ತುಪ್ಪವನ್ನು ಸ್ಪಷ್ಟೀಕರಿಸಿದ ಬೆಣ್ಣೆ ಎಂದೂ ಕರೆಯುತ್ತಾರೆ. ನಮ್ಮ ಭಾರತೀಯ ಅಡುಗೆ ಮನೆಗಳಲ್ಲಿ ಸದಾ ಕಾಲ ಕಾಣಸಿಗುವ, ಎಲ್ಲರಿಗೂ ಇಷ್ಟವಾಗುವ ಪದಾರ್ಥವೆಂದರೆ ಅದು ತುಪ್ಪ. ತುಪ್ಪದಲ್ಲಿ ಎಲ್ಲಾ ರೀತಿಯ ಅಡುಗೆ ಮಾಡಬಹುದು. ಅದರಲ್ಲೂ ಇದರಲ್ಲಿ ತಯಾರಿಸಿದ ಸಿಹಿತಿಂಡಿಗಳು ಬಹಳ ರುಚಿಯಾಗಿರುತ್ತವೆ. ವಿಶೇಷವಾಗಿ ಇದು ಭಕ್ಷ್ಯಕ್ಕೆ ವಿಶಿಷ್ಟ ಪರಿಮಳ ಮತ್ತು ಸುವಾಸನೆಯನ್ನೂ ನೀಡುತ್ತದೆ.
ತುಪ್ಪದ ಮುಂದೆ ಯಾವ ತೈಲವು ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಲಾಗಿಲ್ಲ. ತುಪ್ಪವನ್ನು ಆರೋಗ್ಯಕರ ಕೊಬ್ಬು ಎಂದೂ ಪರಿಗಣಿಸಲಾಗುತ್ತದೆ. ಆದರೆ ಇಂದು ಮಾರುಕಟ್ಟೆಯಲ್ಲಿ ನಕಲಿ ತುಪ್ಪದ ಹಾವಳಿಯೂ ಹೆಚ್ಚಾಗಿದೆ. ಅದಲ್ಲದೆ ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ ಬಳಸುತ್ತಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿರುವುದು ದೃಢವಾಗಿದೆ. ಇದರ ನಡುವೆ ಶುದ್ದ ತುಪ್ಪದ ಬಗ್ಗೆಯೂ ಅನುಮಾನಗಳು ವ್ಯಕ್ತವಾಗದೆ. ಹಾಗಾಗಿ ಇಂದು ಶುದ್ಧ ದೇಸಿ ತುಪ್ಪದ ಶುದ್ಧತೆಯನ್ನು ನೀವು ಹೇಗೆ ಕಂಡುಹಿಡಿಯಬಹುದು ಎಂಬುದನ್ನು ತಿಳಿಯಲು ಮುಂದೆ ಓದಿ.
ವಾಟರ್ ಟೆಸ್ಟ್: ನೀವು ಮನೆಗೆ ತಂದ ತುಪ್ಪವನ್ನು ಒಂದು ಚಮಚದಲ್ಲಿ ತೆಗೆದುಕೊಂಡು ಶುದ್ದ ನೀರಿನಲ್ಲಿ ಹಾಕಬೇಕು. ಹಾಗೇನಾದರೂ ನೀರಿನಲ್ಲಿ ನೀವು ಹಾಕಿದ ತುಪ್ಪ ತೇಲುತ್ತಿದ್ದರೆ ಅದು ಶುದ್ದವಾಗಿದೆ ಎಂದರ್ಥ.
ಹಾಟ್ ಟೆಸ್ಟ್: ಇನ್ನೊಂದು ಹಾಟ್ ಟೆಸ್ಟ್. ನೀವು ತಂದ ತುಪ್ಪವನ್ನು ಫುಲ್ ಬಿಸಿ ಮಾಡಬೇಕು. ಆ ಬಳಿಕ ಅದನ್ನು ಒಂದು ಗ್ಲಾಸ್ನಲ್ಲಿ ಹಾಕಿ ಫ್ರಿಜ್ನಲ್ಲಿ ಇಡಬೇಕು. ಹಾಗೇನಾದರೂ ಈ ತುಪ್ಪದಲ್ಲಿ ಸಪರೇಟ್ ಆದ ಲೇಯರ್ ಕಂಡು ಬಂದಲ್ಲಿ ಕಲಬೆರಕೆ ಆಗಿದೆ ಎಂದರ್ಥ. ಬೇರೆ ಯಾವುದಾದರೂ ಎಣ್ಣೆಯನ್ನು ತುಪ್ಪದಲ್ಲಿ ಮಿಶ್ರ ಮಾಡಿರಬಹುದು ಎನ್ನುವ ಸೂಚನೆ ನೀಡುತ್ತದೆ.
ಅಯೋಡಿನ್ ಟೆಸ್ಟ್: ನೀವು ತಂದ ತುಪ್ಪದಲ್ಲಿ ಸಣ್ಣ ಪ್ರಮಾಣದಲ್ಲಿ ಅಯೋಡಿನ್ಅನ್ನು ಮಿಶ್ರಣ ಮಾಡಬೇಕು. ಶುದ್ದ ತುಪ್ಪದ ಬಣ್ಣ ಯಾವುದೇ ಕಾರಣಕ್ಕೂ ಬದಲಾಗೋದಿಲ್ಲ. ಇನ್ನು ಕಲಬೆರಕೆ ತುಪ್ಪಕ್ಕೆ ಅಯೋಡಿನ್ ಹಾಕಿ ಮಿಕ್ಸ್ ಮಾಡುವ ವೇಳೆಗಾಗಲೇ ಅದು ನೀಲಿ ಬಣ್ಣಕ್ಕೆ ತಿರುಗುತ್ತದೆ.
ಹಸ್ತ ಪರೀಕ್ಷೆ: ನಾಲ್ಕನೇ ವಿಧ ಎಂದರೆ, ಹಸ್ತ ಪರೀಕ್ಷೆ. ತಂದ ತುಪ್ಪವನ್ನು ಸರಿಯಾಗಿ ನಿಮ್ಮ ಹಸ್ತದ ಮಧ್ಯಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾಕಬೇಕು. ಶುದ್ದ ತುಪ್ಪ, ಕರಗಿ ಬೀಳಲು ಆರಂಭವಾಗುತ್ತದೆ. ಎಷ್ಟು ಬೇಗ ಕರಗುತ್ತದೆಯೋ ಅಷ್ಟು ಶುದ್ದವಾದ ತುಪ್ಪ ಎಂದರ್ಥ. ಕಲಬೆರಕೆಯಾಗಿರುವ ತುಪ್ಪ ಬೇಗ ಕರಗುವುದಿಲ್ಲ.
ಎಚ್ಸಿಎಲ್ ಟೆಸ್ಟ್: ಕೊನೆಯ ಟೆಸ್ಟ್ ಏನೆಂದರೆ, ಎಚ್ಸಿಎಲ್ ಟೆಸ್ಟ್. ತುಪ್ಪದಲ್ಲಿ ಕೊಂಚ ಪ್ರಮಾಣದ ಹೈಡ್ರೋಕ್ಲೋರಿಕ್ ಆಸಿಡ್ಅನ್ನು ಹಾಕಬೇಕು. ಶುದ್ದ ತುಪ್ಪದ ಬಣ್ಣ ಯಾವುದೇ ಕಾರಣಕ್ಕೂ ಬದಲಾಗೋದಿಲ್ಲ. ಆದರೆ, ಕಲಬೆರಕೆ ತುಪ್ಪ ಕೆಂಪು ಬಣ್ಣಕ್ಕೆ ಬದಲಾಗುತ್ತದೆ.