ಕೆಲವೊಬ್ಬರಿಗೆ ಬೆಳಿಗ್ಗೆ ಎದ್ದೇಳೋದು ಅಂದ್ರೆ ಒಂಥರ ಹಿಂಸೆ. ರಾತ್ರಿ ಮಲಗುವಾಗ ಬೆಳಿಗ್ಗೆ ಬೇಗ ಏಳಬೇಕು ಎನ್ನುವ ಜನರು, ಬೆಳಿಗ್ಗೆ ಆಗುತ್ತಿದ್ದಂತೆ ಹಿಂಸೆ ಪಡುತ್ತಾರೆ.
ಮನ್ ಮುಲ್ ಚುಕ್ಕಾಣಿ ಹಿಡಿಯಲು ಕೈ ನಾಯಕರ ಕಸರತ್ತು: ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಗೌಪ್ಯ ಸಭೆ
ಹೀಗಾಗಿ ಬೆಳಗ್ಗೆ ಏಳಲು ಕಷ್ಟಪಡುವವರಿಗಾಗಿಯೇ ಇಂದಿನ ಲೇಖನ ಪ್ರಯೋಜನಕಾರಿಯಾಗಲಿದ್ದು ಈ ಟಿಪ್ಸ್ಗಳನ್ನು ಅಳವಡಿಸಿಕೊಂಡರೆ ನೀವು ಕೊಂಚವೂ ಪ್ರಯಾಸವಿಲ್ಲದೆ ಬೇಗ ಏಳಬಹುದಾಗಿದೆ.
ನಿಮ್ಮ ಬಳಿ ನೀವು ಅಲರಾಮ್ ಗಡಿಯಾರ ಇರಿಸಿದರೆ ಅದನ್ನು ನಿಲ್ಲಿಸಿ ಪುನಃ ಮಲಗುವುದೇ ಅಭ್ಯಾಸವಾಗಿಬಿಡುತ್ತದೆ. ಆದರೆ ಕೊಂಚ ದೂರದಲ್ಲಿ ಅಲರಾಮ್ ಗಡಿಯಾರ ಇಡುವುದರಿಂದ ನೀವು ಮಲಗ್ಗಿದ್ದಲ್ಲಿಂದ ಎದ್ದು ಬಂದು ಅಲರಾಮ್ ನಿಲ್ಲಿಸಬೇಕು, ಇದರಿಂದ ನೀವು ಎಚ್ಚರಗೊಳ್ಳುತ್ತೀರಿ.
ಇನ್ನು ಅಲರಾಮ್ ಸದ್ದನ್ನು ಕೊಂಚ ಗಟ್ಟಿಯಾದ ಹೆಚ್ಚಿನ ಮ್ಯೂಸಿಕ್ ಇರುವುದಕ್ಕೆ ಮಾರ್ಪಡಿಸಿ. ಇದರಿಂದ ನೀವು ಮಲಗಿದ್ದರೂ ಅಲರಾಮ್ ನಿಲ್ಲಿಸುವಂತೆ ಈ ಸದ್ದು ಪ್ರೇರೇಪಿಸುತ್ತದೆ.
ಪುನಃ ಹಾಸಿಗೆಗೆ ಹೋಗಿ ಮಲಗುವುದನ್ನು ತಪ್ಪಿಸಿ
ಇನ್ನು ಅಲರಾಮ್ ನಿಲ್ಲಿಸಿದ ನಂತರ ಕೂಡ ಮರಳಿ ಹಾಸಿಗೆಗೆ ಹೋಗುವ ನಿಮ್ಮ ಅಭ್ಯಾಸಕ್ಕ ಕಡಿವಾಣ ಹಾಕಿ. ಎದ್ದಾಯಿತು ಇನ್ನು ಮುಂದಿನ ಕೆಲಸಕ್ಕೆ ಮುಂದುವರಿಯುವ ಎಂಬ ಸಂಕೇತವನ್ನು ಮೆದುಳಿಗೆ ನೀಡಿ ಇದರಿಂದ ನೀವು ಎಚ್ಚರವಾಗಿರಲು ಸುಲಭವಾಗಿರುತ್ತದೆ. ಕರ್ಟನ್ ತೆರೆದು ಸೂರ್ಯನ ಬೆಳಕು ನಿಮ್ಮನ್ನು ಸ್ಪರ್ಶಿಸುವಂತೆ ಮಾಡಿ. ಮುಖಕ್ಕೆ ತಣ್ಣಗಿನ ನೀರಿನ ಸ್ಪರ್ಶ ಮಾಡಿ ಇದರಿಂದ ದೇಹದ ಆಂತರಿಕ ಗಡಿಯಾರಕ್ಕೆ ಬೆಳಗಾಯಿತು ಎಂದು ಸೂಚನೆ ದೊರೆಯುತ್ತದೆ.
ಎದ್ದ ತಕ್ಷಣ ತಣ್ಣಿನ ಶವರ್ ಮಾಡಿ
ತಣ್ಣೀರಿನ ಸ್ನಾನ ಒಂದು ಕ್ಷಣ ಯೋಚಿಸುವಂತೆ ಮಾಡಿದರೂ ನಿದ್ದೆಯ ಮಂಪರನ್ನು ಹೋಗಲಾಡಿಸುವ ದಿವ್ಯೌಷಧವಾಗಿದೆ. ಲೈಫ್ಸ್ಟೈಲ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾಗಿರುವ ಒಂದು ಲೇಖನದ ಪ್ರಕಾರ ತಣ್ಣೀರಿನ ಸಂಪರ್ಕಕ್ಕೆ ಬರುವುದು ನಿಮ್ಮ ನರ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಇದು ಮೂಡ್ ಅನ್ನು ವರ್ಧಿಸುತ್ತದೆ ಹಾಗೂ ದಿನವಿಡೀ ನಿಮ್ಮನ್ನು ಎನರ್ಜಟಿಕ್ ಆಗಿರಿಸುತ್ತದೆ.
ರಾತ್ರಿ ಮಿತವಾಗಿ ಆಹಾರ ಸೇವಿಸಿ ಹಾಗೂ ಬೇಗನೇ ಮಲಗಿ
ಬೆಳಗ್ಗೆ ಬೇಗನೇ ಏಳಲು ನೀವು ರಾತ್ರಿಯೇ ಸಿದ್ಧತೆ ಮಾಡಬೇಕು. ರಾತ್ರಿ ಮಲಗುವ ಮುನ್ನ ಭರ್ಜರಿ ಊಟ ಮಾಡುವುದನ್ನು ತಪ್ಪಿಸಿ, ಆದಷ್ಟು ಮಿತ ಭೋಜನ ಮಾಡಿ. ಇನ್ನು ರಾತ್ರಿ ಬೇಗನೇ ಮಲಗುವುದು ಕೂಡ ಬೆಳಗ್ಗೆ ಬೇಗನೇ ಏಳಲು ಸಹಾಯ ಮಾಡುತ್ತದೆ. ಯುಎಸ್ ನ್ಯಾಶನಲ್ ವೆಬ್ಸೈಟ್ ಪ್ರಕಾರ 7-9 ಗಂಟೆಗಳ ನಿದ್ದೆಯು ಹೆಚ್ಚಿನ ವಯಸ್ಕರಿಗೆ ಅಗತ್ಯವಾಗಿದೆ, ಹಾಗಾಗಿ ರಾತ್ರಿ ಬೇಗನೇ ಮಲಗಲು ಪ್ರಯತ್ನಿಸಿ.
ಕೆಲವರು ವಾರಾಂತ್ಯಗಳಲ್ಲಿ ಗಢದ್ದಾಗಿ ನಿದ್ದೆ ಮಾಡುವ ಅಭ್ಯಾಸವನ್ನಿರಿಸಿಕೊಂಡಿರುತ್ತಾರೆ ಆದರೆ ಇದು ದೇಹದ ಲಯಕ್ಕೆ ಭಂಗವನ್ನುಂಟು ಮಾಡಿ, ವಾರದ ದಿನಗಳಲ್ಲಿ ಬೇಗನೇ ಏಳುವ ನಿಮ್ಮ ಅಭ್ಯಾಸಕ್ಕೆ ತೊಂದರೆಯನ್ನುಂಟು ಮಾಡಬಹುದು. ಹಾಗಾಗಿ ವಾರಾಂತ್ಯಗಳಲ್ಲೂ ಒಂದೇ ಸಮಯಕ್ಕೆ ಮಲಗುವ ಅಭ್ಯಾಸ ರೂಢಿಸಿ. ಮೊದ ಮೊದಲಿಗೆ ಇದು ಕಷ್ಟವೆಂದೆನಿಸಿದರೂ ಅಭ್ಯಾಸವಾದಂತೆ ಈ ದಿನಚರಿಗೆ ದೇಹ ಹೊಂದಿಕೊಳ್ಳುತ್ತದೆ.