ನಾವೆಲ್ಲರೂ ನಮ್ಮ ಜೀವನದಲ್ಲಿ ಬೆಕ್ಕನ್ನು ವಿಭಿನ್ನವಾಗಿ ನೋಡುತ್ತೇವೆ. ಕೆಲವರು ಬೆಕ್ಕು ರಸ್ತೆ ದಾಟುವುದನ್ನು ನೋಡುತ್ತಾರೆ ಮತ್ತು ಕೆಲವರು ಬೆಕ್ಕು ಮಿಯಾಂವ್, ಮಿಯಾಂವ್ ಎಂದು ಕೂಗುವುದನ್ನು ನೋಡುತ್ತೇವೆ. ಅದೇ ರೀತಿಯಲ್ಲಿ, ಕೆಲವೊಮ್ಮೆ ನಾವು ನಮ್ಮ ಕನಸಿನಲ್ಲಿ ಬೆಕ್ಕನ್ನು ನೋಡುತ್ತೇವೆ ಮತ್ತು ಅದೇ ರೀತಿಯಲ್ಲಿ, ಬೆಕ್ಕು ಖಂಡಿತವಾಗಿಯೂ ನಮ್ಮ ಜೀವನದೊಂದಿಗೆ ಸಂಬಂಧವನ್ನು ಹೊಂದಿದೆ.
ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್ ಬಳಸುತ್ತಿರುವುದು ದೃಢ: ಶಾಕಿಂಗ್ ವಿಚಾರ ಬೆಳಕಿಗೆ!
ರಸ್ತೆಯಲ್ಲಿ ಹೋಗುವಾಗ ಬೆಕ್ಕು ಅಡ್ಡ ಬಂದರೆ ಜನ ನಿಂತುಕೊಳ್ಳುವುದು ಅಥವಾ ಮಾರ್ಗವನ್ನೇ ಬದಲಾಯಿಸಿ ಹೋಗುವುದು ಸಾಮಾನ್ಯವಾಗಿದೆ. ಏಕೆಂದರೆ ಬೆಕ್ಕು ಅಡ್ಡ ಬಂದರೆ ಅಪಶಕುನ ಎಂದು ಜನ ಭಾವಿಸುತ್ತಾರೆ. ಅಲ್ಲದೇ ಎಲ್ಲಾದರೂ ಹೊರಗೆ ಹೋಗುವಾಗ ಬೆಕ್ಕಿನ ಮುಖವನ್ನು ನೋಡಿಕೊಂಡು ಹೋದರೆ ಅಶುಭ ಎಂದು ಕೂಡ ಅನೇಕ ಜನರು ಹೇಳುತ್ತಾರೆ. ಒಂದು ವೇಳೆ ಬೆಕ್ಕನ್ನು ನೋಡಿದರೆ, ಕೆಲ ಹೊತ್ತು ಮನೆಯಲ್ಲಿಯೇ ಕುಳಿತು ನಂತರ ಹೊರಡುತ್ತಾರೆ
ಬೆಕ್ಕು ದಾರಿಗೆ ಅಡ್ಡ ಬಂದರೆ ಒಳ್ಳೆಯದಲ್ಲ ಎಂಬ ನಂಬಿಕೆ ಭಾರತೀಯರಲ್ಲಿ ಮಾತ್ರವಲ್ಲದೇ ಇತರ ದೇಶಗಳಲ್ಲಿ ಸಹ ಇದೆ. ಕೆಲ ದೇಶಗಳಲ್ಲಿ ಬೆಕ್ಕು ಅಡ್ಡ ಬಂದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಬ್ರಿಟನ್, ಜರ್ಮನಿ , ಐಲ್ಯಾಂಡ್, ಜಪಾನ್ ಈ ದೇಶಗಳಲ್ಲಿಯೂ ಈ ಬೆಕ್ಕಿನ ವಿಚಾರವಾಗಿ ಅನೇಕ ನಂಬಿಕೆ ಇದೆ. ಹಾಗಾದ್ರೆ ಜ್ಯೋತಿಷ್ಯದ ಪ್ರಕಾರ ಬೆಕ್ಕು ಅಡ್ಡ ಬಂದರೆ ಏನಾಗುತ್ತದೆ ಎಂಬುದು ಇಲ್ಲಿದೆ.
ಒಂದು ವೇಳೆ ನೀವು ಎಲ್ಲಾದರೂ ತೆರಳುವಾಗ ಅಥವಾ ರಸ್ತೆಯಲ್ಲಿ ಬೆಕ್ಕು ಅಡ್ಡಬಂದರೆ ಅದೂ ಯಾವಾಗಲೂ ಕೆಟ್ಟ ಫಲಗಳನ್ನ ನೀಡುವುದಿಲ್ಲ. ಮುಖ್ಯವಾಗಿ ಕಪ್ಪು ಬೆಕ್ಕು ಅಡ್ಡ ಬಂದರೆ ಮಾತ್ರ ಅದು ಕೆಟ್ಟ ಫಲಗಳನ್ನ ನೀಡುತ್ತದೆ ಎನ್ನಲಾಗುತ್ತದೆ. ನಂಬಿಕೆಗಳ ಪ್ರಕಾರ ಕಪ್ಪು ಬೆಕ್ಕು ಶನಿ ದೇವನ ಸಂಕೇತ. ಹಾಗಾಗಿ ಶನಿ ನೀವು ಈಗ ಕೆಲಸಕ್ಕೆ ಹೋಗದಿರುವುದು ಉತ್ತಮ ಎನ್ನುವ ಸೂಚನೆ ನೀಡುತ್ತಿದ್ದಾನೆ ಎಂದರ್ಥ
ಜ್ಯೋತಿಷ್ಯದಲ್ಲಿ , ಶನಿಯು ನಿಮ್ಮನ್ನು ಹೊರಗೆ ಹೋಗದಂತೆ ಎಚ್ಚರಿಸಲು ಪ್ರಯತ್ನಿಸುತ್ತಿರಬಹುದು ಅಥವಾ ನೀವು ಹೋಗುತ್ತಿರುವ ಕೆಲಸವು ವಿಳಂಬವಾಗುತ್ತದೆ ಎಂಬುದರ ಸೂಚನೆ ಇದು ಎನ್ನಲಾಗುತ್ತದೆ. ಅದರಲ್ಲೂ ಅನೇಕ ಪ್ರದೇಶಗಳಲ್ಲಿ, ಕಪ್ಪು ಬೆಕ್ಕುಗಳನ್ನ ಅತಿ ದುರದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ಇದು ಸಾವಿನ ಶಕುನ ಎಂದು ಹೇಳಲಾಗುತ್ತದೆ.
ಇಂದು ನಾವು ಬೆಕ್ಕುಗಳಿಗೆ ಸಂಬಂಧಿಸಿದ ಕೆಲವು ಸೂಚನೆಗಳನ್ನ ನೋಡುತ್ತೇವೆ. ಮುಂಜಾನೆ ಬೆಕ್ಕನ್ನು ನೋಡುವುದು ಒಳ್ಳೆಯ ಸಂಕೇತವೆಂದು ಹೇಳಲಾಗುತ್ತದೆ. ಇದರರ್ಥ ನಿಮ್ಮ ಮನೆಗೆ ಸ್ನೇಹಿತ ಅಥವಾ ಅತಿಥಿ ಬರುತ್ತಿದ್ದಾರೆ ಅಥವಾ ನೀವು ಎಲ್ಲೋ ಪ್ರಯಾಣಿಸುತ್ತೀರಿ ಎಂಬುದನ್ನ ಇದು ಸೂಚಿಸುತ್ತದೆ. ಅದರಲ್ಲೂ ನೀವು ಬಿಳಿ ಬಣ್ಣದ ಬೆಕ್ಕನ್ನ ನೋಡಿದರೆ ಅದಕ್ಕಿಂತ ಅದೃಷ್ಟ ಬೇರೆ ಇಲ್ಲ ಎನ್ನಲಾಗುತ್ತದೆ.
ಕೆಲ ನಂಬಿಕೆಗಳ ಪ್ರಕಾರ ಬಿಳಿ ಬಣ್ಣದ ಬೆಕ್ಕನ್ನು ಲಕ್ಷ್ಮಿ ದೇವಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಬಿಳಿ ಬೆಕ್ಕನ್ನು ನೋಡುವುದು ಹಣದ ಆಗಮನವನ್ನು ಸೂಚಿಸುತ್ತದೆ. ಅಲ್ಲದೇ, ನೀವು ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡುವಾಗ ಅಥವಾ ಯಾವುದಾದರೂ ಪೂಜೆಗೆ ಹೊರಟಾಗ ಬೆಕ್ಕು ಕಂಡರೆ ಅಥವಾ ಬಂದರೆ, ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲಿರುತ್ತದೆ ಎಂದರ್ಥ. ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಎಂದೂ ಸಹ ಹೇಳಲಾಗುತ್ತದೆ.
ಹಾಗೆಯೇ, ಬೆಳಗ್ಗೆ ಕಪ್ಪು ಬೆಕ್ಕು ಕಂಡರೆ ಅಷ್ಟೊಂದು ಶುಭವಲ್ಲ ಎನ್ನಲಾಗುತ್ತದೆ. ಇದರಿಂದ ಕೆಟ್ಟ ಶಕ್ತಿಗಳು ನಿಮ್ಮ ಮನೆ ಪ್ರವೇಶಿಸಬಹುದು ಎನ್ನುತ್ತಾರೆ ಪಂಡಿತರು. ಅದಕ್ಕಾಗಿಯೇ ಅಂತಹ ಬೆಕ್ಕುಗಳನ್ನು ಕಂಡರೆ ದೂರ ಓಡಿಸಿ ಅದನ್ನ ಯಾವುದೇ ಕಾರಣಕ್ಕೂ ಮನೆಯಲ್ಲಿ ಸಾಕಬೇಡಿ.