ರೇಣುಕಾಸ್ವಾಮಿ ಕೊಲೆ ಪ್ರಕರಣದ A2 ಆರೋಪಿ ನಟ ದರ್ಶನ್ ಗೆ ದಿನದಿಂದ ದಿನಕ್ಕೆ ಬೆನ್ನು ನೋವು ಹೆಚ್ಚಾಗುತ್ತಿದೆ.
ವಾಲ್ಮೀಕಿ ನಿಗಮದ ಹಗರಣ ಕೇಸ್: ಮಾಜಿ ಸಚಿವ ನಾಗೇಂದ್ರ ಇಂದು ಜೈಲಿಂದ ಬಿಡುಗಡೆ ಸಾಧ್ಯತೆ!
ಅವರಿಗೆ ಸರಿಯಾಗಿ ಕೂರಲೂ ಸಾಧ್ಯವಾಗುತ್ತಿಲ್ಲ. ಅವರಿಗೆ ನಿಜಕ್ಕೂ ಬೆನ್ನು ನೋವು ಇದೆಯೇ? ಹೌದು ಎಂದು ವೈದ್ಯರ ವರದಿಯೇ ಹೇಳಿದೆ. ದರ್ಶನ್ ಜಾಮೀನು ಪಡೆಯಲು ಈ ರೀತಿ ಬೆನ್ನು ನೋವಿನ ಕಾರಣ ಹೇಳುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಸಂಬಂಧಿಸಿ ಬಳ್ಳಾರಿ ವಿಮ್ಸ್ ವೈದ್ಯರು ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿದ್ದರು. ಈಗ ಈ ವರದಿಯನ್ನು ಅವರು ಜೈಲಧಿಕಾರಿಗಳಿಗೆ ನೀಡಿದ್ದಾರೆ. ಬೆನ್ನುನೋವು ನಿಯಂತ್ರಣಕ್ಕೆ ಫಿಜಿಯೋ ಥೆರಪಿಯ ಸಲಹೆ ನೀಡಲಾಗಿದೆ. ಎರಡು ಸ್ಕ್ಯಾನಿಂಗ್ಗೆ ಸಲಹೆ ನೀಡಲಾಗಿದೆ. ಕೆಲವು ಮಾತ್ರೆ, ಮೂಲಾಮುಗಳನ್ನು ಬರೆದುಕೊಡಲಾಗಿದೆ.
ನರಗಳಿಂದಲೇ ದರ್ಶನ್ಗೆ ಬೆನ್ನುನೋವು ಬಂದಿದೆ ಎಂದು ನರರೋಗ ತಜ್ಞ ಡಾ. ವಿಶ್ವನಾಥ್ ವರದಿಯಲ್ಲಿ ಹೇಳಿದ್ದಾರೆ. ಇಂದಿನಿಂದಲೇ ಜೈಲಿನಲ್ಲಿ ದರ್ಶನ್ಗೆ ಫಿಜಿಯೋ ಥೆರಪಿ ನೀಡಲು ಜೈಲಾಧಿಕಾರಿಗಳು ನಿರ್ಧರಿಸಿದ್ದಾರೆ. ವಿಮ್ಸ್ ವೈದ್ಯರಿಂದ ಫಿಜಿಯೋ ಥೆರಪಿ ನಡೆಯಲಿದೆ. ಮೆಡಿಕಲ್ ಬೆಡ್, ಚೇರ್ ನೀಡುವಂತೆಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಮೆಡಿಕಲ್ ಬೆಡ್, ಚೇರ್, ವೈದ್ಯಕೀಯ ಸಲಕರಣೆ ಹಾಗೂ ಕೆಲವು ಮಾತ್ರೆಗಳ ನೀಡುವಂತೆ ಕೋರಲಾಗಿದೆ. ಜೈಲು ವಿಭಾಗದ ಹಿರಿಯ ಅಧಿಕಾರಿಗಳ ಅನುಮತಿ ಸಿಕ್ಕ ಬಳಿಕ ಇದನ್ನು ದರ್ಶನ್ಗೆ ನೀಡುವ ಸಾಧ್ಯತೆ ಇದೆ.
ದರ್ಶನ್ ಅವರು ಈಗ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.