ಬೆಂಗಳೂರು: ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ, ಅದು ಕನಸು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಭಾರತ್ ಜೋಡೋ ಭವನದಲ್ಲಿ ನಡೆದ ನೆಹರು ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಬಿಜೆಪಿಗರು ಪದೇ ಪದೇ ವಿಕಸಿತ ಭಾರತ ಎಂದು ಹೇಳುತ್ತಾರೆ.
ವಿಕಸಿತ ಭಾರತ ಅವರ ನೈಜ ವಿಚಾರ ಅಲ್ಲ. ವಿಕಸಿತ ಭಾರತ ಆಗೋದು ಅವರಿಗೆ ಬೇಕಾಗಿಲ್ಲ. ಅವರಿಗೆ ಬೇಕಾಗಿರುವ ಹಿಡನ್ ಅಜೆಂಡಾ, ದೇಶವನ್ನು ಹಿಂದೂ ರಾಷ್ಟ್ರ ಮಾಡುವುದು. ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಆಗಲ್ಲ, ಈ ದೇಶ ಬಹುತ್ವ ರಾಷ್ಟ್ರ, ಎಲ್ಲಾ ವರ್ಗದ ಜನ ಇಲ್ಲಿದ್ದಾರೆ. ಸಂವಿಧಾನದ ಅನುಸಾರ ಎಲ್ಲರಿಗೂ ಸಮಾನತೆ ಸಿಗಬೇಕು ಎಂದು ಅವರು ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.
BBMP Recruitment 2024: ಬಿಬಿಎಂಪಿಯಲ್ಲಿ 11 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿ..! ಇಂದೇ ಅರ್ಜಿ ಸಲ್ಲಿಸಿ
ಪ್ರಧಾನಿ ನರೇಂದ್ರ ಮೋದಿಯವರಿಗೆ ಸೋಲ್ತೀವಿ ಎಂದು ಗೊತ್ತಾಗಿದೆ. ಅದಕ್ಕಾಗಿ ಬಾಯಿಗೆ ಬಂದಂತೆ ಅವರು ಮಾತಾಡ್ತಿದ್ದಾರೆ. ಮತಕ್ಕಾಗಿ ಹಿಂದೂ ಮುಸ್ಲಿಂ ವಿಭಜನೆ ಮಾಡಿ ಮಾತಾಡ್ತಾರೆ. ಹತಾಶೆಯಿಂದ ಹೀಗೆ ಮಾತಾಡುತ್ತಿದ್ದಾರೆ. ನರೇಂದ್ರ ಮೋದಿ ನನ್ನನ್ನು 2047ರ ತನಕ ಸೇವೆ ಮಾಡಲು ದೇವರು ಕಳಿಸಿದ್ದಾನೆ ಎನ್ನುತ್ತಾರೆ. ನರೇಂದ್ರ ಮೋದಿ ಏನು ದೇವರ ಅವತಾರನಾ? ಎಂದು ಅವರು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರ ಆರೋಪಗಳ ವಿಚಾರಕ್ಕೆ, ಕುಮಾರಸ್ವಾಮಿ ನಿನ್ನೆ ಸಹ ಮಾತನಾಡಿದ್ದಾರೆ. ಅಭಿವೃದ್ಧಿ ಶೂನ್ಯ ಅಂತ ಹೇಳಿದ್ದಾರೆ. ಜನರಿಗೆ ಸಾಮಾಜಿಕ ಆರ್ಥಿಕ ಶಕ್ತಿ ನೀಡುವುದು ಕೂಡ ಅಭಿವೃದ್ಧಿ. ಇಡೀ ದೇಶದಲ್ಲಿ ಮೋದಿ ಮಾಡಿದ್ದಾರಾ? ಬರೀ ರಸ್ತೆ ಮಾಡುವುದು ಸೇತುವೆ ಮಾಡುವುದು ನೀರಾವರಿ ಮಾಡುವುದು ಮಾತ್ರ ಅಭಿವೃದ್ಧಿ ಅಲ್ಲ ಎಂದು ಅವರು ತಿರುಗೇಟು ಕೊಟ್ಟಿದ್ದಾರೆ.