಿಸಬೇಕಾದರೆ ಈಗ ನೀವು ಸರ್ಕಾರಿ ಕಚೇರಿಗಳು ಅಥವಾ ನಿಮ್ಮ ಸೇವಾ ಕೇಂದ್ರಗಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ನಿಮಗೆ ಬೇಕಾದ ತಿದ್ದುಪಡಿಗಳನ್ನು ನೀವೇ ಮಾಡಿಕೊಳ್ಳಬಹುದು.
ನಿಮ್ಮ ಫೋನ್ನಲ್ಲಿ ಗೂಗಲ್ ತೆರೆಯಿರಿ.
ಅದರಲ್ಲಿ NSDL ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ.
pancard online application ಮೇಲೆ ಕ್ಲಿಕ್ ಮಾಡಿ.
ನಂತರ apply online ಕ್ಲಿಕ್ ಮಾಡಿ.
Application Type ಬಳಿ changes or correction in existing PAN Data ಆಯ್ಕೆಯನ್ನು ಆರಿಸಿ.
ನಂತರ categery ಆಯ್ಕೆಯಲ್ಲಿ Individual ಆಯ್ಕೆ ಮಾಡಿಕೊಳ್ಳಿ.
ಉಳಿದ ವಿವರಗಳನ್ನು ನಮೂದಿಸಿ.
ಕೊನೆಯಲ್ಲಿ ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ ಸಲ್ಲಿಸಿ.
ಈಗ ಟೋಕನ್ ಸಂಖ್ಯೆ ರಚನೆಯಾಗುತ್ತದೆ. ಅದನ್ನು ಸೇವ್ ಮಾಡಿಟ್ಟುಕೊಳ್ಳಿ.
ಈ ಅರ್ಜಿಯ ಕೆಳಗೆ continue ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಂತರ ತೆರೆದುಕೊಳ್ಳುವ ವಿಂಡೋದಲ್ಲಿ ನೀವು ಏನು ಬದಲಾಯಿಸಲು ಬಯಸುತ್ತೀರೋ ಅದನ್ನು ಬದಲಾಯಿಸಿ. ಹೆಸರು, ಜನ್ಮ ದಿನಾಂಕ, ಸಹಿ, ಫೋಟೋ ಮತ್ತು ವಿಳಾಸವನ್ನು ಸಹ ಬದಲಾಯಿಸಬಹುದು.
ಕೊನೆಯಲ್ಲಿ ಪಾವತಿ ಮಾಡಬೇಕು. ಇದನ್ನು ಸಹ ನೀವು ಆನ್ಲೈನ್ನಲ್ಲಿ ಪಾವತಿಸಬಹುದು.
ಈ ಪ್ರಕ್ರಿಯೆಗೆ ಶುಲ್ಕ ಕೇವಲ ರೂ.107 ಮಾತ್ರ. ಇದನ್ನು ನೀವು ಆನ್ಲೈನ್ನಲ್ಲಿ ಪಾವತಿಸಬಹುದು.
ಒಮ್ಮೆ ಆನ್ಲೈನ್ ಪಾವತಿ ಯಶಸ್ವಿಯಾದರೆ ನಿಮ್ಮ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಬದಲಾವಣೆಗಳು ಪೂರ್ಣಗೊಂಡ ನಂತರ ಹೊಸ ಪ್ಯಾನ್ ಕಾರ್ಡ್ ನಿಮ್ಮ ವಿಳಾಸದ ಪುರಾವೆಗೆ ನೀಡಿದ ವಿಳಾಸಕ್ಕೆ ಬರುತ್ತದೆ.