ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಹಗರಣ ತಣ್ಣಗಾಗುವಷ್ಟರಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಮತ್ತೊಂದು ಆರೋಪ ಕೇಳಿ ಬರ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮಾರು ಕೋಟಿ – ಕೋಟಿ ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಸಿಎಂ ಸಿದ್ದರಾಮಯ್ಯ ತಮ್ಮ ಪತ್ನಿಗೆ ಅಕ್ರಮವಾಗಿ ನಿವೇಶನ ಮಂಜೂರು ಮಾಡಿಸಿದ್ದಾರೆ ಅಂತ ವಿಪಕ್ಷ ಬಿಜೆಪಿ ಆರೋಪ ಮಾಡ್ತಿವೆ, ಬಿಜೆಪಿ ಆರೋಪಕ್ಕೆ ಸಿಎಂ ಸ್ಪಷ್ಟನೆ ಕೊಟ್ಟಿದ್ದು. ಮೂಡಾ ಅಕ್ರಮ ಖಂಡಿಸಿ ನಾಳೆ ಸಿಎಂ ಮನೆ ಮುತ್ತಿಗೆ ಹಾಕಲು ಬಿಜೆಪಿ ಸಿದ್ಧವಾಗಿದೆ…..
ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ನಾಗೇಂದ್ರ ತಲೆದಂಡವಾದ ಬೆನ್ನಲ್ಲೆ ಇದೀಗ ಸರ್ಕಾರದ ವಿರುದ್ದ ಮತ್ತೊಂದು ಆರೋಪ ಕೇಳಿಬಂದಿದೆ. ಅದ್ರಲ್ಲೂ ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೋಟಿ- ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ ಅಂತ ವಿಪಕ್ಷಗಳು ಸರ್ಕಾರದ ವಿರುದ್ದ ಪ್ರಶ್ನೆಗಳ ಸುರಿಮಳೆ ಮಾಡ್ತಿದ್ದಾರೆ. ಅದ್ರಲ್ಲೂ ಸಿಎಂ ಸಿದ್ದರಾಮಯ್ಯ ತಮ್ಮ ಪತ್ನಿಗೆ ಅಕ್ರಮವಾಗಿ ನಿವೇಶನ ಮಂಜೂರು ಮಾಡಿಸಿದ್ದಾರೆ ಎಂದು ಸಿಎಂ ತಲೆದಂಡಕ್ಕೆ ಮುಗಿಬಿದ್ದಿದೆ ಕೇಸರಿ ಟೀಂ….
ಮೂಡಾ ಅಕ್ರಮದ ಬಗ್ಗೆ ಮಾತನಾಡಿದ ಸಿಟಿ ರವಿ ಹಗರಣದ ಮಾಹಿತಿ ಸಂಗ್ರಹ ಮಾಡ್ತಿದ್ದೇವೆ.
ಅಗೆದಷ್ಟು, ಬಗೆದಷ್ಟು ಹೊರಗೆ ಬರ್ತಿದೆ. 15 ರಂದು ಅಧಿವೇಶನ ಆರಂಭವಾಗ್ತಿದೆ ಅಧಿವೇಶನದಲ್ಲಿ ಎಲ್ಲಾ ದಾಖಲೆ ಇಟ್ಟು ಚರ್ಚೆ ಮಾಡುತ್ತೇವೆ ಎಲ್ಲರ ಜಾತಕ ವಿಧಾನಸಭೆಯಲ್ಲಿ ಬಿಚ್ಚಿಡ್ತೇವೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ ರವಿ. ಇನ್ನು ಮಾಜಿ ಸಚಿವ ಸುನೀಲ್ ಕುಮಾರ್ ಸಹ ಆಕ್ರೋಶ ಹೊರಹಾಕಿದ್ದಾರೆ ಸ್ವತಃ ಮುಖ್ಯಮಂತ್ರಿ ಜಿಲ್ಲೆಯಲ್ಲೇ ಹಗರಣ ನಡೆದಿದ್ರೂ ಸಿಎಂ ಮೌನವಾಗಿದ್ದಾರೆ.ಅವರ ಕುಟುಂಬದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿದೆ, ಸಿದ್ದರಾಮಯ್ಯ ಅವರು ತಮ್ಮ ನೈತಿಕತೆ ಕಳೆದುಕೊಂಡಿದ್ದಾರೆ. ಹೌಸಿಂಗ್ ಬೋರ್ಡ್ ನಿವೇಶನ ಹಗರಣ ಕಂಡುಬರ್ತಿದೆ ಅಧಿವೇಶನ ನಡೆಯುವ ಸಂಧರ್ಭದಲ್ಲಿ ಎಲ್ಲಾ ದಾಖಲೆ ಇಟ್ಟು ಚರ್ಚೆ ಮಾಡುತ್ತೇವೆ ಅಂತ ಕಿಡಿ ಕಾರಿದ್ದಾರೆ…
ಮೂಡಾದ ನಡೆದಿದೆ ಎನ್ನಲಾದ ಆರೋಪದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿ ನಾಯಕರು ಟ್ವಿಟ್ ಮೂಲಕ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ವಾಲ್ಮೀಕಿ ಬಳಿಕ ಮೈಸೂರಿನ ಮುಡಾದಲ್ಲಿ ಕೋಟ್ಯಾಂತರ ರೂಪಾಯಿ ಗುಳುಂ ಮಾಡಿರುವ ಕುರಿತು ವಿಪಕ್ಷ ಟೀಕೆ ಹೆಚ್ಚಾಗುತ್ತಿದ್ದಂತೆ ನಿವೇಶನ ಹಂಚಿಕೆ ಮಾಡಿರುವ ಪ್ರಕರವನ್ನ ಗಂಭೀರವಾಗಿ ಪರಿಗಣಿಸಿದ ಸರ್ಕಾರ ಹೆಚ್ಚಿನ ತನಿಖೆಗೆ ಆದೇಶಿಸಿದೆ. 50:50 ಅನುಪಾತದಡಿ ಹಂಚಿಕೆ ಮಾಡಿದ್ದ ನಿವೇಶಗಳನ್ನ ರದ್ದುಗೊಳಿಸಿ, ನಾಲ್ವರು ಅಧಿಕಾರಿಗಳ ವರ್ಗಾವಣೆಗೆ ಮೌಕಿಕವಾಗಿ ಆದೇಶಿಸಲಾಗಿದೆ. ಐಎಎಸ್ ಅಧಿಕಾರಿಗಳಾದ ವೆಂಕಟಾಚಲಪತಿ, ಕವಳಗಿ ತನಿಖಾ ಅಧಿಕಾರಿಗಳನ್ನಾಗಿ ನೇಮಿಸಿ ನಾಲ್ಕು ವಾರದ ಒಳಗೆ ವರದಿ ನೀಡಲು ಸೂಚನೆ ನೀಡಲಾಗಿದೆ.ಈ ಹಿಂದೆ ಹಂಚಿಕೆಯಾದ ಎಲ್ಲಾ ನಿವೇಶಗಳನ್ನ ತಡೆಹಿಡಿಯಬೇಕೆಂದು ಆದೇಶವನ್ನ ಮಾಡಲಾಗಿದೆ.
ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಕಾಳುಮೆಣಸಿನ ದರ: ಬೆಳೆಗಾರರ ಮೊಗದಲ್ಲಿ ಮಂದಹಾಸ
ಇನ್ನೂ ಮೈಸೂರಿನ ಮೂಡ ಹಗರಣದ ವಿಚಾರಕ್ಕೆ ವಿಪಕ್ಷಗಳು ಮಾಡುತ್ತಿರುವ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಬಿಜೆಪಿ ಅಧಿಕಾರದಲ್ಲಿರುವ ಕಾಲದಲ್ಲಿ ಕೊಟ್ಟಿರೋದು. ನನ್ನ ಹೆಂಡ್ತಿ ಜಮೀನು 3 ಎಕರೆ 16 ಗುಂಟೆ ರಿಂಗ್ ರೋಡ್ ಪಕ್ಕದಲ್ಲಿ ಕೆಸರೆಯಲ್ಲಿದೆ. ಅದನ್ನ ನನ್ನ ಬಾಮೈದ ಮಲ್ಲಿಕಾರ್ಜುನ ನನ್ನ ಹೆಂಡ್ತಿಗೆ ಅರಿಷಿಣ ಕುಂಕುಮಕ್ಕೆ ಗಿಫ್ಟ್ ಕೊಟ್ಟಿದ್ದು. ಆ ಜಮೀನನ್ನ ನಾನು ಅಧಿಕಾರದಲ್ಲಿದ್ದಾಗ ತೆಗೆದುಕೊಂಡಿಲ್ಲ. ಮುಡಾದವರು ನಮ್ಮ ಜಮೀನನ್ನ ಅಕ್ವೈರ್ ಮಾಡಿಕೊಂಡಿರಲಿಲ್ಲಾ ಸೈಟ್ ಮಾಡಿ ಹಂಚಿಬಿಟ್ರು. ನಮಗೆ 50:50 ಕಾನೂನಿನ ಪ್ರಕಾರ ಕೊಡೋಕೆ ಒಪ್ಪಿಕೊಂಡ್ರು ಆಗ ಅಧಿಕಾರದಲ್ಲಿದ್ದು ಬಿಜೆಪಿ. ಆಗ ಬೇರೆ ಜಾಗದಲ್ಲಿ ಸಮಾನಾಂತರ ಸೈಟ್ ಕೊಟ್ಟಿದ್ದಾರೆ ಅಂತ ಬಿಜೆಪಿಯವರ ಆರೋಪಕ್ಕೆ ಉತ್ತರ ಕೊಟ್ಟಿದ್ದಾರೆ ಸಿಎಂ….
ಒಟ್ನಲ್ಲಿ ಸರ್ಕಾರದ ವಿರುದ್ದ ಹೋರಾಟಕ್ಕೆ ವಿಪಕ್ಷಗಳಿಗೆ ಮತ್ತೊಂದು ಬ್ರಹ್ಮಾಸ್ತ್ರಾ ಸಿಕ್ಕಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲಾ. ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ನಾಯಕರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನ ಮಾಡ್ತಿದ್ದು ಸಿಎಂ ಸಿದ್ದರಾಮಯ್ಯ ಇದು ನನ್ನ ಕಾಲದಲ್ಲಿ ಆಗಿದಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ. ನಾಳೆ ಸಿಎಂ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ಸಿದ್ದರಾಗಿದ್ದು ಸಿಎಂ ನಿವಾಸ ಕಾವೇರಿ ಎದುರು ಹೈಡ್ರಾಮವೇ ನಡೆಯಲಿದೆ….