ವಿಜಯಪುರ:`ಹೆಸರಲ್ಲಿ ರಾಮ ಅಂತಿದ್ದರೆ ಸಾಲದು ಗುಣ ಇರಬೇಕಲ್ಲವೆ!? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿ ಮುಖಂಡ ಸಿಟಿ ರವಿ ನೀಡಿರುವ ಹೇಳಿಕೆ ವಿಚಾರವಾಗಿ ಸಚಿವ ಎಂಬಿ ಪಾಟೀಲ್ ಅವರು ನೀಡಿರುವ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಎರಡನೇ ಬಾರಿ ಸಿಎಂ ಆಗಿದ್ದಾರೆ. ಜನ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಸಿಟಿ ರವಿ ಅವರನ್ನು ಮನೆಗೆ ಕಳುಹಿಸಿದ್ದಾರೆ. ಜನಪರ ಯೋಜನೆ ಕೊಟ್ಟಿದ್ದಾರೆ, ನುಡಿದಂತೆ ನಡೆದಿದ್ದಾರೆ.
ಇನ್ನು ಏನು ಬೇಕಂತೆ ಎಂದು ಪ್ರಶ್ನಿಸಿದರು. ಸಿಟಿ ರವಿ ಐದು ವರ್ಷ ಸರ್ಕಾರ ಇತ್ತು. ಏನೂ ಮಾಡಲಿಲ್ಲ. ಬದಲಾಗಿ ಬಜೆಟ್ ಗಿಂತ ಹೆಚ್ಚು ಖರ್ಚು ಮಾಡಿ ಲಕ್ಷಾಂತರ ಕೋಟಿ ಹೊರೆಯಿಟ್ಟು ದಿವಾಳಿ ಎಬ್ಬಿಸಿದ್ದರು. ಬಜೆಟ್ ಕಿಂತ ಎಲ್ಲಾ ಇಲಾಖೆಗಳಲ್ಲಿ 10 ಸಾವಿರ 20 ಸಾವಿರ ಕೋಟಿ ಹೆಚ್ಚಿಗೆ ಖರ್ಚು ಮಾಡಿದ್ದಾರೆ. ಎಲ್ಲ ವ್ಯವಸ್ಥೆ ಹದಗೆಡಿಸಿದ್ದಾರೆ. ಇವರು ರಾಮರಾಜ್ಯ ಮಾಡೋಕೆ ಹೋಗ್ತಾರಾ!? ಎಂದರು.
Stomach Pain: ತಿಂದ ಕೂಡಲೇ ಹೊಟ್ಟೆ ನೋವಾಗುತ್ತ.? ಹಾಗಾದ್ರೆ ಈ ಮನೆ ಮದ್ದು ಟ್ರೈ ಮಾಡಿ
ಇದೇ ರಾಮರಾಜ್ಯದ ಕಲ್ಪನೆಯೇ? ಹಿಗ್ಗಾಮುಗ್ಗಾ. ಲೂಟಿ ಹೊಡೆಯೋದು ಇದೇ ನಿಮ್ಮ ರಾಮರಾಜ್ಯದ ಕಲ್ಪನೆನಾ? ಇರುವ ಬಜೆಟ್ ನಲ್ಲಿ ಹೊಡೆಯೋದು ಸಾಲಲಿಲ್ಲ. ಬಜೆಟ್ ಗಿಂತ ಜಾಸ್ತಿ ಖರ್ಚು ಮಾಡಿ ಲೂಟಿ ಹೊಡೆದರು. ಇಂತಹವರಿಂದ ನಾವು ಕಲಿಯಬೇಕಿಲ್ಲ. ಜನ ಇವರಿಗೆ ಪಾಠ ಕಲಿಸಿ ಮನೆಗೆ ಕಳಿಸಿದ್ದಾರೆ. ಕಾಂಗ್ರೆಸ್ ಗೆ 135 ಸೀಟು ಕೊಟ್ಟು, ಜನ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.