ಬೆಂಗಳೂರು: ವಿಧಾನಸಭಾ ಚುನಾವಣೆ ಸೋಲುಕಂಡಿರುವ ಮಾಜಿ ಸಚಿವ ಡಾ.ಕೆ ಸುಧಾಕರ್ ಅವರಿಗೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ನೀಡಲಾಗಿದೆ. ರಾಜಕೀಯ ಎದುರಾಳಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Ration Card News Update: ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸುಧಾಕರ್ ಟಾರ್ಚರ್ ನಿಂದಲೇ ನಾನು ಶಾಸಕನಾಗಿದ್ದೇನೆ ಸುಧಾಕರ್ ಕಾಂಗ್ರೆಸ್ ಗೆ ಥ್ರೆಟ್ ಅಲ್ಲ. ಬಿಜೆಪಿಗೆ ಥ್ರೆಟ್ ಕೋವಿಡ್ ಹಗರಣದ ಎಲ್ಲ ತನಿಖೆ ಆಳವಾಗಿ ನಡೆಯುತ್ತಿದೆ ಒಂದು ಮಾಸ್ಕ್ 450 ರೂ.ಗೆ ಖರೀದಿ ಮಾಡಿ ಹಗರಣ ಮಾಡಿದ್ದಾರೆ ಅವರದೇ ಶಾಸಕ ವಿಶ್ವನಾಥ್ ಸುಧಾಕರ್ ಪರ ಕೆಲಸ ಮಾಡಲ್ಲ ಅಂದಿದ್ದಾರೆ ಐಟಿ ಈಡಿ ಬಿಟ್ಟು ಕಾಟ ಕೊಡ್ತೀರಾ ಸುಧಾಕರ್ ಅವರೇ ನಾನು ರೆಡಿ ಇದ್ದೀನಿ
ಡಾ.ಕೆ ಸುಧಾಕರ್ ಮತ ಹಾಕಿದರೆ ಪ್ರಜಾಪ್ರಭುತ್ವಕ್ಕೆ ಮಾರಕ ಸಾಮಾನ್ಯ ಜನರಿಗೆ ಸುಧಾಕರ್ ತೊಂದರೆ ಕೊಡ್ತಾರೆ ನಾಳೆ ನಂದಿ ಭೋಗ ನಂದೀಶ್ವರ ದೇವಸ್ಥಾನದಲ್ಲಿ ಯಾವುದೇ ಹಗರಣ ಮಾಡಿಲ್ಲ ಅಂತ ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದಾರಾ ಸುಧಾಕರ್ ಯಾವುದೇ ಹಗರಣ ಮಾಡಿಲ್ಲ ಅಂತ ದೇವಸ್ಥಾನದಲ್ಲಿ ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದಾರಾ? ಎಂದು ಪ್ರಶ್ನೆ ಮಾಡಿದರು.
ಹಾಗೆ ತಂದೆ ಬಾಮೈದನ ಹೆಸರಲ್ಲಿ ನೂರಾರು ಎಕರೆ ರಿಜಿಸ್ಟರ್ ಆಗಿದೆ ಸುಧಾಕರ್ ನೂರಾರು ಕೋಟಿ ಮಾಡಿದ್ದಾರೆ ಕಂಪನಿಗಳಿಗೆ ಇನ್ವೆಸ್ಟ್ ಮಾಡಿದ್ದಾರೆ ಶ್ರೀಲಂಕಾದಲ್ಲಿ ಅವರ ಪ್ರಾಪರ್ಟಿ ಇದೆ ಸದಾಶಿವನಗರದಲ್ಲಿ ಅವರ ಮನೆಯಿದೆ ಇದೆಲ್ಲವೂ ಎಲ್ಲಿಂದ ಬಂದಿದೆ ಸೋರ್ಸ್ ಹೇಳಲಿ ಎಂದು ಹೇಳಿದರು.