ಸಾಯಿ ಪಲ್ಲವಿ ಯಾವುದೇ ರೀತಿಯ ಎಕ್ಸ್ಪೋಸಿಂಗ್ ಸೀನ್ಗಳನ್ನು ಮಾಡದೇ ಅತಿ ಹೆಚ್ಚು ಆಫರ್ಗಳನ್ನು ಪಡೆಯುತ್ತಿರುವ ನಟಿ. ಇನ್ನು ಬಾಲ್ಯದ ಬಗ್ಗೆ ಸಾಯಿ ಪಲ್ಲವಿ ಆಡಿದ ಮಾತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಈ ನ್ಯಾಚುರಲ್ ಬ್ಯೂಟಿ ಸಂದರ್ಶನವೊಂದರಲ್ಲಿ ತನ್ನ ಬಾಲ್ಯದ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಬಾಲ್ಯದಲ್ಲಿ ಅವರ ತಂದೆ-ತಾಯಿ ಬಳಿ ಸಿಕ್ಕಾಪಟ್ಟೆ ಪ್ರಶ್ನೆಗಳನ್ನು ಕೇಳುತ್ತಿದ್ದರಂತೆ. ಅದರಲ್ಲಿ ಅವರನ್ನು ದತ್ತು ತೆಗೆದುಕೊಂಡಿದ್ದೀರಾ ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದರಂತೆ. ನಾನು ತುಂಬಾ ಬೆಳ್ಳಗಿದ್ದೇನೆ, ಫೇರ್ ಆಗಿದ್ದೇನೆ. ನಿನಗೇಕೆ ಡಸ್ಕಿ ಸ್ಕಿನ್ ಕಲರ್ ಇದೆ. ನನ್ನನ್ನು ದತ್ತು ತೆಗೆದುಕೊಂಡಿದ್ದೀರಾ ಎಂದು ತಂದೆ-ತಾಯಿಯನ್ನು ನೇರವಾಗೇ ಪ್ರಶ್ನಿಸುತ್ತಿದ್ರಂತೆ. ಕೊನೆಗೆ ಪೋಷಕರು ಸಾಯಿ ಪಲ್ಲವಿಗೆ ಮನವರಿಕೆ ಮಾಡಿದ್ದಾರೆ. ‘ನೀನು ನಿನ್ನ ತಂಗಿ ಇಬ್ಬರೂ ನಮ್ಮ ಮಕ್ಕಳೇ’ ಎಂದು ಹೇಳುತ್ತಿದ್ದರಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಸಾಯಿ ಪಲ್ಲವಿ ಮತ್ತು ನಟಿ ಪೂಜಾ ಕಣ್ಣನ್, ಸೆಂತಾಮರೈ ಕಣ್ಣನ್ ಮತ್ತು ರಾಧಾ ಅವರ ಮಕ್ಕಳಾಗಿದ್ದಾರೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮೂಲದವರಾಗಿದ್ದಾರೆ. ಸಾಯಿ ಪಲ್ಲವಿ ವೈದ್ಯಕೀಯ ಶಿಕ್ಷಣ ಪಡೆಯುತ್ತಲೇ ಚಿತ್ರರಂಗ ಪ್ರವೇಶಿಸಿದ್ರು. ಸದ್ಯ ಡಾಕ್ಟರ್ ಸಾಯಿ ಪಲ್ಲವಿ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ.